ವಿವೇಕ ವಾರ್ತೆ : ಮಹಿಳೆಯ ಬಾಯಿಯಿಂದ ಬೃಹತ್ ಉದ್ದದ ಹಾವನ್ನು ವೈದ್ಯರೊಬ್ಬರು ಹೊರತೆಗೆಯುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಮಹಿಳೆಯ ದೇಹದಲ್ಲಿದ್ದ ಹಾವನ್ನು ಮಹಿಳಾ ವೈದ್ಯೆ ಹಾಗೂ ನರ್ಸ್ ಹೊರತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಉದ್ದನೆಯ ಕೊಳವೆಯ ಸಹಾಯದಿಂದ ಹಾವನ್ನು ಹೊರತೆಗೆದಿದ್ದಾರೆ. ಇದನ್ನು ಕಂಡ ಪಕ್ಕದಲ್ಲಿದ್ದ ನರ್ಸ್‌ಗೆ ಭಯಬಿದ್ದಿದ್ದಾರೆ.
ಹಾವು ಒಂದು ಮೀಟರ್ ಉದ್ದವಿದ್ದು, ಅದು ರಷ್ಯಾದ ಡಾಗೆಸ್ತಾನ್ ಗ್ರಾಮದ ನಿವಾಸಿಯಾದ ಮಹಿಳೆಯೊಬ್ಬರ ದೇಹದೊಳಗೆ ಇತ್ತು. ಮಹಿಳೆ ತನ್ನ ಹಿತ್ತಲಿನಲ್ಲಿ ಮಲಗಿದ್ದಾಗ ಹಾವು ಆಕೆಯ ದೇಹವನ್ನು ಪ್ರವೇಶಿಸಿದೆ ಎಂದು ವರದಿಯಾಗಿದೆ.
ಮಹಿಳೆಗೆ ಬಾಯಿ ತೆರೆದು ಮಲಗುವ ಅಭ್ಯಾಸವಿದೆ. ಅದರಿಂದಾಗಿ ಹಾವು ಅವಳ ಬಾಯಿಗೆ ಹರಿದಾಡಿತು. ಹಾವು ಆಕೆಯ ದೇಹವನ್ನು ಪ್ರವೇಶಿಸಿದ ನಂತರ ಮಹಿಳೆಯ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮೊದಲು ಮಹಿಳೆಗೆ ಅರಿವಳಿಕೆ ನೀಡಿ ನಂತರ ಶಸ್ತ್ರಚಿಕಿತ್ಸೆ ನಡೆಸಿದರು ಎಂದು ವರದಿಯಿಂದ ತಿಳಿದುಬಂದಿದೆ.
https://twitter.com/InsaneRealitys/status/1710792116476199418?ref_src=twsrc%5Etfw%7Ctwcamp%5Etweetembed%7Ctwterm%5E1710792116476199418%7Ctwgr%5E0b9f58bc4d0deb97a5357c72f1415e0f06fefc7d%7Ctwcon%5Es1_c10&ref_url=https%3A%2F%2Fapi-news.dailyhunt.in%2F