ವಿವೇಕವಾರ್ತೆ : ಇಂದಿನ ದಿನಮಾನಗಳಲ್ಲಿ ಟೀಚರ್ ಹಾಗೂ ಸ್ಟೂಡೆಂಟ್ ಲವ್ ಸ್ಟೋರಿಗಳು ಕಾಮನ್ ಆಗಿವೆ. ಅದೇ ರೀತಿಯ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಪಾಠ ಕಲಿಸಬೇಕಿದ್ದ ಇಲ್ಲೋಬ್ಬ ಶಿಕ್ಷಕಿಯೇ ವಿದ್ಯಾರ್ಥಿಗೆ ಪ್ರೇಮಪಾಠ ಹೇಳಿಕೊಡಲು ಶುರು ಮಾಡಿದ್ದಾಳೆ. ಅಷ್ಟೆಅಲ್ಲಾ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುವುದರ ಜೊತೆಗೆ ಮತಾಂತರಕ್ಕೂ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಈ ಶಿಕ್ಷಕಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಮ್ಯಾಟರ್ ಕ್ಯಾಂಟ್ ಪ್ರದೇಶದ ಪ್ರತಿಷ್ಠಿತ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಶಿಕ್ಷಕಿ ಸೆಕ್ಸ್‌ಗೆ ಪ್ರಚೋದಿಸಿದ್ದಾಳೆ. ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿದ್ದಳು.
ಅಲ್ಲದೇ ರಾತ್ರಿ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾಳೆ. ಈ ವಿಚಾರ ವಿದ್ಯಾರ್ಥಿಯ ತಂದೆಗೆ ಗೊತ್ತಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಕೂಡಲೇ ವಿದ್ಯಾರ್ಥಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶಿಕ್ಷಕಿಗೆ ನೋಟಿಸ್ ಕೂಡಾ ನೀಡಿದ್ದಾರೆ ಎಂದು ವರದಿಯಾಗಿದೆ.