ಮದುವೆಯಾದ ಒಂದೇ ಗಂಟೆಯಲ್ಲಿ ವಧುವಿಗೆ ಡೈವೋರ್ಸ್ ನೀಡಿದ ವರ..! ಮುಂದೇ ಆಗಿದ್ದೇನು..?

ಸಾಮಾನ್ಯವಾಗಿ ಹೀಗೆ ಅರ್ಧದಲ್ಲೇ ಮದುವೆ ನಿಂತು ಹೋದರೆ, ನಂತ್ರ ಆ ಹುಡುಗಿಗೆ ಮತ್ತೆ ಸಂಬಂಧ ಕೂಡಿಬರುವುದು, ಮದುವೆಯಾಗುವುದು ಕಷ್ಟ. ಆದರೂ ಜನರು ಸಂಬಂಧ ಬೇಡ ಎನ್ನುವಾಗ, ಮದುವೆ ಕ್ಯಾನ್ಸಲ್ ಮಾಡುವಾಗ ಇಷ್ಟೆಲ್ಲಾ ಯೋಚಿಸುವುದಿಲ್ಲ. ಆ ನಂತರ ಹುಡುಗಿಯೇ ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ.

ಹೀಗಿರುವಾಗ ಉತ್ತರಪ್ರದೇಶದ ಸಂಭಾಲ್‌ನಲ್ಲಿ ಇದೆಲ್ಲದಕ್ಕೂ ತದ್ವಿರುದ್ಧವಾಗಿರುವ ಘಟನೆಯೊಂದು ನಡೆದಿದೆ. ಮಂಟಪದಲ್ಲೇ ಹುಡುಗ, ಹುಡುಗಿಯೊಂದಿಗೆ ಮದುವೆ ಬೇಡವೆಂದು ಹೇಳಿದರೂ ತಕ್ಷಣ ತನ್ನ ತಮ್ಮನ ಜೊತೆ ಮದುವೆ ಮಾಡಿಸಲು ವ್ಯವಸ್ಥೆ ಮಾಡಿದ್ದಾನೆ.

ಮದ್ವೆಯಾದಒಂದೇಗಂಟೆಯೊಳಗೆಡಿವೋರ್ಸ್ಆಯ್ತು
ಉತ್ತರ ಪ್ರದೇಶದ ಸಂಭಾಲ್‌ನ ಅಸ್ಮೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥಾ ವಿಚಿತ್ರ ಘಟನೆಯೊಂದು ನಡೆದಿದೆ. ಅಸ್ಮೋಲಿ ಪ್ರದೇಶದ ಹಳ್ಳಿಯೊಂದರಲ್ಲಿ ಯುವಕನೊಬ್ಬನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ದಿನಾಂಕವೂ ನಿಗದಿಯಾಗಿ ಅದ್ಧೂರಿಯಾಗಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ವರ-ವಧು ಹಾಗೂ ಮನೆ ಮಂದಿ, ಸಂಬಂಧಿಕರು ಎಲ್ಲರೂ ರೆಡಿಯಾಗಿದ್ದರು. ಮದುವೆಯೂ ಧಾಂ ಧೂಂ ಎಂದು ನಡೆದೇ ಹೋಯಿತು. ಆದರೆ ಇದೆಲ್ಲದರ ಮಧ್ಯೆ ದೊಡ್ಡ ಹೈಡ್ರಾಮಾವೇ ನಡೆದು ಹೋಯ್ತು. ವರನ ಮೊದಲನೇ ಪತ್ನಿ ಮದುವೆಗೆ ವಿರೋಧ ವ್ಯಕ್ತಪಡಿಸಿದಳು. ಹುಡುಗಿಯನ್ನು ಬಿಟ್ಟುಬಿಡುವಂತೆ ಒತ್ತಾಯಿಸಿದಳು. ಇದರಿಂದ ವರ, ತಕ್ಷಣಕ್ಕೇ ಎಂದರೆ ಮದುವೆಯಾದ ಒಂದೇ ಗಂಟೆಯಲ್ಲಿ ವಧುವಿಗೆ ಡೈವೋರ್ಸ್ ನೀಡಬೇಕಾಯಿತು.

ಆದರೆ ಹೀಗೆ ಮದುವೆ ಮಂಟಪದಲ್ಲೇ ಹುಡುಗಿಗೆ ಡಿವೋರ್ಸ್ ನೀಡಿರುವುದು ಎಲ್ಲರನ್ನೂ ಚಕಿತಗೊಳಿಸಿತು. ಸ್ವತಃ ಹುಡುಗಿಯೇ ಮುಂದೇನೆಂದು ತಿಳಿಯದೆ ಕಂಗಾಲಾದಳು. ಆದರೆ ವರ, ಹುಡುಗಿಗೆ ಡಿವೋರ್ಸ್ ನೀಡಿ ಎಲ್ಲರಂತೆ ಎದ್ದು ಹೋಗಲ್ಲಿಲ್ಲ. ಬದಲಿಗೆ ತನ್ನ ಕಿರಿಯ ಸಹೋದರನೊಂದಿಗೆ ಆಕೆಯ ಮದುವೆ ಮಾಡಿಸಿದನು.

ತಮ್ಮನಜೊತೆಮದುವೆಮಾಡಿಸಿಯುವತಿಗೆನ್ಯಾಯಕೊಡಿಸಿದವರ
ಅಮ್ರೋಹಾ ಜಿಲ್ಲೆಯ ಸೈದ್ಗನಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ನಿವಾಸಿಯಾಗಿರುವ ಯುವಕ ನಾಲ್ಕು ವರ್ಷಗಳ ಹಿಂದೆ ಅದೇ ಪ್ರದೇಶದ ಯುವತಿಯನ್ನು ವಿವಾಹವಾಗಿದ್ದನು. ಹೀಗಾಗಿ ಆ ಪತ್ನಿ ಯುವಕ ಮತ್ತೊಂದು ಮದುವೆಯಾಗುವುದಕ್ಕೆ ಅಡ್ಡಿಪಡಿಸಿದಳು. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಪೊಲೀಸರ ಕ್ರಮವನ್ನು ತಪ್ಪಿಸಲು ಪಂಚಾಯಿತಿ ಕುಳಿತುಕೊಳ್ಳಲಾಯಿತು. ಕೊನೆಗೂ ಪಂಚಾಯಿತಿ ಆದೇಶದ ಮೇರೆಗೆ ಈ ವಿಚಿತ್ರ ನಿರ್ಧಾರ ಕೈಗೊಳ್ಳಲಾಯಿತು.

ಯುವಕನು ಹೊಸದಾಗಿ ಮದುವೆಯಾದ ಹುಡುಗಿಗೆ ವಿಚ್ಛೇದನ (Divorce) ನೀಡಬೇಕು ಮತ್ತು ಅವಳನ್ನು ವರನ ಕಿರಿಯ ಸಹೋದರನಿಗೆ ಮದುವೆಯಾಗಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ಪಂಚಾಯತ್ ನಿರ್ಧಾರದ ನಂತರ, ಪತಿ ಒಂದು ಗಂಟೆಯೊಳಗೆ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ಅದರ ನಂತರ, ಹುಡುಗಿ ವರನ ಕಿರಿಯ ಸಹೋದರನೊಂದಿಗೆ ವಿವಾಹವಾದರು. ನಿಕಾಹ್ ಆದ ಒಂದು ಗಂಟೆಯೊಳಗೆ ವಿಚ್ಛೇದನ ಮತ್ತು ಮರುಮದುವೆ ಎಲ್ಲೆಡೆ ಚರ್ಚೆಯಾಗಿದೆ.

error: Content is protected !!