ವಿವೇಕವಾರ್ತೆ : ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ದಲಿತ ಸಮುದಾಯದ ವೃದ್ಧರೊಬ್ಬರ ಮೇಲೆ ಮೇಲ್ವರ್ಗದ ಕೆಲವು ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ಕುರಾರಿ ಗಿರಿಧರ್ ಶಾ ಗ್ರಾಮದಲ್ಲಿ 66 ವರ್ಷದ ಅಚ್ಚೆಬರ್ ಕುಮಾರ್ ಎಂಬುವವರ ಮೇಲೆ ಭೀಕರ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಸತ್ತ ಹಸುವಿನ ಕಳೇಬರವನ್ನು ಎತ್ತಲು ನಿರಾಕರಿಸಿದ ಕಾರಣಕ್ಕೆ ವೃದ್ಧನನ್ನು ಅಮಾನುಷವಾಗಿ ಥಳಿಸಲಾಗಿದೆ. ಅವರ ಕಾಲಿನ ಮೂಳೆ ಮುರಿದಿದ್ದು, ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಅಬ್ಬಾ.. ನಿಜವಾದ ವಕೀಲನಂತೆ ನಟಿಸಿ 26 ಕೇಸ್’ಗಳನ್ನು ಗೆದ್ದಿದ್ದ ನಕಲಿ ಲಾಯರ್ ಅರೆಸ್ಟ್..!
ಹಲವು ಗಂಟೆಗಳ ಕಾಲ ಹಲ್ಲೆ ನಡೆಸಿದ ಬಳಿಕ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಚ್ಚೆಬರ್ ಕುಮಾರ್ ಅವರನ್ನು ಮೇಲ್ವರ್ಗದ ಜನರು ಕಾಲುವೆಯೊಂದರ ಬಳಿ ಎಸೆದು ಹೋಗಿದ್ದರು ಎಂದು ದಿನಗೂಲಿ ಕಾರ್ಮಿಕರಾಗಿರುವ ಸಂತ್ರಸ್ತನ ಮಗ ಕೃಷ್ಣ ಕುಮಾರ್ ತಿಳಿಸಿದ್ದಾರೆ. “ಅವರು ನನ್ನ ತಂದೆಯನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡಿದ್ದಾರೆ. ಅಲ್ಲಿ ನಡೆದಿದ್ದು ಏನು ಎಂದು ಪ್ರತಿಯೊಬ್ಬರೂ ನೋಡಿದ್ದಾರೆ. ಆದರೆ ಭಯದಿಂದಾಗಿ ಅದರ ಬಗ್ಗೆ ಒಬ್ಬರೂ ಮಾತನಾಡುವ ಧೈರ್ಯ ಮಾಡುತ್ತಿಲ್ಲ” ಎಂದು ಅವರು ಹೇಳಿದ್ದಾರೆ. ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?
ಸಂತ್ರಸ್ತನ ಮಗ ಕೃಷ್ಣ ಕುಮಾರ್ ನೀಡಿದ ದೂರಿನ ಅನ್ವಯ ಪೊಲೀಸರು ಆಶೀಶ್ ಸಿಂಗ್ ಎಂಬ 27 ವರ್ಷದ ವ್ಯಕ್ತಿ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ಘಾಸಿ ಮಾಡುವುದು), 325 (ಗಂಭೀರ ಗಾಯಕ್ಕೆ ಕಾರಣವಾಗುವುದು) ಮತ್ತು 504 (ಶಾಂತಿ ಕಡಲು ಪ್ರಚೋದನೆ ನೀಡುವ ಉದ್ದೇಶಪೂರ್ವಕ ಅವಮಾನ) ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.