spot_img
spot_img
spot_img
spot_img
spot_img
spot_img

ನಿವೃತ್ತ ಶಿಕ್ಷಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್..! ಸಾಲ ಪಡೆದವನಿಂದಲೇ ಹತ್ಯೆಯಾದ ಟೀಚರ್

Published on

spot_img

ವಿವೇಕವಾರ್ತೆ: ಆಕೆ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾದ ಶಿಕ್ಷಕಿ..ನಿವೃತ್ತಿ ನಂತರ ಆಕೆ ತನ್ನ ಪಾಡಿಗೆ ಬದುಕಿದರೆ ಇಷ್ಟೊತ್ತಿಗೆ ಸುಂದರ ಜೀವನ ಅವಳದಾಗುತ್ತಿತ್ತು..ದುಡ್ಡಿನ ಆಸೆಗೆ ಬಿದ್ದ ಆಕೆ ದುಡ್ಡು ಪಡೆದವನಿಂದಲೆ ಬೀಕರವಾಗಿ ಹತ್ಯೆಯಾಗಿದ್ದಾಳೆ..ಅಷ್ಟಕ್ಕೂ ಯಾರು ಆಕೆ..ಆಕೆಯ ಹತ್ಯೆಗೆ ಕಾರಣ ಏನು ಗೊತ್ತಾ..ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

ಹೀಗೆ ಖಾಲಿ ಖಾಲಿ ಮನೆ.. ಮನೆ ಎದುರು ನೆಮ್ಮದಿ ಎನ್ನುವ ಬೋರ್ಡ್..ಆದ್ರೆ ಆ ನೆಮ್ಮದಿಯೇ ಇಂದು ದುಡ್ಡಿನ ಆಸೆಗೆ ಜೀವನ ಅಂತ್ಯಗೊಳಿಸಿದೆ..ಧಾರವಾಡದ ನಗರದ ಓಂ ನಗರದಲ್ಲಿರುವ ಈ ನೆಮ್ಮದಿ ಎನ್ನುವ ಮನೆಯಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ ನಡೂರಮಠ ಏಕಾಂಗಿ ಜೀವನ ನಡೆಸುತ್ತಿದ್ದರು..ಗಂಡ ಮಕ್ಕಳು ಇಲ್ಲದೆ ಏಕಾಂಗಿಯಾಗಿದ್ದ ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು..ಇತ್ತೀಚೆಗೆ ನಿವೃತ್ತಿ ಯಾಗಿ ಜೀವನ ನಡೆಸುತ್ತಿದ್ದರು..ಆದ್ರೆ ಇದೆ 15ರಂದು ಗಿರಿಜಾ ಸಾವನ್ನಪ್ಪಿದರು.

ಆ ಸಾವು ಮೊದಮೊದಲು ಸಹಜ ಅಂತಲೇ ಭಾವಿಸಲಾಗಿತ್ತು..8ದಿನಗಳ ಬಳಿಕ ಸಿಕ್ಕ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ಸಿಕ್ಕಿತ್ತು..ಆದ್ರೆ ಯಾವಾಗ ಬಡ್ಡಿ ವ್ಯವಹಾರ ಗೊತ್ತಾಗುತ್ತೋ ಆಗ ಇದು ಮರ್ಡರ್ ಅನ್ನೋದು ತನಿಖೆಯ ವೇಳೆ ಗೊತ್ತಾಗಿದೆ..ಅಮರಗೋಳ ಮಂಜುನಾಥ್ ದಂಡಿನ ಎನ್ನುವ ವ್ಯಕ್ತಿಗೆ 10ಲಕ್ಷ ನೀಡಿದ್ದ ಗಿರಿಜಾ ನಿತ್ಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ..ಆದ್ರೆ ಅದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಗಿರಿಜಾ ಹಾಕಿದ್ದ ವೇಲ್ ನಿಂದಲೆ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ..

ಹಲವು ವರ್ಷಗಳಿಂದ ಗಿರಿಜಾ ತಮ್ಮ ಸುತ್ತಮುತ್ತಲೂ ಹಾಗೂ ಇತರರ ಜೊತೆಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಲೇ ಬಂದಿದ್ದಾರೆ..ನಿವೃತ್ತಿ ಬಳಿಕ ಬಡ್ಡಿ ವ್ಯವಹಾರದ ಮೂಲಕ ಹಣ ಗಳಿಸುವ ಗೋಜಿಗೆ ಬಿದ್ದ ಗಿರಿಜಾ ತಮ್ಮ ಹಣವನ್ನು ಬಡ್ಡಿ ಮೂಲಕ ಪಡೆಯುವ ಇರದೆಯಿಂದಲೆ ಮಂಜುನಾಥ್ ಗೆ ಪದೇ ಪದೇ ಕರೆ ಮಾಡಿ ಹಣ ಕೇಳಿದ್ದಾರೆ..ಆದ್ರೆ ಹಣ ಕೊಡಬೇಕಿದ್ದ ಮಂಜುನಾಥ್ ಹತ್ಯೆ ಮಾಡಿ ಯಾವುದೇ ಒಂದು ಒಂದು ಕ್ಲೂ ಬಿಡದೆ ಎಸ್ಕೇಪ್ ಆಗಿದ್ದ..ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಧಾರವಾಡದ ವಿದ್ಯಾಗಿರಿಯ ಪೊಲೀಸರು ಪೋಸ್ಟ್ ಮಾರ್ಟಂ ಗೆ ದೇಹವನ್ನ ಕಳಿಸುತ್ತಾರೆ..

ಆಗ ಇದು ಸಹಜ ಸಾವು ಅಲ್ಲ ಇದೊಂದು ಪ್ರೀ ಪ್ಲಾನ್ ಮರ್ಡರ್ ಅನ್ನೋದು ಗೊತ್ತಾಗುತ್ತೆ..ಸಾವನ್ನಪ್ಪಿ 8 ದಿನಗಳ ಬಳಿಕ ಮೃತದೇಹದ ಸ್ಥಿತಿ ಕೊಳೆತ ರೀತಿಯಲ್ಲಿ ಸಿಕ್ಕಿದ್ದು, ಅಕ್ಕಪಕ್ಕದವರಿಗೆ ವಾಸನೆ ಬಂದಿದೆ..ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..ಆಗಲೇ ಇಲ್ಲೊಂದು ದೇಹ ಇದೆ ಅಂತ ಗೊತ್ತಾಗಿದೆ.. ಒಟ್ಟಾರೆ ಹಿಂದೆ ಮುಂದೆ ಯಾರೂ ಇಲ್ಲದೆ ಏಕಾಂಗಿ ಜೀವನ ನಡೆಸುತ್ತಿದ್ದ ಗಿರಿಜಾ ನಿವೃತ್ತಿ ಬಳಿಕ ಅದೇ ಹಣದಲ್ಲಿ ಚೆಂದದ ಬದುಕು ಸಾಗಿಸಬಹುದಿತ್ತು..ಆದ್ರೆ ಹಣದ ಹಿಂದೆ ಬಿದ್ದಿದ್ದ ಶಿಕ್ಷಕಿ ಈ ರೀತಿಯಾಗಿ ಹಣ ಪಡೆದವನಿಂದಲೆ ಹತ್ಯೆ  ಆಗಿದ್ದು ನಿಜಕ್ಕೂ ಕೊಟ್ಟೋನು ಕೋಡಂಗಿ ಇಸಗೊಂಡವನು ಈರಭದ್ರ ಎನ್ನುವ ಹಾಗಾಗಿದೆ ಗಿರಿಜಾ ಕಥೆ…

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!