Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

spot_img
spot_img

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಕಳೆದ ವಾರ ಮಾಳು ನಿಪನಾಳ್‌ ಅವರು ಎಲಿಮಿನೇಟ್‌ ಆಗಿದ್ದರು. ಸ್ಪಂದನಾ ಮತ್ತು ಮಾಳು ನಿಪನಾಳ್‌ ಅವರಲ್ಲಿ ಇಬ್ಬರು ಮನೆಯಿಂದ ಹೊರಗೆ ಹೋಗಬೇಕಿತ್ತು. ಆದರೆ ಕೊನೆಗೆ ಮಾಳು ಎಲಿಮಿನೇಟ್‌ ಆಗಿದ್ದರು. ಆದರೆ ಆ ವಾರ ಸುದೀಪ್‌ ಅವರು ಗೈರಾಗಿದ್ದರಿಂದ ವೇದಿಕೆ ಮೇಲೆ ಮಾಳು ಮಾತನಾಡಲು ಆಗಿರಲಿಲ್ಲ.

ಹಾಗಾಗಿ, ಈ ವಾರ ಸುದೀಪ್‌ ಅವರನ್ನು ಮಾಳು ಬಿಗ್‌ ಬಾಸ್ ವೇದಿಕೆ ಮೇಲೆ ಭೇಟಿಯಾದರು.

ಮಾಳು ಸಂದರ್ಶನದ ಬಗ್ಗೆ ಕಿಚ್ಚನ ಮಾತು

ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದಕೂಡಲೇ ಮಾಳು ನಿಪನಾಳು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. “ನನ್ನನ್ನ ಬಿಟ್ಟು ಯಾರಿಗೂ ಬಿಗ್ ಬಾಸ್‌ನಲ್ಲಿ ಗೆಲ್ಲಲ್ಲು ಅರ್ಹರಲ್ಲ. ಸ್ಪಂದನಾ ಸೇಫ್‌ ಆಗಿದ್ದು ಸರಿ ಅಲ್ಲ” ಎಂದೆಲ್ಲಾ ಮಾಳು ನಿಪನಾಳ ಹೇಳಿದ್ದರು. ಈ ಬಗ್ಗೆ ಭಾರಿ ಚರ್ಚೆ ಆಗಿತ್ತು. ಇದೀಗ ಬಗ್ಗೆ ಸುದೀಪ್‌ ಅವರು ವೇದಿಕೆ ಮೇಲೆ ಕೇಳಿದ್ದಾರೆ.

ಬಿಗ್‌ ಬಾಸ್‌ನಿಂದ ಹೊರಗೆ ಹೋಗುತ್ತಿದ್ದಂತೆ ಮಾಧ್ಯಮಗಳಲ್ಲಿ ಕುಳಿತು ಮಾತಾಡ್ತಿದ್ದೀರಾ.. ಎಷ್ಟು ಮಾತಾಡ್ತಾ ಇದ್ಧೀರಾ ಅಂದ್ರೆ.. ಅವರು ಒಂದು ಪ್ರಶ್ನೆ ಕೇಳಿದರೆ, ನೀವು ಇಡೀ ಎಪಿಸೋಡ್ ಕೊಡ್ತಿದ್ದೀರಿ. ಅಷ್ಟೊಂದು ಮಾತು ನಿಮ್ಮೊಳಗಿದೆ. ಆದರೆ, ‘ಬಿಗ್ ಬಾಸ್’ ಮನೆಯೊಳಗೆ ಇರುವಾಗ ಯಾಕೆ ಆ ರೀತಿ ಇದ್ರಿ” ಎಂದು ಸುದೀಪ್‌ ಕೇಳಿದರು.

ಸುದೀಪ್‌ ಅವರ ಪ್ರಶ್ನೆಗೆ ಉತ್ತರಿಸಿದ ಮಾಳು, “ನಾನು ಇಷ್ಟುಬೇಗ ಹೊರಗೆ ಬರ್ತಿನಿ ಎಂದುಕೊಂಡಿರಲಿಲ್ಲ. ಅಚಾನಕ್‌ ಆಗಿ ಹೊರಗೆ ಬಂದೆ. ನಾನು ನಿರೀಕ್ಷೆ ಮಾಡಿದ್ದೇ ಬೇರೆ. ನನ್ನ ಅಭಿಮಾನಿಗಳಿಗೆ ಏನೂ ಕೊಡೋಕೆ ಆಗಲಿಲ್ಲ. ಹೊರಗೆ ಬಂದಮೇಲೆ ಜನರ ಬೆಂಬಲ ವಿಭಿನ್ನವಾಗಿತ್ತು. ಏನೋ ನಿರೀಕ್ಷೆ ಇಟ್ಟುಕೊಂಡು ಹೊರಗೆ ಬಂದೆ. ಆದರೆ, ಇಲ್ಲಿ ಬೇರೇನೋ ಆಗಿತ್ತು. ಏನಾದರೂ ತಪ್ಪು ಮಾತಾಡಿದ್ದರೆ, ಮನೆ ಮಗ ಅಂದುಕೊಂಡು ಸ್ವೀಕರಿಸಿ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ.” ಎಂದು ಹೇಳಿದ್ದಾರೆ.

ಗಿಲ್ಲಿ ಪರವಾಗಿ ಮಾತನಾಡಿದ್ದ ಮಾಳು

“ಈ ಸೀಸನ್‌ನಲ್ಲಿ ಯಾರೇ ಗೆದ್ದರೂ ಅದನ್ನು ಒಪ್ಪಿಕೊಳ್ಳೋದಿಲ್ಲ. ಯಾರು ಗೆಲ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏನು ಬೇಕಿದ್ದರೂ ಆಗಬಹುದು” ಎಂದ ಹೇಳಿದ್ದ ಮಾಳು, “ಗಿಲ್ಲಿ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ. ಟಾಸ್ಕ್ ಚೆನ್ನಾಗಿ ಆಡಲ್ಲ ಅನ್ನೋದು ನನಗೆ ಅವನಲ್ಲಿ ಕಂಡ ಕೊರತೆ. ಆ ತಪ್ಪು ತಿದ್ದುಕೊಂಡರೆ ಫಿನಾಲೆ ತಲುಪಿ, ಕಪ್ ಗೆಲ್ಲಬಹುದು” ಎಂದು ಹೇಳಿದ್ದರು. ಇದು ಹಲವರಿಗೆ ಅಚ್ಚರಿ ಮೂಡಿತ್ತು.

Vivek kudarimath
Vivek Kudarimath is a seasoned media professional with over 9 years of extensive experience in the industry. Throughout his career, he has developed a keen eye for storytelling and a deep understanding of digital and traditional media landscapes. Known for his insightful reporting and editorial expertise, Vivek has consistently delivered high-quality content that resonates with diverse audiences. He is passionate about uncovering the truth and presenting complex news in an accessible, engaging manner.

LEAVE A REPLY

Please enter your comment!
Please enter your name here

spot_img

More like this

ನಟಿ ಪವಿತ್ರಾ ಗೌಡ ಆಸೆ ಕೊನೆಗೂ ಈಡೇರಿಸಿದ ಕೋರ್ಟ್; ಕುಂಟು ನೆಪಗಳನ್ನೇಳಿದ್ದ...

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಆರೋಪಿ ಪವಿತ್ರಾಗೌಡ ಅವರಿಗೆ ಮನೆಯೂಟ ನೀಡುವ ವಿಚಾರದಲ್ಲಿ ಇಂದು ಕೋರ್ಟ್...

ಮಾಣಿಕ್ಯ (Ruby): ವಜ್ರಕ್ಕಿಂತಲೂ ದುಬಾರಿ ಈ ‘ಕೆಂಪು ಮಣಿ’! ಇದನ್ನು ರತ್ನಗಳ...

ಮಾಣಿಕ್ಯ (Ruby): ವಜ್ರಕ್ಕಿಂತಲೂ ದುಬಾರಿ ಈ 'ಕೆಂಪು ಮಣಿ'! ಇದನ್ನು ರತ್ನಗಳ ರಾಜ ಎನ್ನಲು ಕಾರಣವೇನು? ಆಭರಣಗಳ ಲೋಕದಲ್ಲಿ ವಜ್ರಕ್ಕೆ ಎಷ್ಟು ಬೆಲೆ ಇದೆಯೋ,...
ಪ್ರೇಮಕಥೆ

ಬಾಸ್-ಉದ್ಯೋಗಿ ನಡುವೆ ಮೊಳಕೆಯೊಡೆದ ಪ್ರೀತಿ: ಗುಜರಾತ್‌ನ ಈ ವಿಶಿಷ್ಟ ಪ್ರೇಮಕಥೆ ಈಗ...

ಬಾಸ್-ಉದ್ಯೋಗಿ ನಡುವೆ ಮೊಳಕೆಯೊಡೆದ ಪ್ರೀತಿ: ಗುಜರಾತ್‌ನ ಈ ವಿಶಿಷ್ಟ ಪ್ರೇಮಕಥೆ ಈಗ ವೈರಲ್! ಸಿನಿಮಾಗಳಲ್ಲಿ ನಾವು ಬಾಸ್ ಮತ್ತು ಉದ್ಯೋಗಿಯ ನಡುವಿನ ಪ್ರೇಮಕಥೆಗಳನ್ನು ನೋಡಿರುತ್ತೇವೆ....