‘ತಾಯಿಯೇ ದೇವರು’ ಎಂದು ಗಾದೆ ಮಾತು ಇದೆ. ತಾಯಿಯ ಪ್ರಾಮುಖ್ಯತೆ, ನಿಷ್ಕಲ್ಮಶ ಪ್ರೇಮವನ್ನು ಮಕ್ಕಳಿಗೆ ಅರ್ಥ ಮಾಡಿಸಲು ಹಿರಿಯರು ಅದೆಷ್ಟು ವಾಕ್ಯಗಳಲ್ಲಿ ತಾಯಿಯನ್ನು ಬೆಲೆ ಕಟ್ಟಲಾಗದ ಮತ್ತು ಯಾರು ಭಾರಿಸಲಾಗದ ಸಂಬಂಧ, ವ್ಯಕ್ತಿ ಎಂದೆಲ್ಲ ವರ್ಣಿಸುತ್ತಾರೆ. ಆದರೆ ಇದೀಗ ಅಂತಹ ತಾಯಿಯಿಂದಲೇ ಮುಗ್ಧ ಮಕ್ಕಳಿಬ್ಬರ ಹತ್ಯೆ ಆಗಿರೋದು ಬೆಳಕಿಗೆ ಬಂದಿದ್ದು ಎಲ್ಲರನ್ನು ತಲ್ಲಣಗೊಳಿಸಿದೆ.
ಇದನ್ನೂ ಓದಿ : ಈ ಹೂವು ಸಿಕ್ಕರೆ ನೀವು ಕೋಟ್ಯಾಧಿಪತಿ ಆಗ್ತೀರ.!
ತನ್ನ ಅನೈತಿಕ ಸಂಬಂಧಕ್ಕೆ ತನ್ನ ಮಕ್ಕಳು ಅಡ್ಡಿಯಾಗಬಹುದು ಎಂದು ಪ್ರಿಯಕರನೋಟ್ಟಿಗೆ ಸೇರಿ ಇಬ್ಬರು ಕಂದಮ್ಮಗಳನ್ನ ಹತ್ಯೆಗೈದು ಸ್ಮಶಾನದಲ್ಲಿ ಹೂತಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.
ಹೀಗೆ ತನ್ನ ಸ್ವಂತ ಮಕ್ಕಳನ್ನು ಹತ್ಯೆಗೈದ ಪಾಪಿಯ ಹೆಸರು ಸ್ವೀಟಿ ಹಾಗು ಆಕೆಯ ಪ್ರಿಯಕರನ ಹೆಸರು ಗ್ರೆಗೊರಿ. ಇವರಿಬ್ಬರೂ ಇದೀಗ ಜೈಲುಪಾಲಾಗಿದ್ದು ಇವರೆ ನೀಡಿದ ಮಾಹಿತಿಯ ಮೇರೆಗೆ ಹೂತಿಟ್ಟಿದ್ದ ಮಕ್ಕಳ ಶವಗಳನ್ನು ಹೊರತೆಗೆದು ಪರೀಕ್ಷೆ ನಡೆಸಲಾಗುತ್ತಿದೆ. ರಾಮನಗರದ ಎಪಿಎಂಸಿ ಬಳಿಯಿರುವ ಸ್ಮಶಾನದಲ್ಲಿ 2 ವರ್ಷದ ಕಬಿಲ ಹಾಗು 11 ತಿಂಗಳ ಕಬೀಲನ್ ಎಮ್ಬಿಬ್ಬರ ಮಕ್ಕಳನ್ನು ಕೊಲೆಗೈದು ಹುತಿಟ್ಟಿದ್ದರಂತೆ.
ಇದನ್ನೂ ಓದಿ : ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರ.? ಹಾಗಾದರೆ ಈ ಮಾಹಿತಿ ನೀವು ನೋಡಲೇಬೇಕು.!
ತಹಶೀಲ್ದಾರ ತೇಜಸ್ವಿನಿ, ಪೊಲೀಸ್ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಸ್ವೀಟಿ, ಆಕೆಯ ಪತಿ ಶಿವ ಮತ್ತು ಪ್ರಿಯಕರ ಗ್ರೆಗೊರಿ ರವರ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಪಂಗಪೂರಿನ ಎ.ಕೆ ಕಾಲೋನಿ ನಿವಾಸಿ ಮನೆಗೆಲಸದ ಸ್ವೀಟಿ ಮತ್ತು ಕಾಲ್ ಸೆಂಟರ್ ಉದ್ಯೋಗಿ ಬಾಣಸವಾಡಿಯ ಫ್ರಾನ್ಸಿಸ್ ಅಕ್ರಮ ಸಂಬಂಧ ಹೊಂದಿದ್ದರು.ಸೆಪ್ಟೆಂಬರ್ ತಿಂಗಳಲ್ಲಿ ಸ್ವೀಟಿ ತನ್ನಿಬ್ಬರ ಮಕ್ಕಳ ಸಮೇತ ಪ್ರಿಯಕರನ ಜೊತೆಗೆ ರಾಮನಗರಕ್ಕೆ ವಲಸೆ ಬಂದು ಜೋಡಿ ದಂಪತಿಗಳು ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದುಕೊಂಡಿದ್ದರಂತೆ.
ಹೀಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು ಎಂದು ಒಂದೇ ವಾರದ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕೊಂದು ಅಂತ್ಯಕ್ರಿಯೆ ನಡೆಸಿದ್ದ ಆರೋಪಿಗಳು. ಸ್ಮಶಾನದ ಕಾವಲುಗಾರನಿಗೆ ಅದೇ ಕೋ ಇವರಿಬ್ಬರ ನಡುವಳಿಕೆಯ ಮೇಲೆ ಅನುಮಾನ ಬಂದು ಇವರ ಫೋಟೋ ವಿಡಿಯೋಗಳನ್ನು ಪೊಲೀಸರಿಗೆ ಕಳುಹಿಸಿ ಮಾಹಿತಿ ನೀಡಿದ್ದಾನೆ. ಇನ್ನೊಂದೆಡೆ ಸ್ವೀಟಿಯ ಪತಿ ಹೆಂಡತಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಎಂದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೆಂಡತಿ ಮಕ್ಕಳು ರಾಮನಗರದಲ್ಲಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪತಿ ಶಿವನಿಗೆ ಮಕ್ಕಳು ಮೃತಪಟ್ಟಿರುವ ವಿಷಯ ತಿಳಿದು ರಾಮನಗರದ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳನ್ನು ಬಂಧಿಸುತ್ತಾರೆ. ಕಾಮದ ಫೋಟೋಗಳ ಸಹಾಯದಿಂದ ಇಬ್ಬರ ಆರೋಪಿಗಳ ವಿರುದ್ಧ ಕೆಸು ದಾಖಲಾಗಿ ಸಂಪೂರ್ಣ ಮಾಹಿತಿ ಅವರ ಬಿದ್ದಿದೆ.