ಗೆಳೆಯನ ನಂಬಿ ಜೀವ ಬಿಟ್ಟ ಯುವತಿ.. ಬೆಂಗಳೂರು ಪ್ರಿಯಾಂಕಾ ದುರಂತದ ರಹಸ್ಯ ಬಯಲು; ಏನದು?

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ರಾಜಾಜಿನಗರದ ಬಿಕಾಂ ವಿದ್ಯಾರ್ಥಿ ಪ್ರಿಯಾಂಕಾ ಸಾವಿನ ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬಣ್ಣ, ಬಣ್ಣದ ಕನಸು ಕಂಡಿದ್ದ ಪ್ರಿಯಾಂಕಾ ಬಾಳಲ್ಲಿ ಗೆಳೆಯ ಚೆಲ್ಲಾಟವಾಡಿದ್ದು ಈ ದುರಂತದ ರಹಸ್ಯ ಇಂದು ಬಯಲಾಗಿದೆ.

ಕಳೆದ ನವೆಂಬರ್ 29ರಂದು ಎಂಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ 19 ವರ್ಷದ ಪ್ರಿಯಾಂಕಾ ಸಾವಿಗೆ ಶರಣಾಗಿದ್ದರು. ಮನೆ ಮಹಡಿಯಲ್ಲಿ ಪ್ರಿಯಾಂಕಾ ಅವರ ಮೃತದೇಹ ನೇತಾಡುವ ಸ್ಥಿತಿಯಲ್ಲಿತ್ತು. ಆರಂಭದಲ್ಲಿ ಹಣದ ವಿಷಯಕ್ಕೆ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಗೆಳೆಯನ ವಂಚನೆ ಜಾಲ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಂಭೋಗದಿಂದ ಸಿಗುವ ಆರೋಗ್ಯ ಲಾಭಗಳೇನು..? ಹೃದ್ರೋಗವನ್ನು ದೂರವಿಡುತ್ತದೆ S*X..!

ಪ್ರಿಯಾಂಕಾ ಹಾಗೂ ದಿಗಂತ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ದಿಗಂತ್ ತನ್ನ ಸ್ನೇಹಿತೆ ಪ್ರಿಯಾಂಕಾಗೆ ಹಣ ಡಬ್ಬಲ್ ಹಾಗೂ BMW ಕಾರು ಕೊಡಿಸುವ ಆಸೆ ತೋರಿಸಿದ್ದಾನೆ. ದಿಗಂತ್ ಮಾತು ನಂಬಿದ ಪ್ರಿಯಾಂಕಾ ಮನೆಯವರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ತಂದು ಕೊಟ್ಟಿದ್ದಾಳೆ.

ಪ್ರಿಯಾಂಕಾಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದ ದಿಗಂತ್ ಅದನ್ನು ಅಡಮಾನವಿಟ್ಟಿದ್ದ. ಹಲವು ದಿನ ಕಳೆದರೂ ಹಣವನ್ನು ಕೊಡದೆ, ಚಿನ್ನವನ್ನು ವಾಪಸ್ ನೀಡದೆ ಸತಾಯಿಸಿದ್ದ. ಹಲವು ಬಾರಿ ದಿಗಂತ್ ಬಳಿ ಪ್ರಿಯಾಂಕಾ ಚಿನ್ನವನ್ನು ವಾಪಸ್ ಕೊಡು ಎಂದು ಕೇಳಿದ್ದಳು. ಆದರೆ ದಿಗಂತ್ ಕೇರ್ ಮಾಡಿರಲಿಲ್ಲ.

ಇದನ್ನೂ ಓದಿ: ಶ್ವಾಸಕೋಶದಲ್ಲಿ ಕಫ ಕಟ್ಟಿದರೆ ಹೀಗೆ ಪರಿಹರಿಸಿಕೊಳ್ಳಿ..

ಪ್ರಿಯಾಂಕಾ ಮನೆಯಲ್ಲಿದ್ದ ಚಿನ್ನಾಭರಣ ತಾನು ತೆಗೆದುಕೊಂಡಿರುವ ವಿಷಯ ಮನೆಯವರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿದ್ದಳು. ದಿಗಂತ್ ಚಿನ್ನಾಭರಣ ವಾಪಸ್ ಕೊಡದ ಕಾರಣಕ್ಕೆ ಪ್ರಿಯಾಂಕಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಸಾಯುವ ಮುನ್ನ ಪ್ರಿಯಾಂಕಾ ತನ್ನ ಸಾವಿಗೆ ದಿಗಂತ್ ಕಾರಣ ಎಂದು ಡೆತ್ ನೋಟ್‌ ಬರೆದಿಟ್ಟಿದ್ದರು. ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಆರೋಪಿ ದಿಗಂತ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪ್ರಿಯಾಂಕಾ ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಂಡು ಸಾವಿಗೆ ಶರಣಾಗಿದ್ದರು. ಆ ಮೊಬೈಲ್‌ನ ಪೌಚ್‌ನಲ್ಲೇ ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಮೃತದೇಹ ಪರಿಶೀಲನೆ ವೇಳೆ ಪೊಲೀಸರಿಗೆ ಆ ಡೆತ್‌ ನೋಟ್ ಪತ್ತೆಯಾಗಿದೆ. ಡೆತ್ ನೋಟ್‌ನಲ್ಲಿ ಪ್ರಿಯಾಂಕಾ ತನ್ನ ಸಾವಿನ ಕಾರಣ ಏನು ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment