ಸಾವಿರ ರೂಪಾಯಿ ಅಲ್ಲ 107 ರೂಪಾಯಿಯಲ್ಲಿಯೇ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಮಾರ್ಚ್ ತಿಂಗಳ ಅಂತ್ಯದಿಂದ ಎಲ್ಲೆಡೆ ಭಾರಿ ಚರ್ಚೆ ಆಗುತ್ತಿರುವ ವಿಷಯ ಏನೆಂದರೆ ಎಲ್ಲರ ಪಾನ್ ಕಾರ್ಡ್ ಜೊತೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಲೇಬೇಕು ಎನ್ನುವುದು. ಸರ್ಕಾರ ದಿಢೀರ್ ಎಂದು ಈ ನಿಯಮ ಜಾರಿಗೆ ತಂದಿಲ್ಲ. 2017ರಲ್ಲಿಯೇ ಇದರ ಬಗ್ಗೆ ಆಜ್ಞೆ ಹೊರಡಿಸಿತ್ತು ಕಳೆದ ಡಿಸೆಂಬರ್ ಅಂತ್ಯದವರೆಗೂ ಕೂಡ ಇದಕ್ಕೆ ಸುದೀರ್ಘ ಕಾಲಾವಕಾಶ ಕೂಡ ನೀಡಿತ್ತು.
ಆದರೆ ಹೆಚ್ಚಿನ ಜನರಿಗೆ ಈ ಮಾಹಿತಿ ಇನ್ನು ತಲುಪಿಲ್ಲ ಎನ್ನುವ ಕಾರಣಕ್ಕಾಗಿ ಡಿಸೆಂಬರ್ ತಿಂಗಳಿಂದ ಮಾರ್ಚ್ 31ರವರೆಗೆ ಮೂರು ತಿಂಗಳ ಹೆಚ್ಚಿನ ಕಾಲವಕಾಶ ನೀಡಿ ಈ ಬಾರಿ 1,000.ರೂ ದಂಡ ಕಟ್ಟಬೇಕು ಎಂದು ಘೋಷಣೆ ಮಾಡಿತು. ಆನಂತರ ಜನ ಇದರ ಬಗ್ಗೆ ಬಾರಿ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಆರ್ಥಿಕ ಚಟುವಟಿಕೆಗಳಿಗೂ ಕೂಡ ಪಾನ್ ಕಾರ್ಡ್ ಬಹಳ ಮುಖ್ಯ. ಮಾರ್ಚ್ 31ರ ಒಳಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿತ್ತು.
ಹೀಗಾದರೆ ಪ್ಯಾನ್ ಕಾರ್ಡ್ ಇಲ್ಲದೆ ಯಾವ ಆರ್ಥಿಕ ವ್ಯವಹಾರವೂ ಕೂಡ ನಡೆಯುವುದಿಲ್ಲ. ಮತ್ತು ಮುಂದೆ ಅದನ್ನು ಸರಿಮಾಡಿಸಿಕೊಳ್ಳುವುದಕ್ಕೆ 10,000 ದಂಡ ಕಟ್ಟಬೇಕು ಎನ್ನುವುದು ಜನಸಾಮಾನ್ಯರು ಕೆರಳುವಂತೆ ಮಾಡಿತ್ತು. ಸರ್ಕಾರ ಕೊನೆ ಸಮಯದಲ್ಲಿ ಸಾಕಷ್ಟು ಸರ್ವರ್ ಪ್ರಾಬ್ಲಮ್ ಆದದ್ದನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಮತ್ತೊಮ್ಮೆ ಜೂನ್ ತಿಂಗಳ 30ನೆ ತಾರೀಖಿನವರೆಗೆ 1000ರೂ ದಂಡದ ಸಮೇತ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡಲು ಕಡೆ ಅವಕಾಶ ನೀಡಿದೆ.
ಈಗ ಎಲ್ಲರೂ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮುಗಿ ಬೀಳುತ್ತಿದ್ದಾರೆ. ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000.ರೂ ದಂಡ ಎನ್ನುವುದು ದೊಡ್ಡ ಮೊತ್ತದ ಹಣ ಎನ್ನುವುದು ಸಾಕಷ್ಟು ಜನರ ಅಳಲು. ನೀವು ಈ ದಂಡ ತೆರದೇ 107ರೂ. ಕಟ್ಟುವ ಮೂಲಕ ನಿಮ್ಮ ಪಾನ್ ಕಾರ್ಡ್ ಅನ್ನು ಯಶಸ್ವಿಯಾಗಿ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು. ಅದಕ್ಕಾಗಿ ನೀವು ಈ ಕೆಲಸ ಮಾಡಬೇಕು ಅದೇನೆಂದರೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಆಪ್ಷನ್ ಇರುತ್ತದೆ.
ಭಾರತೀಯ ನಾಗರಿಕರು ಹೊಸ ಪಾನ್ ಕಾರ್ಡ್ ಪಡೆಯುವುದು, ವಿದೇಶಿಗರಿಗೆ ಪಾನ್ ಕಾರ್ಡ್ ಮತ್ತು ಪಾನ್ ಕಾರ್ಡನ್ನು ಲೋಪಗಳನ್ನು ಸರಿಪಡಿಸುವುದು ಈ ಮೂರನೇ ಆಪ್ಷನ್ ಆದ ಕಲೆಕ್ಷನ್ ಇನ್ ಎಕ್ಸಿಸ್ಟಿಂಗ್ ಪಾನ್ ಡಾಟಾ ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಿ. ಆಗ ನಿಮ್ಮ ಪಾನ್ ಕಾರ್ಡ್ ಅಲ್ಲಿ ಯಾವುದಾದರೂ ಸಣ್ಣ ಪುಟ್ಟ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ಹೆಸರು, ಹುಟ್ಟಿದ ದಿನಾಂಕ ಈ ರೀತಿ ಯಾವುದೇ ದೋಷ ಇಲ್ಲ ಎಂದರೆ ನೀವು ಹೊಸ ಫೋಟೋ ಆದರೂ ಅಪ್ಡೇಟ್ ಮಾಡಿಸಿಕೊಳ್ಳಬೇಕು
ಅದಕ್ಕಾಗಿ ನೀವು 107 ಫೀಸ್ ಕಟ್ಟಬೇಕು ಮತ್ತು ಕೆಲ ದಾಖಲೆಗಳನ್ನು ಹಾಗೂ ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕು. ಈ ಕ್ರಿಯೆ ಮಾಡಲು ಅಗತ್ಯ ದಾಖಲೆಗಳಾಗಿ ಆಧಾರ್ ಕಾರ್ಡ್ ಕೊಡಲೇಬೇಕಾದ ಕಾರಣ ಆಟೋಮೆಟಿಕ್ ಆಗಿ ನಿಮ್ಮ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ. ಇದನ್ನು ಯಾವುದೇ ಕಂಪ್ಯೂಟರ್ ಸೆಂಟರ್ ಅಥವಾ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ಕೊಡುವ ಮೂಲಕ ಮಾಡಿಸಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.