ಇವರೆಲ್ಲ ದುಡಿಯದೇ ಕೋಟ್ಯಧಿಪತಿಗಳು; ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ರೆ ಕೋಟಿಗಟ್ಟಲೆ ಹಣ!

Published on

spot_img
spot_img

ವಿವೇಕವಾರ್ತೆ : ಬ್ಯಾಂಕ್ ಬ್ಯಾಲೆನ್ಸ್​ನಲ್ಲಿ ಕೋಟಿ ರೂಪಾಯಿಯನ್ನು ನೋಡಬೇಕು ಎಂದರೆ ಸಂಪಾದನೆ ಅಂಥ ದೊಡ್ಡ ಮಟ್ಟದಲ್ಲೇ ಇರಬೇಕು. ಆದರೆ ಇಲ್ಲಿ ಕೆಲವರು ದುಡಿಯದೇ ಕೋಟ್ಯಧಿಪತಿಗಳಾಗಿದ್ದಾರೆ. ಬ್ಯಾಲೆನ್ಸ್​ ಚೆಕ್​ ಮಾಡಿದಾಗ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇರುವುದು ಕಂಡುಬಂದಿದೆ.

ತಮಿಳುನಾಡಿನ ಮೂವರು ಹೀಗೊಮ್ಮೆ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ. ಇಲ್ಲಿನ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುವ ಮೊಹಮ್ಮದ್ ಇದ್ರಿಸ್ ಎಂಬಾತ ತನ್ನ ಗೆಳೆಯನಿಗೆ 2 ಸಾವಿರ ರೂ. ಟ್ರಾನ್ಸ್​ಫರ್ ಮಾಡುತ್ತಿದ್ದಂತೆ ಕೋಟ್ಯಧಿಪತಿ ಆಗಿದ್ದಾನೆ. ಅರ್ಥಾತ್, ಅ.6ರಂದು 2 ಸಾವಿರ ರೂ. ಕಳುಹಿಸಿ ಬ್ಯಾಲೆನ್ಸ್ ಚೆಕ್​ ಮಾಡಿದಾಗ ಖಾತೆಯಲ್ಲಿ 753 ಕೋಟಿ ರೂ. ಇರುವುದು ಕಂಡುಬಂದಿದೆ.

ಕೋಟಕ್ ಮಹಿಂದ್ರ ಬ್ಯಾಂಕ್​ನಲ್ಲಿನ ಇವರ ಖಾತೆಯಲ್ಲಿ ಈ ಹಣ ಕಂಡುಬಂದಿದ್ದು, ಅಚ್ಚರಿಗೊಂಡ ಇವರು ಈ ವಿಷಯವನ್ನು ಬ್ಯಾಂಕ್​ ಗಮನಕ್ಕೆ ತಂದಿದ್ದರು. ಬಳಿಕ ಬ್ಯಾಂಕ್​ನವರು ಇವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಅಂದಹಾಗೆ ತಮಿಳುನಾಡಿನಲ್ಲಿ ಇದು ಮೊದಲ ಪ್ರಕರಣವೇನಲ್ಲ. ಈಗಾಗಲೇ ಇನ್ನಿಬ್ಬರಿಗೂ ಇದೇ ರೀತಿ ಕೋಟಿಗಟ್ಟಲೆ ಹಣ ಖಾತೆಯಲ್ಲಿ ಜಮೆ ಆಗಿರುವುದು ಕಂಡುಬಂದಿದೆ. ಬ್ಯಾಲೆನ್ಸ್ ಚೆಕ್​ ಮಾಡಿಕೊಂಡಿದ್ದ ಅವರಿಗೂ ಅಚ್ಚರಿ ಉಂಟಾಗಿತ್ತು.

ತಮಿಳುನಾಡು ಮರ್ಕಂಟೈಲ್ ಬ್ಯಾಂಕ್​ನಲ್ಲಿ ಕಾತೆ ಹೊಂದಿರುವ ಚೆನ್ನೈನ ರಾಜಕುಮಾರ್​ ಎಂಬವರ ಖಾತೆಯಲ್ಲಿ 9 ಸಾವಿರ ಕೋಟಿ ರೂ. ಇರುವುದು ಕಂಡುಬಂದಿತ್ತು. ಆದರೆ ಕೂಡಲೇ ಎಚ್ಚೆತ್ತ ಬ್ಯಾಂಕ್ ತಕ್ಷಣ ಆ ಮೊತ್ತವನ್ನು ವಾಪಸ್ ಪಡೆದುಕೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ತಂಜಾವೂರಿನ ಗಣೇಶನ್ ಎಂಬವರ ಖಾತೆಯಲ್ಲಿ 756 ಕೋಟಿ ರೂ. ಇರುವುದು ಕಂಡುಬಂದಿತ್ತು.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!