ಶ್ರೀಮಂತರಾಗುವ ಕನಸು ಯಾರಿಗೆ ತಾನೇ ಇರುವುದಿಲ್ಲ. ಆ ಕನಸನ್ನು ನನಸು ಮಾಡಿಕೊಳ್ಳಬೇಕು ಅಂತ ಹಗಲು ಇರುಳು ದುಡಿಯುತ್ತಾನೆ ಇರುತ್ತಾರೆ. ಆದರೂ ಕೂಡ ಆ ಕನಸು ನನಸಾಗುವ ಯಾವುದೇ ಲಕ್ಷಣವೂ ಕೂಡ ಕಾಣಿಸುವುದಿಲ್ಲ. ಈ ನಿಮ್ಮ ಕನಸನ್ನು ನನಸು ಮಾಡುವ ಶಕ್ತಿ ಆ ಒಂದು ಗಿಡದಲ್ಲಿದೆ ಹಾಗಾದರೆ ಆ ಗಿಡ ಯಾವುದು ಎಂದು ಈಗ ತಿಳಿಯೋಣ.
ಅಲೋವೆರಾ ಗಿಡವನ್ನು ಎಲ್ಲರೂ ಕೂಡ ನೋಡಿರುತ್ತೀರಾ. ಮನೆ ಮುಂದೆ ಸ್ವಲ್ಪ ಜಾಗ ಇದ್ದರೆ ಅಲ್ಲಿಯೇ ಈ ಗಿಡವನ್ನು ಬೆಳೆಸುತ್ತೇವೆ. ಇನ್ನು ಕೆಲವು ಜನ ಮನೆಯ ಒಳಗಡೆ ಮನೆಯ ಹೊರಗಡೆ ಒಂದು ಪುಟ್ಟ ಕುಂಡಲವನ್ನು ಇಟ್ಟು ಈ ಗಿಡವನ್ನು ಬೆಳೆಸುತ್ತಾರೆ. ಇನ್ನು ಕೆಲವು ಜನ ಈ ಗಿಡವನ್ನು ಮನೆಯ ಒಳಗಡೆ ತಲೆಕೆಳಗು ಮಾಡಿ ನೇತು ಹಾಕಿರುತ್ತಾರೆ.
ಇದನ್ನು ಓದಿ : ಐಎಎಸ್ ಆಫೀಸರ್ ಮೇಲೆ ರಾಜಕಾರಣಿ ಆರೋಪ; ನೊಂದ ಅಧಿಕಾರಿ ಆತ್ಮಹತ್ಯೆಗೆ ಶರಣು!
ಈ ರೀತಿ ಹಾಕುವುದರಿಂದ ಮನೆಯ ಒಳಗಡೆ ಕೆಟ್ಟ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಹೆಸರಿಗೆ ಗಿಡ ವಾಗಿದ್ದರೂ ಇದು ಉಳಿದೆಲ್ಲಾ ಗಿಡಗಳಿಗಿಂತ ತುಂಬಾ ವಿಭಿನ್ನ. ಇದರಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ ಎಲೆಗಳು ಇದ್ದರೂ ಆ ಒಂದೊಂದು ಎಲೆಯೂ ಗಿಡದ ಕಾಂಡದಂತೆ ಇರುತ್ತದೆ.
ಅದೇ ಎಲೆಯ ಸುತ್ತಲೂ ಪುಟ್ಟ ಮುಳ್ಳುಗಳು. ಮೈಮರೆತು ಅದನ್ನು ಮುಟ್ಟಿದರು ಕೂಡ ಚುರ್ ಎಂದುಬಿಡುತ್ತದೆ. ಹಾಗಾದರೆ ಈ ಗಿಡದ ಉಪಯೋಗ ಏನು ಇಲ್ಲ ಎಂದು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಈ ಗಿಡ ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿದೆ. ಅದರಲ್ಲೂ ಚರ್ಮದ ಹಾಗೂ ಮುಖದ ಕಾಂತಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಇದನ್ನು ಓದಿ : ನೀವು ಕಾಲಿಗೆ ಕಪ್ಪು ದಾರ ಕಟ್ಟುತ್ತೀರ.? ಹಾಗಾದರೆ ಈ ಮಾಹಿತಿ ನೀವು ನೋಡಲೇಬೇಕು.!
ಇದಿಷ್ಟು ಎಲ್ಲರಿಗೂ ಗೊತ್ತಿರುವ ವಿಷಯ. ಇದರಲ್ಲೇನು ವಿಶೇಷ ಎಂದು ಹೇಳಬಹುದು. ಆದರೆ ಇದರಲ್ಲಿ ವಿಶೇಷತೆ ಇದೆ ಅದು ಏನೆಂದರೆ ಇದೇ ಅಲೋವೆರಾ ಗಿಡವನ್ನು ಮಾಂತ್ರಿಕರು ತಮ್ಮ ತಂತ್ರ ಮಂತ್ರ ಸಿದ್ಧಿ ಗಾಗಿ ಬಳಸಿಕೊಳ್ಳುತ್ತಾರೆ. ಯಾರಾದರೂ ಶತ್ರು ಕಾಟ ಗಳಿಂದ ರೋಸಿ ಹೋಗಿದ್ದಲ್ಲಿ, ಯಾರಾದರೂ ಸಮ್ಮೋಹನಕ್ಕೆ ಒಳಗಾಗಿದ್ದಲ್ಲಿ, ಅದರಿಂದ ಮುಕ್ತಿ ಕೊಡಿಸುವುದಕ್ಕೆ ಹಾಗೂ ಒಂದೊಂದು ಪೈಸೆಗೂ ಒದ್ದಾಡುತ್ತಾ ಇದ್ದಲ್ಲಿ, ಇದೇ ಅಲೋವೆರಾ ಗಿಡದಿಂದ ಅವರ ಒಂದೊಂದು ಸಮಸ್ಯೆಗೂ ಕೂಡ ಮುಕ್ತಿ ಕೊಡಿಸಲಾಗುತ್ತದೆ.
ಒಬ್ಬ ಆರೋಗ್ಯವಂತ ವ್ಯಕ್ತಿಯ ಮೇಲೆ ಒಂದರ ಮೇಲೆ ಒಂದು ಚಿತ್ರ ವಿಚಿತ್ರವಾದ ರೋಗಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಯಾವುದೇ ಚಿಕಿತ್ಸೆ ಕೊಟ್ಟರು ಸಹ ಅವೆಲ್ಲವೂ ಕೂಡ ವ್ಯರ್ಥವಾಗುತ್ತಿರುತ್ತದೆ.
ಇದನ್ನು ಓದಿ : ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ
ಹೀಗೆಲ್ಲ ಆಗುವುದಕ್ಕೆ ಕಾರಣ ಏನಿರಬಹುದು ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ. ಇದಕ್ಕೆಲ್ಲಾ ಕಾರಣ ನಮ್ಮ ದೇಹದಲ್ಲಿರು ವಂತಹ ನಕಾರಾತ್ಮಕ ಶಕ್ತಿ. ಇದೇ ಶಕ್ತಿ ದುಷ್ಟ ಶಕ್ತಿಗಳನ್ನು ಸಹ ಹಿಡಿದಿಟ್ಟು ಕೊಂಡಿರುತ್ತದೆ. ಅದರ ಪರಿಣಾಮವೇ ದೊಡ್ಡ ದೊಡ್ಡ ಕಾಯಿಲೆಗಳು. ಹಾಗಾದರೆ ನಾವು ದುಷ್ಟ ಶಕ್ತಿಗಳಿಂದ ಹೇಗೆ ದೂರ ಇರಬೇಕು ಎನ್ನುವು ದನ್ನು ಈಗ ತಿಳಿಯೋಣ.
ನಮ್ಮ ದೇಹ ಪಂಚ ತತ್ವಗಳಿಂದ ರೂಪು ಗೊಂಡಿರುತ್ತದೆ. ಅದರಲ್ಲೂ ಮಣಿಪುರ ಚಕ್ರ ಪ್ರಮುಖವಾಗಿರುವುದು. ಈ ಚಕ್ರದಲ್ಲಿ ಅಗ್ನಿ ತತ್ವ ಪ್ರಮುಖವಾಗಿದೆ. ಈ ತತ್ವದಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಿದ್ದೇ ಆದಲ್ಲಿ ಅದಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಅಗ್ನಿ ತತ್ವ ಸದಾ ಕಾಲ ಬಲಿಷ್ಠ ವಾಗಿರುವಂತೆ ನೋಡಿಕೊಳ್ಳಬೇಕು. ಇದು ಏನಾದರೂ ದುರ್ಬಲ ಆಗಿದ್ದೆ ಆದಲ್ಲಿ ಆ ವ್ಯಕ್ತಿಗೆ ದುಡ್ಡಿನ ಸಮಸ್ಯೆ ತಪ್ಪಿದ್ದಲ್ಲ.