ದೋಷಪೂರಿತ ನಂಬರ್ ಪ್ಲೇಟ್ ಬದಲಿಸಿಕೊಳ್ಳದಿದ್ದರೆ ವಾಹನ ಸೀಜ್ ಆಗಬಹುದು ಹುಷಾರ್..!

Published on

spot_img
spot_img

ದೋಷಪೂರಿತ ನಂಬರ್ ಪ್ಲೇಟ್‍ಗಳನ್ನು ಕೂಡಲೇ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಪೊಲೀಸರಿಂದ ದಂಡ ಜೊತೆಗೆ ನಿಮ್ಮ ವಾಹನವು ಕೂಡ ಜಪ್ತಿಯಾಗಬಹುದು ಹುಷಾರ್.

ಬೆಂಗಳೂರು ನಗರ ಪೊಲೀಸರು ವಿವಿಧೆಡೆ ನಂಬರ್ ಪ್ಲೇಟ್‍ಗಳಿಲ್ಲದೆ ಓಡಾಡುವ ವಾಹನಗಳನ್ನು ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ.

ಇದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವರು ಶೋಕಿಗಾಗಿ ನಿಯಮ ಮೀರಿ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ವಾಹನದ ನೋಂದಣಿ ಸಂಖ್ಯೆ ಸರಿಯಾಗಿ ಕಾಣುವುದಿಲ್ಲ. ಇನ್ನೊಂದೆಡೆ ನೋಂದಣಿ ಸಂಖ್ಯೆಯೇ ಸರಿಯಾಗಿ ಕಾಣದಂತಹ ಮತ್ತು ನಂಬರ್ ಪ್ಲೇಟ್‍ಗಳೇ ಇಲ್ಲದಂತಹ ವಾಹನಗಳು ನಗರದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ಕೆಲವರು ಇದನ್ನೇ ದುರುಪಯೋಗಪಡಿಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಿಶೇಷ ತಪಾಸಣಾ ಕಾರ್ಯವನ್ನು ಸಹ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ದೋಷಪೂರಿತ ನಂಬರ್ ಪ್ಲೇಟ್ ಇದ್ದರೆ ಸ್ಥಳದಲ್ಲೇ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ನೀವು ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!