ವಿವೇಕವಾರ್ತೆ : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಡಿ ಗ್ಯಾಂಗ್ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ. “ಕಾನೂನು ಎಲ್ಲರಿಗೂ ಒಂದೇ. ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ.
ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಮುಂದಿನ ನ್ಯಾಯ ಹೋರಾಟ ಮಾಡಲು ಆರೋಪಿಗಳಿಗೆ ಅವಕಾಶ ಇದೆ, ಅದಕ್ಕೂ ದೇಶದ ಕಾನೂನಿನಲ್ಲಿ ಅವಕಾಶವಿದೆ. ನಾವು ಕಾನೂನನ್ನೇ ಪಾಲಿಸಬೇಕು” ಎಂದು ಅವರು ಹೇಳಿದ್ದಾರೆ.
ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ
ನಟ ದರ್ಶನ್ ಜಾಮೀನು ರದ್ದಾದ ಬೆನ್ನಲ್ಲೇ ಬೆಳಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದರು. ವಿಧಾನಸೌಧ ಲಾಂಜ್ನಲ್ಲಿ ನಡೆದ ಈ ಸಭೆಯಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮುಂದುವರಿಯಲು ಸಚಿವರು ಸೂಚಿಸಿದರು. ಕೋರ್ಟ್ ಕೂಡಲೇ ಶರಣಾಗಬೇಕು ಎಂದು ಹೇಳಿದೆ. ಹಾಜರಾಗದೆ ಹೋದರೆ ಕೋರ್ಟ್ ವಾರೆಂಟ್ ಜಾರಿಗೆ ತರಲಿದೆ. ಆದ್ದರಿಂದ ಕಾನೂನಿನ ಪ್ರಕಾರ ಪ್ರತಿಕ್ರಿಯೆ ಏನಿದೆಯೋ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.