ದ್ವಾದಶ ರಾಶಿಗಳದಿನ ಭವಿಷ್ಯ ದಿನಾಂಕ:26-01-2026 ಸೋಮವಾರ

spot_img
spot_img

*01,🔱ಮೇಷರಾಶಿ🔱*
📖,ನಿಮ್ಮ ಮಾತುಗಳನ್ನು ಸರಿಯಾಗಿ ಸಾಬೀತುಪಡಿಸಲು ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಜಗಳವಾಡಬಹುದು. ಹೇಗಾದರೂ ನಿಮ್ಮ ಸಂಗಾತಿ ತನ್ನ ಬುದ್ಧಿವಂತಿಕೆಯನ್ನು ತೋರಿಸುತ್ತ ನಿಮ್ಮನ್ನು ಶಾಂತಗೊಳಿಸುತ್ತಾರೆ. ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಯೋಚಿಸುವ ಕೆಲಸಗಳನ್ನು ಮಾಡುತ್ತೀರಿ. ಇಂದು ನೀವು ನಿಮ್ಮ ತಂದೆಯೊಂದಿಗೆ ಒಬ್ಬ ಸ್ನೇಹಿತನ ಹಾಗೆ ಮಾತನಾಡುವಿರಿ. ನಿಮ್ಮ ಮಾತುಗಳನ್ನು ಕೇಳಿ ಅವರಿಗೆ ಸಂತೋಷವಾಗುತ್ತದೆ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯ ದರ್ಶನ ಮಾಡಿ,

*02,🔱ವೃಷಭರಾಶಿ🔱*
📖,ಏನಾದರೂ ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ಆರ್ಥಿಕ ದೃಷ್ಟಿಯಿಂದ ಈ ದಿನ ಮಿಶ್ರ ಫಲದಾಯಕವಾಗಿದೆ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ನೆರೆಹೊರೆಯವರು ಇಂದು ನಿಮ್ಮ ವೈಯಕ್ತಿಕ ಜೀವನದ ಆಯಾಮವನ್ನು ಸಮಾಜದಲ್ಲಿ ತಪ್ಪಾಗಿ ಪ್ರಸ್ತುತಪಡಿಸಬಹುದು. ಕೆಲವು ಮಂಗಳಕರ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,
ಪರಿಹಾರ:-ತಾಯಿಶ್ರೀದುರ್ಗಾಪರಮೇಶ್ವರಿಯ ಪ್ರಾರ್ಥನೆ ಮಾಡಿ,

*03,🔱ಮಿಥುನ ರಾಶಿ🔱*
📖,ಇಂದು ಇಡೀ ದಿನ ನೀವು ಖಾಲಿಯಾಗಿರಬಹುದು ಮತ್ತು ಅನೇಕ ಚಲನಚಿತ್ರಗಳು ಅಥವಾ ಕಾರ್ಯಕ್ರಮವನ್ನು ನೋಡಬಹುದು. ನಿಮ್ಮ ಬಾಸ್ ಇಂದು ನಿಮ್ಮ ಹಿಂದಿನ ಕೆಲಸವನ್ನು ಪ್ರಶಂಸಿಸಬಹುದು. ಬಹಳ ಸಮಯದ ನಂತರ ನೀವು ಸಾಕಷ್ಟು ನಿದ್ರೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ನೀವು ತುಂಬಾ ಶಾಂತ ಮತ್ತು ಉಲ್ಲಾಸವನ್ನು ಅನುಭವಿಸುವಿರಿ. ನಿಕಟ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ನಡುವೆ ಸಂತೋಷವಾಗಿರಲು ಪ್ರಯತ್ನಿಸಬೇಕು,
ಪರಿಹಾರ:-ಶ್ರೀ ಪಾಂಡುರಂಗನನ್ನು ಮನಸಾ ಪ್ರಾರ್ಥಿಸಿ,

*04,🔱ಕಟಕ ರಾಶಿ🔱*
📖,ಮನೆಯ ಅಗತ್ಯವಾದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವುದು ಖಂಡಿತವಾಗಿಯೂ ನಿಮಗೆ ಆರ್ಥಿಕ ತೊಂದರೆಗಳನ್ನ್ನು ನೀಡುತ್ತದೆ, ಆದರೆ ನೀವು ಈ ದಿನ ಹಣ ಉಳಿತಾಯ ಮಾಡುವದರಿಂದ ನಿಮ್ಮ ಭವಿಷ್ಯದ ಅನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹದು. ಹಣ ಕಾಸು ಅಥವಾ ಸಾಲದ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಆಗಬಹುದು. ಹಣಕಾಸಿನ ವ್ಯವಹಾರಗಳನ್ನು ಜಾಗುರೂಕತೆಯಿಂದ ಮಾಡಿ,
ಪರಿಹಾರ:-ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿ,

*05,🔱ಸಿಂಹ ರಾಶಿ🔱*
📖,ಧರ್ಮಕಾರ್ಯಗಳು/ಹವನಗಳು/ ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಮಾಡಲು ಆಲೋಚನೆ ಮಾಡುವಿರಿ ಅಥವಾ ಕೈಗೊಳ್ಳವಿರಿ. ಮಕ್ಕಳಿಗೆ ಸಂಬಂದಿಸಿದ ಒಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಅವರ ಅಗತ್ಯ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವಿರಿ, ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಮುಂದಿನ ಹೆಜ್ಜೆಯನ್ನು ಹಾಕುವ ಅಗತ್ಯವಿದೆ,
ಪರಿಹಾರ:-ಕುಲದೇವರ ಪ್ರಾರ್ಥನೆ ಮಾಡಿ

*06,🔱ಕನ್ಯಾ ರಾಶಿ🔱*
📖,ನಿಮ್ಮ ಜ್ಞಾನ ಒಳ್ಳೆಯ ಹಾಸ್ಯ ಮತ್ತು ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಬಳಿಯಿರುವ ಜನರನ್ನು ಸುತ್ತಲಿನವರನ್ನು ಆಕರ್ಷಿಸಬಹುದು. ಭೂಮಿಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕೆಲವು ವಿಷಯಗಳು ನಿಮ್ಮ ಪರವಾಗಿರುವಂತೆ ತೋರುವ ಒಂದು ಲಾಭಕರ ದಿನ ಮತ್ತು ನೀವು ತುಂಬ ಉತ್ಸಾಹದಿಂದಿರುತ್ತೀರಿ. ನೀವು ನಿಮ್ಮ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ಪ್ರೇಮದ ಉತ್ಕಟತೆಯನ್ನು ತಲುಪುತ್ತೀರಿ. ಇಂದು ನಿಮ್ಮ ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ದೊರಕುತ್ತದೆ,
ಪರಿಹಾರ:-ಶ್ರೀ ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ,

*07,🔱ತುಲಾ ರಾಶಿ🔱*
📖,ಇಂದು ನೀವು ವ್ಯವಹಾರದಲ್ಲಿ ಕೆಲವು ಸವಾಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತೀರಿ, ಆದರೆ ನೀವು ಸಮಸ್ಯೆ ನೀಡುವವರಿಗೆ ಭಯಪಡುವುದಿಲ್ಲ. ನಿಮಗಿಂತ ಹೆಚ್ಚಾಗಿ ಇತರರ ಕೆಲಸಗಳತ್ತ ಗಮನ ಹರಿಸುವುದರಿಂದ ನೀವು ತೊಂದರೆಗೆ ಸಿಲುಕಬಹುದು. ಬೇರೆಯವರೊಂದಿಗೆ ನಿಮ್ಮ ಒಪ್ಪಂದವನ್ನು ಅಂತಿಮಗೊಳಿಸುವಾಗ ಹಿರಿಯರ ಮಾರ್ಗದರ್ಶನ ಪಡೆಯಿರಿ, ಬಂಧುಗಳು ನಿಮ್ಮನ್ನು ಇಂದು ಕೆಲವು ಸಮಸ್ಯೆಗಳಿಗೆ ಸಿಲುಕಿಸಬಹುದು,
ಪರಿಹಾರ:-ಶ್ರೀ ಮಹಾಲಕ್ಷ್ಮಿ ಪೂಜೆ ಮಾಡಿ ಶುಭಪಲ ಪಡೆಯಿರಿ,

*08,🔱ವೃಶ್ಚಿಕ ರಾಶಿ🔱*
📖,ನೀವು ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಸಮಾಧಾನವಾಗಿ ವರ್ತಿಸಿ, ಈ ದಿನ ನಿಮ್ಮ ಸಂಗಾತಿಯ ಜೊತೆ ಜಗಳ ಮಾಡಬಹುದಾದರೂ ರಾತ್ರಿಯ ಊಟದ ಸಮಯದಲ್ಲಿ ಅದು ಪರಿಹಾರವಾಗುತ್ತದೆ. ನಿಮ್ಮ ಮಗುವಿನ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೂಡಲೇ ಬಗಹರಿಸಿ,
ಪರಿಹಾರ:-ಶಿವ-ಭೈರವ- ಹನುಮಂತ-ದೇವರನ್ನುಪೂಜಿಸುವುದರಿಂದಶುಭವಾಗುವುದು,

*09,🔱ಧನಸ್ಸು ರಾಶಿ🔱*
📖,ನೀವು ಈ ದಿನ ನಿಮ್ಮ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಉತ್ತಮ. ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಈ ದಿನ ನೀವು ನಿಮ್ಮ ವಸ್ತುಗಳನ್ನು ಮತ್ತು ಹಣವನ್ನು ತುಂಬಾ ಸುರಕ್ಷಿತವಾಗಿಡಬೇಕು. ಬಂದು ಮಿತ್ರರಿಂದ ಈ ದಿನದ ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಬಹುದು. ಸಾಲ ತರುವುದು ಕೊಡುವುದು ಬೇಡ,
ಪರಿಹಾರ :ಉತ್ತಮ ಆರೋಗ್ಯಕ್ಕಾಗಿ ಪೂರ್ವದ ಕಡೆಗೆ ಮುಖವನ್ನು ಮಾಡಿ ಆಹಾರವನ್ನು ಸೇವಿಸಿ,

*10,🔱ಮಕರ ರಾಶಿ🔱*
📖,ನೀವು ಈ ದಿನ ನಿಮ್ಮ ಮಕ್ಕಳ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಉತ್ತಮ. ನಿಮ್ಮ ನಡವಳಿಕೆ ಸರಳವಾದಾಗ ಮಾತ್ರ ಜೀವನದಲ್ಲಿ ಸರಳತೆ ಇರುತ್ತದೆ. ಇಂದು ಇದ್ದಕ್ಕಿದ್ದಂತೆ ಯಾವುದೇ ಅಪೇಕ್ಷಿಸದ ಪ್ರಯಾಣಕ್ಕೆ ಹೋಗಬೇಕಾಗಬಹುದು. ಇದರಿಂದಾಗಿ ಕುಟುಂಬದವರೊಂದಿಗೆ ಸಮಯವನ್ನು ಕಳೆಯಲು ಯೋಜಿಸಿರುವ ನಿಮ್ಮ ಯೋಜನೆ ಹಾಳಾಗಬಹುದು,
ಪರಿಹಾರ :-ಬಡ ಮಕ್ಕಳಿಗೆ ಬಟ್ಟೆಗಳನ್ನು ದಾನ ಮಾಡಿ,

*11,🔱ಕುಂಭ ರಾಶಿ🔱*
📖,ಇಂದು ಶಾಂತವಾಗಿ ಒತ್ತಡ ಮುಕ್ತವಾಗಿರಿ. ತರಾತುರಿಯಲ್ಲಿ ಯಾವುದೇ ಕೆಲಸಗಳನ್ನು ಮಾಡವುದು ಬೇಡಿ. ನಿಮ್ಮ ನಿರ್ಧಾರದಲ್ಲಿ ಪೋಷಕರ ಸಹಾಯ ನಿಮಗೆ ತುಂಬ ಸಹಾಯ ಮಾಡುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ರಜಾದಿನದಂದು ಕೂಡ ಕಚೇರಿಯ ಕೆಲಸವನ್ನು ಮಾಡಬೇಕಾಗಿ ಬರುವುದು ಇದರಿಂದ ಬೇಸರಗೊಳ್ಳಬೇಡಿ,
ಪರಿಹಾರ:-ನಿಮ್ಮ ತಂದೆ ಅಥವಾ ತಂದೆಯಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆಯಿರಿ,

*12,🔱ಮೀನ ರಾಶಿ🔱*
📖,ನಿಮ್ಮ ಆಸಕ್ತಿಗಳನ್ನು ಮತ್ತು ನೀವು ತುಂಬ ಆನಂದಿಸುವ ಕೆಲಸಗಳನ್ನು ಮಾಡಲು ಹೆಚ್ಚು ಸಮಯ ಕೊಡಬೇಕು. ದೀರ್ಘಕಾಲದ ದೃಷ್ಟಿಕೋನದಿಂದ ಕೆಲಸ ಮಾಡಿ. ನಿಮ್ಮ ಮಕ್ಕಳು ನಿಮ್ಮ ಉದಾರ ವರ್ತನೆಯ ದುರುಪಯೋಗ ಮಾಡಲು ಬಿಡಬೇಡಿ. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ನಿಮ್ಮ ನ್ಯೂನತೆಗಳ ಮೇಲೆ ನೀವು ಗಮನ ಹರಿಸುವ ಅಗತ್ಯವಿದೆ ಆದ್ದರಿಂದ ನೀವು ನಿಮಗಾಗಿ ಸಮಯವನ್ನು ತೆಗೆದುಕೊಳ್ಳಬೇಕು,
ಪರಿಹಾರ:-ತಾಯಿ ಶ್ರೀ ದುರ್ಗೆಯನ್ನು ಪ್ರಾರ್ಥಿಸಿರಿ

Vivek kudarimath
Vivek Kudarimath is a seasoned media professional with over 9 years of extensive experience in the industry. Throughout his career, he has developed a keen eye for storytelling and a deep understanding of digital and traditional media landscapes. Known for his insightful reporting and editorial expertise, Vivek has consistently delivered high-quality content that resonates with diverse audiences. He is passionate about uncovering the truth and presenting complex news in an accessible, engaging manner.

LEAVE A REPLY

Please enter your comment!
Please enter your name here

spot_img

More like this

ಶುಕ್ರ

ಶುಕ್ರನ ಸಂಚಾರ: ಫೆಬ್ರವರಿ 6 ರಿಂದ ಈ 3 ರಾಶಿಯವರ ಬದುಕು...

ಶುಕ್ರನ ಸಂಚಾರ: ಫೆಬ್ರವರಿ 6 ರಿಂದ ಈ 3 ರಾಶಿಯವರ ಬದುಕು ಬಂಗಾರ! ಶುಕ್ರ ಮತ್ತು ಶನಿ ಪರಸ್ಪರ ಮಿತ್ರ ಗ್ರಹಗಳಾಗಿರುವುದರಿಂದ, ಶುಕ್ರನ ಈ...

ಮಕರದಲ್ಲಿ ತ್ರಿಗ್ರಹಿ ಯೋಗ: ಮೂರು ರಾಶಿಯವರಿಗೆ ರಾಜಯೋಗದ ಫಲ!

ಮಕರದಲ್ಲಿ ತ್ರಿಗ್ರಹಿ ಯೋಗ: ಮೂರು ರಾಶಿಯವರಿಗೆ ರಾಜಯೋಗದ ಫಲ! ಜನವರಿ 17, 2026 ರಂದು ಮಕರ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು...

ಯಾವಾಗ ಉಗುರು ಕತ್ತರಿಸಿದರೆ ಅದೃಷ್ಟ ಒಲಿಯುತ್ತೆ? ಈ ಕುರಿತು ಶಾಸ್ತ್ರ ಶಕುನ...

ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? (ಅಶುಭ ದಿನಗಳು) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳು ನಿರ್ದಿಷ್ಟ ಗ್ರಹಗಳಿಗೆ ಮೀಸಲಾಗಿರುತ್ತವೆ. ಆ ದಿನಗಳಲ್ಲಿ ಉಗುರು...