spot_img
spot_img
spot_img
spot_img
spot_img
spot_img

ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಪತ್ತೆಯಾಯ್ತು ಜಿರಳೆ..! ಹೋಟಲ್ ಅಡುಗೆ ಮನೆ ಬಂಡವಾಳ ಬಯಲು ಮಾಡಿದ ವಕೀಲೆ

Published on

spot_img

ಬೆಂಗಳೂರು: ಅದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್. ಹೈಜೆನಿಕ್, ನೀಟ್ನೆಸ್ ಇರುತ್ತೆ ಅಂತಲೇ ಸಾಕಷ್ಟು ಮಂದಿ ಅಲ್ಲಿ ಊಟಕ್ಕೆ ಹೋಗ್ತಾರೆ. ಆದ್ರೆ ಇಂತ ಹೋಟೆಲ್ನ ಊಟದಲ್ಲಿ ಜಿರಳೆ ಸಿಕ್ಕಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು ಅಂತ ಹೇಳ್ತೀವಿ ನೋಡಿ. ರಾಜಧಾನಿಯಲ್ಲಿ ಮನೆ ಊಟಕ್ಕಿಂತ ಹೋಟೆಲ್ ಊಟ ನೆಚ್ಚಿಕೊಂಡವರೇ ಹೆಚ್ಚು. ಅದರಲ್ಲೂ ಆರೋಗ್ಯದ ದೃಷ್ಠಿಯಿಂದ ಶುಚಿಯಾಗಿ ಅಡುಗೆ ಮಾಡೋ ಹೋಟೆಲ್ಗಳ ಕಡೆಯೇ ಜನರು ಹೆಚ್ಚಾಗಿ ಹೋಗ್ತಾರೆ.ಆದ್ರೆ ಇಂತ ಹೈಜೆನಿಕ್, ನೀಟ್ನೆಸ್ ಇದೆ ಅನ್ಕೊಂಡು ಹೈಕೋರ್ಟ್ ವಕೀಲೆಯೊಬ್ಬರು ಪ್ರತಿಷ್ಠಿತ ಹೋಟೆಲ್ಗೆ ಊಟಕ್ಕೆಂದು ಹೋದಾಗ ಆಗಿದ್ದೇ ಬೇರೆ.

ಹೌದು ಬೆಂಗಳೂರಿನ ಹೃದಯಭಾಗದಲ್ಲಿರೋ ಕ್ಯಾಪಿಟಲ್ ಹೋಟೆಲ್ನಲ್ಲಿ ಊಟದ ವಿಚಾರಕ್ಕೆ ಹೈಡ್ರಾಮಾವೇ ನಡೆದಿದೆ. ನಿನ್ನೆ ಮದ್ಯಾನ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ದೀಪಕ್ ತಮ್ಮ ಸಹೋದ್ಯೋಗಿ ಜೊತೆ ಕ್ಯಾಪಿಟಲ್ ಹೋಟೆಲ್ಗೆ ಹೋಗಿದ್ದಾರೆ. ಬಳಿಕ ಕೆಲವು ಐಟಂಗಳ ಜೊತೆ ಪನ್ನಿರ್ ಬಟರ್ ಮಸಾಲ ಕೂಡ ಆರ್ಡರ್ ಮಾಡಿದ್ರು. ಆದ್ರೆ ಊಟ ಮಾಡುವ ವೇಳೇ ಪನ್ನೀರ್ ಬಟರ್ ಮಸಾಲದಲ್ಲಿ ಜಿರಳೆ ಪತ್ತೆಯಾಗಿದೆ. ಇದನ್ನ ಕಂಡು ಶಾಕ್ ಆದ ವಕೀಲೆ, ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ್ರು. ಬಳಿಕ ಹೋಟೆಲ್ ಕಿಚನ್ ರೂಂಗೆ ಹೋಗಿ ನೋಡಿದ್ರೆ ಅದರ ಬಂಡವಾಳವೂ ಬಯಲಾಗಿತ್ತು.

ಊಟದಲ್ಲಿ ಪತ್ತೆಯಾದ ಜಿರಳೆ ಮತ್ತು ಅಡುವೆ ಮನೆಯ ದುಸ್ಥಿತಿ ಬಗ್ಗೆ ವಕೀಲೆ ಶೀಲಾ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಆದ್ರೆ ಹೋಟೆಲ್ ಸಿಬ್ಬಂದಿ ವಕೀಲೆ ಜೊತೆಯೇ ಅನುಚಿತವಾಗಿ ವರ್ತಿಸಿದ್ದಾರಂತೆ. ಅಷ್ಟಲ್ಲದೇ ವಕೀಲೆಯನ್ನ ತಳ್ಳಾಡಿ, ಜೀವ ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸಿಬ್ಬಂದಿ ವಿರುದ್ಧ FIR ಕೂಡ ದಾಖಲಾಗಿದ್ದು,

ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಘಟನೆ ನಡೆದಾಗ ಸ್ಥಳೀಯ ಫುಡ್ ಆಫಿಸರ್ ಸುಬ್ರಮಣ್ಯ ಎಂಬುವರಿಗೆ ಶೀಲಾ ದೀಪಕ್ ಕರೆ ಮಾಡಿದ್ದಾರೆ. ಆದ್ರೆ ಫುಡ್ ಆಫಿಸರ್  ಸ್ಥಳಕ್ಕೆ ಬಾರದೆ, ರಾತ್ರಿಯಾಗಿದೆ, ಟ್ರಾಫಿಕ್ ಜಾಮ್ ಇದೆ ಅಂತ ಸಬೂಬು ಹೇಳಿದ್ದಾರೆ. ಇದರಿಂದ ಫುಡ್ ಡಿಪಾರ್ಟ್ಮೆಂಟ್ ಗೂ ಶೀಲಾ ದೀಪಕ್ ದೂರು ನೀಡಿದ್ದು ಹೋಟೆಲ್ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಒಟ್ನಲ್ಲಿ ಆರೋಗ್ಯದ ದೃಷ್ಟಿಯಿಂದ ಶುಚಿಯಾಗಿರೋ ಹೋಟೆಲ್ ಬೇಕೆಂದು ದುಬಾರಿ ಹೋಟೆಲ್ಗಳಿಗೆ ಹೋಗೋರು  ಎಚ್ಚರಿಕೆಯಿಂದ ಇರೋದು ಒಳ್ಳೆದು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!