spot_img
spot_img
spot_img
spot_img
spot_img
spot_img

ಮದುವೆ ಆಗಿ 21 ದಿನಕ್ಕೆ ತವರು ಮನೆ ಸೇರಿದ ಪತ್ನಿ – ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ!

Published on

spot_img

ಚಿಕ್ಕಮಗಳೂರು:- ತಾಲೂಕಿನ ತೇಗೂರು ಗ್ರಾಮದಲ್ಲಿ ಮದುವೆಯಾಗಿದ್ದ ನವವಿವಾಹಿತೆ 21 ದಿನಕ್ಕೆ ತಾಳಿ ಬಿಚ್ಚಿ ಕೊಟ್ಟು ಹೋಗಿದ್ದಕ್ಕೆ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.

ವಿನೋದ್ ರಾಜ್ ಮೃತ ಯುವಕ. ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿದ್ದ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಇದೀಗ ಆತನ ಸಾವಿನಿಂದ ಕುಟುಂಬ ಶೋಕದಲ್ಲಿ ಮುಳುಗಿದೆ.

ಮೃತ ಯುವಕ ಅದೇ ಊರಿನ ಯುವತಿಯೋರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಕಳೆದ ಡಿ.10 ರಂದು ಇಬ್ಬರ ವಿವಾಹ ಸಹ ಆಗಿತ್ತು. ಅನ್ಯಜಾತಿಯ ಇವರ ಪ್ರೀತಿಗೆ ಹುಡುಗನ ಮನೆಯಿಂದ ಯಾವುದೇ ವಿರೋಧವಿರಲಿಲ್ಲ. ಯುವತಿ ಮನೆಯಿಂದ ಇದಕ್ಕೆ ತೀವ್ರ ವಿರೋಧವಿತ್ತು. ಯುವಕನ ಮನೆಯಲ್ಲಿ ಮಾಂಸ ತಿನ್ನುತ್ತಾರೆ. ದೇವರು ಒಪ್ಪಿಲ್ಲ, ಎಡಗಡೆ ಅಪ್ಪಣೆಯಾಗಿದೆ ಎಂದು ಹೇಳಿದ್ದರಂತೆ. ಇಷ್ಟಾದರೂ ಯುವತಿ ತನ್ನ ಮನೆಯವರ ಮಾತನ್ನು ತಿರಸ್ಕರಿಸಿ ಯುವಕನನ್ನು ಮದುವೆಯಾಗಿದ್ದಳು.

ಮದುವೆಯಾದ ಕೆಲವೇ ದಿನಗಳಲ್ಲಿ ತವರು ಮನೆಗೆ ಹೋದ ಹುಡುಗಿ, ತಾಯಿ ಮಾತು ಕೇಳಿ ಬೇರೆ ವರಸೆ ತೆಗೆದಿದ್ದಳು ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಪೊಲೀಸ್ (Police) ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದ ಯುವತಿ, ನನಗೆ ಗಂಡನೇ ಬೇಕೆಂದು ಬರೆದುಕೊಟ್ಟು ಬಂದಿದ್ದಳು. ಬಂದ ಮೇಲೆ ನವದಂಪತಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೂಡ ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಅಮ್ಮನನ್ನ ನೋಡಿಕೊಂಡು ಬರ್ತೀನಿ ಎಂದು ಹೋದ ಯುವತಿ ಮತ್ತೆ ಯುವಕನ ಮನೆಗೆ ಬರಲೇ ಇಲ್ಲ. ಡಿ.31 ರಂದು, ಪೊಲೀಸ್ ಠಾಣೆಯಲ್ಲಿ ಮತ್ತೆ ಯುವತಿ ಯುವಕನ ವಿರುದ್ಧವೇ ದೂರು ನೀಡಿ ಒಡವೆ, ತಾಳಿ ಎಲ್ಲಾ ಬಿಚ್ಚಿ ಕೊಟ್ಟಿದ್ದಳು.

ಈ ಘಟನೆಯಾದ ಬಳಿಕ ಯುವಕ ಒಂದು ತಿಂಗಳಿನಿಂದ ಮೌನಕ್ಕೆ ಜಾರಿದ್ದ. ಬಳಿಕ ಇದೇ ನೋವಿನಲ್ಲಿ ಕಾರ್ತಿಕ್ ಸೂಸೈಡ್ ಮಾಡಿಕೊಂಡಿದ್ದಾನೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!