spot_img
spot_img
spot_img
spot_img
spot_img
spot_img

ಕೃಷ್ಣಾ ನದಿಯಲ್ಲಿ ಅಯೋಧ್ಯೆ ಶ್ರೀರಾಮನನ್ನೇ ಹೋಲುವ ವಿಷ್ಣು ವಿಗ್ರಹ ಪತ್ತೆ..! ಭಕ್ತರಿಗೆ ಅಚ್ಚರಿ

Published on

spot_img

ವಿವೇಕವಾರ್ತೆ: ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ.  ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯ (Ayodhya) ಬಾಲರಾಮನ (BalaRama) ವಿನ್ಯಾಸವನ್ನ ಹೊಂದಿರುವುದು ಅಚ್ಚರಿ ಮೂಡಿಸಿದೆ. ನದಿಯಲ್ಲಿ ನೀರು ಬತ್ತಿದ್ದು ಮೀನುಗಾರರು ಇದ್ದ ನೀರಿನಲ್ಲೇ ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿವೆ.

ಅಲ್ಲದೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಲ್ಲಿ ಮಣ್ಣು ಅಗೆಯಲಾಗಿತ್ತು. ಭೂಮಿಯಲ್ಲಿ ಹೂತು ಹೋಗಿದ್ದ ಮೂರ್ತಿಗಳು ಈಗ ಹೊರಗೆ ಬಂದಿರಬಹುದು ಎನ್ನಲಾಗಿದೆ. ಸಿಕ್ಕಿರುವ ಮೂರು ಮೂರ್ತಿಗಳು ವಿಭಿನ್ನವಾಗಿವೆ.  ಮೂರುವರೆ ಅಡಿಯ ಒಂದು ಏಕಶಿಲಾ ಮೂರ್ತಿಯಂತೂ ಅಯೋಧ್ಯ ಬಾಲರಾಮನ ವಿನ್ಯಾಸವನ್ನು ಹೋಲುತ್ತದೆ.

ವಿಷ್ಣುವಿನ (Vishnu) ದಶವತಾರಗಳನ್ನ ಮೂರ್ತಿಯಲ್ಲಿ ಕೆತ್ತಲಾಗಿದೆ. ಇನ್ನೊಂದು ಮೂರ್ತಿ ಎರಡೂವರೆ ಅಡಿಯಷ್ಟಿದೆ. ವಿಷ್ಣು ಮೂರ್ತಿಗಳಲ್ಲಿ ಸಾಮಾನ್ಯವಾಗಿ ಕೆಳಗಡೆ ಜಯವಿಜಯ ಚಿತ್ರ ಕಾಣಲಾಗುತ್ತೆ. ಆದರೆ ಇಲ್ಲಿ ಲಕ್ಷ್ಮಿ ಪದ್ಮಾವತಿ ಚಿತ್ರಗಳಿವೆ. ಈ ಮೂರ್ತಿಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದು, ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಎಂದು ಊಹಿಸುತ್ತಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಲಾಗಿದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!