ನಾವೆಲ್ಲರೂ ಕೂಡ ಗಮನಿಸಿರುವಂತೆ ನಮ್ಮ ಸುತ್ತಮುತ್ತ ಇರುವಂತಹ ಹೆಚ್ಚಿನ ಜನರಲ್ಲಿ ನಾವು ಈ ಹೊಟ್ಟೆ ಬೊಜ್ಜು ಇರುವಂತಹ ಜನರನ್ನು ಗಮನಿಸಬಹುದು. ಈ ಒಂದು ಹೊಟ್ಟೆ ಬೊಜ್ಜಿನಿಂದಲೇ ಇನ್ನೂ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಹೊಟ್ಟೆ ಬೊಜ್ಜಿನ ಸಮಸ್ಯೆ ಬಾರದಂತೆ ಉತ್ತಮವಾದಂತಹ ಜೀವನಶೈಲಿಯನ್ನು ಉತ್ತಮವಾದಂತಹ ಆಹಾರ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಮೇಲೆ ಹೇಳಿದಂತೆ ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಬಲವಾದ ಸಾಧ್ಯತೆ ಇರುತ್ತದೆ. ಹಾಗಾದರೆ ಈ ದಿನ ಈ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುವುದಕ್ಕೆ ನಾವು ಯಾವ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.
ಹಾಗೂ ಯಾವ ಆಹಾರ ಪದಾರ್ಥಗಳನ್ನು ಯಾವ ಸಮ ಯದಲ್ಲಿ ತಿಂದರೆ ಅದರಿಂದ ನಮಗೆ ಉತ್ತಮವಾದಂತಹ ಫಲಿತಾಂಶ ಸಿಗುತ್ತದೆ. ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡ ಬಾರದು ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತೆ ನಮ್ಮ ಆಹಾರ ಪದ್ಧತಿ ಯಾವ ರೀತಿಯಾಗಿ ಇರಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ನಾವೆಲ್ಲರೂ ಕೂಡ ಗಮನಿಸಿರುವಂತೆ ನಮ್ಮ ಭಾರತ ದೇಶದಲ್ಲಿರುವಂತಹ ಹೆಚ್ಚಿನ ಜನರಿಗೆ ಈ ಹೊಟ್ಟೆ ಬೊಜ್ಜಿನ ಸಮಸ್ಯೆ ಇರುವುದನ್ನು ನಾವು ಕಾಣಬಹುದು. ಆದರೆ ಬೇರೆ ದೇಶಗಳನ್ನು ಹೋಲಿಸಿಕೊಂಡರೆ ಅಲ್ಲಿ ಹೆಚ್ಚಿನ ಸಂಪೂರ್ಣವಾದಂತಹ ಅಂದರೆ ಅವರ ದೇಹ ಪೂರ್ತಿ ಬೊಜ್ಜಿನಿಂದ ತುಂಬಿರುವಂತಹ ಜನರನ್ನು ಕಾಣಬಹುದು ಆದರೆ ಕೇವಲ ಹೊಟ್ಟೆ ಬೊಜ್ಜಿನ ಸಮಸ್ಯೆ ಹೊಂದಿರುವಂತಹ ಜನರನ್ನು ಕಾಣುವುದು ತುಂಬಾ ಕಡಿಮೆ.
ಇದಕ್ಕೆ ಕಾರಣ ಏನು ಎಂದರೆ ನಮ್ಮಲ್ಲಿ ಹೆಚ್ಚಿನ ಜನ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ. ಇದರಿಂದಾಗಿ ಫ್ಯಾಟಿ ಲಿವರ್ ಜಾಸ್ತಿಯಾಗುತ್ತಿದೆ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಹೀಗೆ ಹತ್ತು ಹಲವಾರು ಕಾಯಿಲೆಗಳು ಬರುವುದಕ್ಕೆ ಕಾರಣವಾಗಿದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ಜೀವನಶೈಲಿಯನ್ನು ಹಾಗೂ ಉತ್ತಮವಾದಂತಹ ಆಹಾರ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿ ಯೊಬ್ಬ ವ್ಯಕ್ತಿಯೂ ಕೂಡ ಹೆಚ್ಚಾಗಿ ಹಸಿರು ಸೊಪ್ಪುಗಳು ತರಕಾರಿಗಳು ಮೊಳಕೆ ಕಾಳುಗಳು ಇಂತಹ ಉತ್ತಮವಾದಂತಹ ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.
ಇದು ನಮ್ಮ ಆರೋಗ್ಯ ವನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ನಮ್ಮನ್ನು ಕಾಯಿಲೆಗಳಿಂದ ದೂರವಿಡುತ್ತದೆ. ಹಾಗೂ ಬಹಳ ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿನಿತ್ಯ ಯೋಗಾಭ್ಯಾಸ ಪ್ರಾಣಾಯಾಮ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಬೇಕು.
ಅದರ ಜೊತೆ ಮೇಲೆ ಹೇಳಿದ ಹಾಗೆ ಉತ್ತಮವಾದ ಆಹಾರ ಶೈಲಿಯನ್ನು ಕೂಡ ಅನುಸರಿಸಬೇಕು ಇದರ ಜೊತೆ ನಿಮ್ಮ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾವು ಯಾವ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ನೋಡುವುದಾದರೆ. ನಾವು ರುಚಿಯಾದಂತಹ ಆಹಾರವನ್ನೇ ಸೇವಿಸಬಹುದು ಆದರೆ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಇರುವಂತಹ ಆಹಾರವನ್ನು ಹೊರತು ಪಡಿಸಿ ಹೆಚ್ಚಿಗೆ ಸಿಹಿ ಅಂಶ ಇರದೆ ಇರುವಂತಹ ಆಹಾರ ಪದಾರ್ಥವನ್ನು ಹೊರತು ಪಡಿಸಿ.
ಹಾಲು, ಹಸಿ ತರಕಾರಿಗಳು, ಬೇಯಿಸಿದ ತರಕಾರಿ, ಹಣ್ಣು, ಇಂತಹ ಹೆಚ್ಚು ಪ್ರೋಟೀನ್ ಇರುವಂತಹ ಆಹಾರ ಪದಾರ್ಥವನ್ನು ನಾವು ಮೂರು ತಿಂಗಳ ತನಕ ಸೇವನೆ ಮಾಡಿದ್ದೆ ಆದರೆ ನಮ್ಮ ಹೊಟ್ಟೆಯ ಬೊಜ್ಜಿನ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.