ವಿವೇಕವಾರ್ತೆ : ದಿಲ್ಲಿ ಮೆಟ್ರೋ ವಿವಾದಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತದೆ. ಈಗ ಮತ್ತೊಂದು ಕೆಟ್ಟ ಕಾರಣಕ್ಕೆ ದಿಲ್ಲಿ ಮೆಟ್ರೋ ಸುದ್ದಿಯಲ್ಲಿದೆ. ದಿಲ್ಲಿ ಮೆಟ್ರೋ ರೈಲಿನ ಒಳಗೆ ಯುವ ಜೋಡಿಯೊಂದು ಅನುಚಿತ ವರ್ತನೆ ತೋರಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆಯೇ ಯುವ ಜೋಡಿಯೊಂದು ತಂಪು ಪಾನಿಯ ಮತ್ತು ನೂಡಲ್ಸ್ ಅನ್ನು ಪರಸ್ಪರ ಬಾಯಿಯಲ್ಲೇ ಹಂಚಿಕೊಂಡಿದೆ. ಈ ಅನುಚಿತ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಹಲವರು ಈ ಜೋಡಿಗೆ ಶಿಕ್ಷೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ನಡುವೆಯೇ ಯುವ ಜೋಡಿ ಪೈಕಿ ಪ್ರಿಯಕರ ಮೊದಲಿಗೆ ತಂಪು ಪಾನೀಯವನ್ನು ತನ್ನ ಪ್ರೇಯಸಿಗೆ ಕುಡಿಸುತ್ತಾನೆ. ನಂತರ ಆಕೆ ತನ್ನ ಬಾಯಿಯಿಂದ ಆ ಪಾನೀಯವನ್ನು ಪ್ರಿಯಕರನ ಬಾಯಿಗೆ ಉಗುಳುತ್ತಾಳೆ. ಮತ್ತೇ ಪ್ರಿಯಕರ ಪುನಃ ಪ್ರೇಯಸಿಯ ಬಾಯಿಗೆ ಉಗುಳುವ ದೃಶ್ಯ ಸೆರೆಯಾಗಿದೆ. ಹೀಗೆಯೇ ಈ ಕ್ರಿಯೆಯನ್ನು ಯುವ ಜೋಡಿ ಪುನರಾವರ್ತಿಸುತ್ತಾರೆ. ಅಲ್ಲೇ ಇದ್ದ ಪ್ರಯಾಣಿಕರು ಈ ಅನಿರೀಕ್ಷಿತ ಘಟನೆಯಿಂದ ಶಾಕ್‌ಗೆ ಒಳಗಾಗಿದ್ದಾರೆ.
ಈ ಜೋಡಿಯ ಅಸಹ್ಯ ವರ್ತನೆ ಇಲ್ಲಿಗೆ ಮುಗಿಯುವದಿಲ್ಲ. ಮತ್ತೊಂದು ವಿಡಿಯೋದಲ್ಲಿ ಅದೇ ಪ್ರಿಯಕರ ತನ್ನ ಪ್ರಿಯತಮೆಯ ಬಾಯೊಳಗೆ ನೂಡಲ್ಸ್ ಹಾಕುತ್ತಾನೆ. ನಂತರ ಬಾಯಲ್ಲಿ ಹಾಕಿದ ನೂಡಲ್ಸ್ ಸ್ಪೂನ್‌ನಲ್ಲಿ ತೆಗೆದು ಅದನ್ನು ಆತ ಸೇವಿಸುತ್ತಾನೆ. ಸದ್ಯ ಈ ಎರಡು ಅಸಹ್ಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಈ ಜೋಡಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
करत दिल के कतल बाड़ू⁰केकर मेहनत के फल बाड़ू⁰लाली ओठवा के ललचावे
देखिए जरा दिल्ली मेट्रो में कई सालों बाद दो बिछड़े आशिक़ों का भोजपुरी गाने में रील बनाने के साथ मिलन हो रहा है. एक दूसरे के मुंह में कुल्ला करना आज के समय में प्यार की नई परिभाषा है. pic.twitter.com/VcaCtZw5kB
— Shubham Shukla (@ShubhamShuklaMP) October 11, 2023
ಈ ಅಸಹ್ಯ ವರ್ತನೆಯ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಗರಂ ಆಗಿದ್ದು, ಇಂತಹ ಘಟನೆ ಪುನರಾವರ್ತೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಜೊಡಿ ಬಗ್ಗೆ ಹೇಳುವುದಾದರೆ, ಕೆಲವು ತಿಂಗಳಿಂದ ಈ ಜೋಡಿ ಹಲವು ವಿಡಿಯೊ ಅಥವಾ ಇಸ್ಟಾಗ್ರಾಮ್ ರೀಲ್‌ಗಳ ಮೂಲಕ ವಿವಾದ ಸೃಷ್ಟಿಸುತ್ತಿದೆ. ಇವರು ನೃತ್ಯ ಮಾಡುವ ಮೂಲಕ ಸಾರ್ವಜನಿಕವಾಗಿ ಚುಂಬಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.
कल को कोई नग्न होकर #DelhiMetro में रील बनाए तो मुझे आश्चर्य नहीं होगा।@DelhiPolice कृपया मामले को संज्ञान में लेकर त्वरित कार्रवाई करे, यह दोनों अश्लीलता के साथ-साथ ऐसा कार्य कर रहे जो सेहत के लिए बिल्कुल भी अच्छा नहीं है। pic.twitter.com/vRTdYulvzZ
— कालनेमि (Parody) (@kalnemibasu) October 6, 2023
ಮಾರ್ಚ್‌ನಲ್ಲಿ ದಿಲ್ಲಿ ಮೆಟ್ರೋ ರೈಲಿನ ಒಳಗೆ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಇಂತಹ ಅಸಹ್ಯ ವಿಡಿಯೋಗಳನ್ನು ಮಾಡುವುದು ಮಾತ್ರ ಮುಂದುವರೆದೆ ಇದೆ. ಘಟನೆ ನಂತರ ʼಎಕ್ಸ್ʼ ಮೂಲಕ ಡಿಎಂಆರ್‌ಸಿ, ʼಪ್ರಯಾಣಿಸಿ ಆದರೆ ತೊಂದರೆ ಉಂಟು ಮಾಡಬೇಡಿʼ ಎಂದು ಮನವಿ ಮಾಡಿದೆ.