18 ವರ್ಷ ಕಾನೂನು ಹೋರಾಟ, 44 ವರ್ಷಗಳ ದಾಂಪತ್ಯ; ವಿಚ್ಛೇದಿತ ಪತ್ನಿಗೆ ಪರಿಹಾರ ನೀಡಲು ಬೆಳೆ, ಭೂಮಿ ಮಾರಾಟ ಮಾಡಿದ 70 ವರ್ಷದ ‘ರೈತ’!

WhatsApp Group Join Now
Telegram Group Join Now
Instagram Account Follow Now

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ರ ಕೌಟುಂಬಿಕ ಹಿಂಸಾಚಾರ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಹರಿಯಾಣದಲ್ಲಿ 70 ವರ್ಷದ ರೈತನೊಬ್ಬ ಪತ್ನಿಗೆ ಪರಿಹಾರ ನೀಡಲು ಸುಮಾರು 3 ಕೋಟಿ ರೂ ಮೌಲ್ಯದ ಬೆಳೆ ಮತ್ತು ಭೂಮಿ ಮಾರಾಟ ಮಾಡಿದ್ದಾನೆ.

ಹೌದು.. ಹರ್ಯಾಣದ ಸುಮಾರು 70 ವರ್ಷ ವಯಸ್ಸಿನ ರೈತ ಸುಭಾಷ್ ಚಾಂದ್ ಕೊನೆಗೂ ತನ್ನ 18 ವರ್ಷಗಳ ಸುದೀರ್ಘ ಕಾನೂನು ಹೋರಾಟ ಕೊನೆಗೊಳಿಸಿದ್ದು, ವಿಚ್ಛೇದಿತ ಪತ್ನಿಗೆ ಪರಿಹಾರ ನೀಡಲು ಸುಮಾರು 3 ಕೋಟಿ ರೂ ಮೌಲ್ಯದ ಬೆಳೆ ಮತ್ತು ಭೂಮಿ ಮಾರಾಟ ಮಾಡಿ ಪರಿಹಾರ ನೀಡಿದ್ದಾನೆ.

ವಿಚಿತ್ರವಾದರೂ ಇದು ಸತ್ಯ.. ರೈತ ಸುಭಾಷ್ ಚಾಂದ್ ಮತ್ತು ಈಗ ವಿಚ್ಛೇದಿತರಾಗಿರುವ 73 ವರ್ಷ ವಯಸ್ಸಿನ ಅವರ ಪತ್ನಿ 1980 ರಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ 3 ಮಕ್ಕಳು ಕೂಡ ಇದ್ದಾರೆ. ಬಳಿಕ ಈ ಜೋಡಿ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು.

ಪತ್ನಿಯ ಕ್ರೌರ್ಯವನ್ನು ಉಲ್ಲೇಖಿಸಿ ರೈತ ಸುಭಾಷ್ ಚಾಂದ್ 2006 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ 7 ವರ್ಷಗಳ ನಂತರ, 2013 ರಲ್ಲಿ ಕರ್ನಾಲ್‌ನಲ್ಲಿರುವ ಕುಟುಂಬ ನ್ಯಾಯಾಲಯವು ಅವರ ವಿಚ್ಛೇದನದ ಅರ್ಜಿಯನ್ನು ತಿರಸ್ಕರಿಸಿತು.

ನಂತರ, ಸುಭಾಷ್ ಚಾಂದ್ ಮದುವೆಯನ್ನು ವಿಸರ್ಜಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ವಿಷಯವು 11 ವರ್ಷಗಳ ಕಾಲ ಬಾಕಿ ಉಳಿದಿದ್ದರಿಂದ, ಈ ವರ್ಷದ ನವೆಂಬರ್‌ನಲ್ಲಿ, ಮೊಕದ್ದಮೆಯನ್ನು ಕೊನೆಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಹೈಕೋರ್ಟ್ ಮಧ್ಯಸ್ಥಿಕೆ ಮತ್ತು ರಾಜಿ ಕೇಂದ್ರವನ್ನು ಕೇಳಿತ್ತು.

ಪರಿಹಾರಕ್ಕಾಗಿ ಬೆಳೆ ಮತ್ತು ಭೂಮಿ ಮಾರಿದ ರೈತ

ಇನ್ನು ಸಂಧಾನ ಮತ್ತು ಚರ್ಚೆಯ ನಂತರ, ರೈತ ಸುಭಾಷ್ ಚಾಂದ್ ಮತ್ತು ಆತನ ಪತ್ನಿ ಮತ್ತು 3 ಮಕ್ಕಳು ಶಾಶ್ವತ ಜೀವನಾಂಶವಾಗಿ 3 ಕೋಟಿ ರೂ. ಪಾವತಿಸಿದರೆ ಒಪ್ಪಿಕೊಳ್ಳುವುದಾಗಿ ಹೇಳಿದರು. ಇದನ್ನು ಒಪ್ಪಿದ ರೈತ ಸುಭಾಷ್ ಚಾಂದ್ ತನ್ನ ಕೃಷಿ ಭೂಮಿಯನ್ನು ಮಾರಿ 2,16,00,000 ರೂ.ಗಳನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಮತ್ತು ಬೆಳೆ ಮಾರಿದ ಹಣ 50 ಲಕ್ಷ ರೂ ಮತ್ತು ಚಿನ್ನಾಭರಣ ಮಾರಿದ ಹಣ ಸುಮಾರು 40 ಲಕ್ಷ ರೂ ನಗದು ಎಲ್ಲ ಒಟ್ಟು ಒಟ್ಟು 3.7 ಕೋಟಿ ರೂ ಪತ್ನಿ ಮತ್ತು 3 ಮಕ್ಕಳಿಗೆ ಪಾವತಿಸಿದ ನಂತರ ವಿಚ್ಛೇದನಕ್ಕೆ ಅನುಮೋದನೆ ನೀಡಲಾಗಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment