ವಿಜಯಪುರ : ಜಿಲ್ಲೆಯ ಅಲಮೇಲ ತಾಲೂಕಿನ ಕಕ್ಕಳಮೇಲಿ ಗ್ರಾಮ ಪಂಚಾಯತಿ ನಿಜಕ್ಕೂ ಆದಿಲ್ ಶಾಹಿ ಸುಲ್ತಾನಾನ ವಶದಲ್ಲಿದೆ, ಅಲ್ಲಿರುವ ಸಿಬ್ಬಂದಿಗಳು ತಮ್ಮನ್ನ ತಾವು ಭಾರತದ ಪ್ರಜೆಗಳು, ಕರ್ನಾಟಕದ ನಾಗರೀಕರು ಅಂತ ತಿಳಿದುಕೊಂಡಿದ್ದು ಇಲ್ಲವೇ ಇಲ್ಲಾ, ಇನ್ನೂ ಅರಸರ ಆಳ್ವಿಕೆಯಲ್ಲಿ ಇದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಕಕ್ಕಳಮೇಲಿ ಗ್ರಾಮದಲ್ಲಿ ಪಂಚಾಯತಿ ಇದೆ ಅನ್ನೊದು ಕಾಗದಲ್ಲಿ ಹಾಗೂ ಬಿಲ್ಡಿಂಗ್ ಇರುವ ಕಾರಣಕ್ಕಾಗಿ ಇದೆ ಅನ್ನಬಹುದು ಅಷ್ಟೇ, ಅಲ್ಲಿ ಕೆಲಸ ಮಾಡುವ ಯಾವ ಸಿಬ್ಬಂದಿಯ ನೆರಳು ಸಹ ಕಾಣಸಿಗಲ್ಲ, ಬಡಪಾಯಿ ಅಟೆಂಡರ್ ಒಬ್ಬನ ಮೇಲೆ ಪಂಚಾಯತಿ ಬಿಟ್ಟು ತಮ್ಮ ವೈಯುಕ್ತಿಕ ಕೆಲಸಕ್ಕೆ ಆಚೆ ಹೊಗುವ ಸಿಬ್ಬಂದಿಗಳಿದ್ದಾರೆ.
ಈ ಪ್ರಕರಣದ ಬಗ್ಗೆ ಪಿಡಿಓ ಅವರಿಗೆ ಕರೆ ಮಾಡಿ ಕೇಳಿದರೆ ಸಿಗುವುದು ಉಡಾಫೆ ಉತ್ತರ, ಸರ್ಕಾರ ಬಯೋಮೆಟ್ರಿಕ್ ಮಾಡಿದ್ದರು ಸಹ ಅದು ಕೇವಲ ಹೆಸರಿಗಷ್ಟೇ, ಬೆಳಿಗ್ಗೆ ಬಂದು ಲಾಗಿನ್ ಆಗುವ ಸಿಬ್ಬಂದಿಗಳು ಸೂರ್ಯನೆತ್ತಿಯ ಮೇಲೆ ಬಂದ ತಕ್ಷಣ ಪಂಚಾಯತಿ ಕಚೇರಿಯಿಂದ ಬೆನ್ನು ಕೆಳಗೆ ಕಾಲು ಹಚ್ಚಿಕೊಂಡು ಓಡ್ತಾರೆ ಎಂದು ಸ್ಥಳಿಯ ಮುದುಕ ಹಾಸ್ಯಸ್ಪದವಾಗಿ ಹೇಳಿದ್ದು ಕಕ್ಕಳಮೇಲಿ ಗ್ರಾಮಪಂಚಾಯತಿಗೆ ಹಿಡಿದ ಕೈಗನ್ನಡಿಯಾಗಿದೆ.
ನರೇಗಾ ಕೆಲಸದಲ್ಲೂ ಗೊಲ್ಮಾಲ್ ಆರೋಪ..!?
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವ್ಯಕ್ತಿಗಳಿಂದ ಕೆಲಸ ಮಾಡಿಸುವ ಬದಲು ಮಶಿನರಿಗಳಿಂದ ಕೆಲಸ ಮಾಡಿಸಿ, ನಕಲಿ ಬಿಲ್ ಸೃಷ್ಠಿ ಮಾಡಿ ಹಣ ಲೂಟಿ ಮಾಡ್ತಾರೆ ಎನ್ನುವ ಆರೋಪವೂ ಸಹ ಗ್ರಾಮಸ್ಥರಿಂದ ಬಂದಿದೆ, ಪಂಚಾಯತಿ ಶುರುವಾಗಿ 9 ವರ್ಷ ಕಳೆದಿದ್ದರು ಇದುವರೆಗೆ ಗ್ರಾಮ ಪ್ರಗತಿ ಸಭೆ ನಡೆದಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ, ಶುದ್ಧ ಕುಡಿಯುವ ನೀರಿನ ಘಟಕವಿದ್ದರು ಸಹ ಅದರ ಉಪಯೋಗ ಸಾರ್ವಜನಿಕರಿಗೆ ಆಗುತ್ತಿಲ್ಲ. ನೀರಿನ ಘಟಕದ ಕಡೆ ಜನ ಕುಳಿತು ಹರಟೆ ಹೊಡೆಯುವ ಸ್ಥಳವಾಗಿದೆ, ನೀರಿನ ಘಟಕದಲ್ಲೂ ಅವ್ಯವಹಾರ ನಡೆದಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶವಾಗಿದೆ.
ಸಕಾಲಕ್ಕೆ ಸಿಗದ ಸೌಲಭ್ಯಗಳು..!
ಯಾರೇ ಪಂಚಾಯತಿಗೆ ಹೊದರು ಸಹ ಮನವಿ ಅಥವಾ ಲೇಟರ್ ಕೊಟ್ಟರೆ ಸ್ವಿಕೃತಿ ಪಡೆಯುವುದಕ್ಕೆ ಸಂಜೆ 6.30 ತನಕ ಕಾಯಲೇಬೇಕು, ಸಿಬ್ಬಂದಿಗಳು ಆಸ್ಪತ್ರೆಯ ಕುಂಟು ನೆಪ ಹೇಳಿದರೆ ಸೋ ಕಾಲ್ಡ್ ಪಿಡಿಓ ಆಸಾಮಿ ಮಿಟಿಂಗ್ ನೆಪ ಹೇಳಿ ಎಸ್ಕೆಪ್ ಆಗಲು ಪ್ರಯತ್ನಿಸುತ್ತಾರೆ.
ಧಿಮಾಕಿನ ಮಾತಿಗೆ ಹೆಸರುವಾಸಿ ಪಿಡಿಓ
ನಮ್ಮ ಸುದ್ದಿಯ ತಲೆಬರಹ ಇರುವಂತೆ ಕಕ್ಕಳಮೇಲಿ ಗ್ರಾಮಕ್ಕೆ ತಾನೇ ಸುಲ್ತಾನ ಎನ್ನುವಂತೆ ಪೊಸು ಕೊಟ್ಟು ದುರಹಂಕಾರದಿಂದ ಮಾತನಾಡುತ್ತಾನೆ ಪಿಡಿಓ, ಅಲ್ಲಾ ಸ್ವಾಮಿ ಆಫಿಸ್ ಸಮಯದಲ್ಲಿ ಎಲ್ಲಿದ್ದಿಯಾ ಅಂತ ಪ್ರಶ್ನೆ ಮಾಡಿದರೆ ಬೆಂಕಿ ಬಿದ್ದ ಹಾಗೆ ಧಿಮಾಕಿನಿಂದ ಮಾತನಾಡುವುದಕ್ಕೆ ನಿನ್ಯಾರು..? ನೀನು ಸಾರ್ವಜನಿಕರ ಸೇವಕ ಅನ್ನುವುದು ನೆನಪಿರಲಿ, ಇಂತಹ ದುರಹಂಕಾರಿ ಪಿಡಿಓ ಮೇಲೆ ತನಿಖೆ ಮಾಡಿ ಕಕ್ಕಳಮೇಲಿ ಗ್ರಾಮ ಪಂಚಾಯತಿಯಲ್ಲಿ ಆಗಿರುವ ಅವ್ಯವಹಾರದ ಕೂಲಂಕುಶವಾಗಿ ತನಿಖೆಯಾಗಬೇಕೆನ್ನುವುದು ನಮ್ಮ ಹಾಗೂ ಸಾರ್ವಜನಿಕರ ಆಶಯವಾಗಿದೆ. ಹಾಗೂ ಈ ಪ್ರಕರಣವನ್ನ ಇಲ್ಲಿಗೆ ಬಿಡದೇ, ನಿರಂತರವಾಗಿ ಸುದ್ದಿ ಬಿತ್ತರಿಸಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರೀಯಾಂಕ್ ಖರ್ಗೆ ಅವರ ಗಮನಕ್ಕೆ ತಂದು ಕಕ್ಕಳಮೇಲಿ ಗ್ರಾಮ ಪಂಚಾಯತಿಯನ್ನ ಸರಿಯಾದ ದಾರಿಯಲ್ಲಿ ತರುವುದೇ ನಮ್ಮ ಆಶಯವಾಗಿದೆ.