ಹೊಸ ವರ್ಷದ ಆರಂಭದೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಕಂಪನಿಯು ದೇಶದಾದ್ಯಂತ ಟೆಲಿಕಾಂ ವಲಯಗಳಲ್ಲಿ ವೈ-ಫೈ ಕಾಲಿಂಗ್ ಅಥವಾ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭಿಸಿದೆ
BSNL WiFi Calling: ಹೊಸ ವರ್ಷದ ಆರಂಭದೊಂದಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಕಂಪನಿಯು ದೇಶದಾದ್ಯಂತ ಟೆಲಿಕಾಂ ವಲಯಗಳಲ್ಲಿ ವೈ-ಫೈ ಕಾಲಿಂಗ್ ಅಥವಾ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭಿಸಿದೆ. ಈ ಫೀಚರ್ಸ್ನಡಿ ಬಳಕೆದಾರರು ತಮ್ಮ ಮೊಬೈಲ್ ಸಿಗ್ನಲ್ ದುರ್ಬಲವಾಗಿದ್ದರೂ ಸಹ ವೈ-ಫೈ ನೆಟ್‌ವರ್ಕ್ ಮೂಲಕ ಕರೆಗಳನ್ನು ಮಾಡಿ ಮಾತಾಡಬಹುದಾಗಿದೆ.
ಕಡಿಮೆ ನೆಟ್‌ವರ್ಕ್ ಇರೋ ಪ್ರದೇಶಗಳಲ್ಲಿಯೂ ಮಾತಾಡೋದು ಸುಲಭ
ಮೊಬೈಲ್ ನೆಟ್‌ವರ್ಕ್‌ಗಳು ಹೆಚ್ಚಾಗಿ ಲಭ್ಯವಿಲ್ಲದ ಪ್ರದೇಶಗಳಲ್ಲಿ ವೈ-ಫೈ ಕರೆ ಮಾಡಬಹುದು. ಬಿಎಸ್‌ಎನ್‌ಎಲ್ ಬಳಕೆದಾರರು, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿರೋರಿಗೆ ಈ ಸೇವೆ ಒಳ್ಳೆಯದಾಗಿದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಅಥವಾ ಇತರ ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿದ್ದರೆ.. ಇನ್ಮುಂದೆ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ.
ಯಾವುದೇ ಅಪ್ಲಿಕೇಷನ್ ಬೇಡ
ಈ ಸೇವೆಗಾಗಿ ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಇದು ಫೋನ್‌ನ ಡೀಫಾಲ್ಟ್ ಡಯಲರ್‌ನಿಂದ ನೇರವಾಗಿ ಕಾರ್ಯನಿರ್ವಹಿಸುತ್ತದೆ. ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಕರೆ ಮಾಡಬಹುದು. ಕರೆಯ ಸಮಯದಲ್ಲಿ ಕರೆಗಳು ಸ್ವಯಂಚಾಲಿತವಾಗಿ ವೈ-ಫೈ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ನಡುವೆ ಬದಲಾಗುತ್ತವೆ. ಯಾವುದೇ ಅಡಚಣೆಗಳು ಆಗುವುದಿಲ್ಲ.
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಬಿಎಸ್ಎನ್ಎಲ್ ಗ್ರಾಹಕರಿಗೆ ವೈ-ಫೈ ಕರೆ ಮಾಡಲು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ವೈ-ಫೈ ಮೂಲಕ ಮಾಡಿದ ಕರೆಗಳಿಗೆ ಸಾಮಾನ್ಯ ಕರೆಗಳಂತೆ ಬಿಲ್ ವಿಧಿಸಲಾಗುತ್ತದೆ. ಇದರರ್ಥ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಅಸ್ತಿತ್ವದಲ್ಲಿರುವ ಪ್ಲಾನ್ ಪ್ರಕಾರ ಕರೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಯಾವ ಮೊಬೈಲ್ನಲ್ಲಿ ಈ ಸೌಲಭ್ಯ ಲಭ್ಯ?
ಹೊಸ ಮತ್ತು ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ವೈ-ಫೈ ಕಾಲಿಂಗ್ ಬೆಂಬಲಿತವಾಗಿದೆ. ಬಳಕೆದಾರರು ತಮ್ಮ ಫೋನ್‌ನ ಸೆಟ್ಟಿಂಗ್‌ಗಳಲ್ಲಿ ವೈ-ಫೈ ಕಾಲಿಂಗ್ ಸಕ್ರಿಯಗೊಳಿಸಬೇಕು. ಸಕ್ರಿಯಗೊಳಿಸಿಯೂ ನೀವು ಕರೆ ಮಾಡಲು ಸಾಧ್ಯವಾಗದಿದ್ದರೆ BSNL ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು.
BSNL ನೆಟ್‌ವರ್ಕ್ ನವೀಕರಣದತ್ತ ದೊಡ್ಡ ಹೆಜ್ಜೆ
ದೇಶದಾದ್ಯಂತ ವೈ-ಫೈ ಕಾಲಿಂಗ್ ಸೇವೆಯನ್ನು ಪ್ರಾರಂಭಿಸುವುದು BSNL ನೆಟ್‌ವರ್ಕ್ ಆಧುನೀಕರಣ ಉಪಕ್ರಮದ ಒಂದು ಭಾಗ. ಮೊಬೈಲ್ ನೆಟ್‌ವರ್ಕ್ ಸಂಪರ್ಕವು ಗಮನಾರ್ಹ ಸವಾಲಾಗಿರುವ ಪ್ರದೇಶಗಳಲ್ಲಿ ಉತ್ತಮ ಸಂಪರ್ಕ ಒದಗಿಸುವುದು ಇದರ ಗುರಿಯಾಗಿದೆ. ಈ ಕ್ರಮವು ಗ್ರಾಹಕರಿಗೆ ಪರಿಹಾರವನ್ನು ನೀಡುವುದಲ್ಲದೇ ಮೊಬೈಲ್ ನೆಟ್‌ವರ್ಕ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.






