ಬೆಳಗಾವಿ :ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಅಃಖSಇಖಿI) ಬೆಳಗಾವಿಯಲ್ಲಿ, ಕೆನರಾ “ವಿದ್ಯಾಜ್ಯೋತಿ” ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ದಿನಾಂಕ ೧೪/೦೮/೨೦೨೫ ರಂದು ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತ್ತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ರವಿ. ಭಜಂತ್ರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರು ಮಾತನಾಡುತ್ತಾ ಕೆನರಾ ಬ್ಯಾಂಕಿನ ಮೂಲಕ ಉತ್ತಮ ರೀತಿಯ ಅರ್ಹ ಫಲಾನುಭವಿಗಳಿಗೆ ಶಿಷ್ಯವೇತನವನ್ನು ಕೊಡುತ್ತಿದ್ದು. “ವಿದ್ಯಾಜ್ಯೋತಿ ವಿದ್ಯಾರ್ಥಿವೇತನ ಹೆಸರೆ ಸೂಚಿಸುವಂತೆ ವಿದ್ಯೆ ಎನುವುದು ಜ್ಯೋತಿಯಾಗಿ ಬೆಳಗಬೇಕು ಎಂದು ತಿಳಿಸಿದರು.
ಅದರ ಮುಲಕ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕನ ಮುಖ್ಯ ಅಥಿತಿಯಾಗಿ ಶ್ರೀಮತಿ ಶ್ರೀವಿದ್ಯಾ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ ಕ್ಷೇತ್ರಿಯ ಕಾರ್ಯಾಲಯ ಬೆಳಗಾವಿ ಅವರು ಆಗಮಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಓದಿರಿ, ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂದು ತಿಳಿಸಿದರು. ಮುಂದಿನ ದೇಶದ ಭವಿಷ್ಯ ತಮ್ಮ ಕೈಯಲ್ಲಿದೆ ಎಂದು ತಿಳಿಸಿದರು. ಆದ ಕಾರಣ ಕೆನರಾ ಬ್ಯಾಂಕಿನ ಸಾಮಾಜಿಕ ಜವಾಬ್ದಾರಿಗಳ ಅದಿನದಲ್ಲಿ ಸರ್ಕಾರಿ/ ಅನುದಾನಿತ ಶಾಲೆಯಲ್ಲಿ ೫ ರಿಂದ ೧೦ ನೇ ತರಗತಿಯವರೆಗೆ ಓದುತ್ತಿರುವ ಎಸ್. ಸಿ, ಮತ್ತು ಎಸ್. ಟಿ ಪ್ರತಿಭಾನ್ವಿತ ಬಾಲಕಿಯರನ್ನು ಆಯ್ಕೆ ಮಾಡಿ, ಅದರಲ್ಲಿ ೫, ೬, ಮತ್ತು ೭ ನೇ ತರಗತಿಯ ಬಾಲಕಿಯರಿಗೆ ರೂ. ೩೦೦೦/- ಮತ್ತು ೮, ೯ ಮತ್ತು ೧೦ ನೇ ತರಗತಿಯ ಬಾಲಕಿಯರಿಗೆ ರೂ. ೫೦೦೦/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನೋರ್ವ ಅಥಿತಿಯಾದ ಶ್ರೀ ಪ್ರಶಾಂತ ಗೋಡಕೆ ಎಲ್. ಡಿ. ಎಮ್. ಕೆನರಾ ಬ್ಯಾಂಕ ಬೆಳಗಾವಿ. ಇವರು ಆರ್ಥಿಕ ಸಾಕ್ಷರತೆಯ ಕುರಿತು ಮಾಹಿತಿ ನೀಡಿದರು.
ಆರ್‌ಸೆಟಿಯ ಸಂಸ್ಥೆಯ ನಿರ್ದೇಶಕರಾದ ಶ್ರೀ ಪ್ರವೀಣ ಕೆ. ಎಸ್. ಇವರು ಮಾತನಾಡುತ್ತ, ತರಬೇತಿ ಸಂಸ್ಥೆಯಲ್ಲಿ ಸಿಗುವ ತರಬೇತಿಗಳನ್ನು ಪಡೆದು ನಂತರ ಅದರ ಮೂಲಕ ಸ್ವ ಉದ್ಯಮಿದಾರರನ್ನು ಮಾಡುತ್ತಿದೆ. ಆದ ಕಾರಣ ತಾವುಗಳು ಯಾರಾದರು ನಿರುದ್ಯೋಗಿಗಳು ಮತ್ತು ಸ್ವ ಉದ್ಯೋಗ ಆಸಕ್ತ ಪರಿಚಯವಿದ್ದವರನ್ನು. ನಮ್ಮ ತರಬೇತಿ ಸಂಸ್ಥೆಗೆ ಕಳುಹಿಸಿರಿ ಎಂದು ತಿಳಿಸಿದರು.