ಐಎಎಸ್ ಆಫೀಸರ್ ಮೇಲೆ ರಾಜಕಾರಣಿ ಆರೋಪ; ನೊಂದ ಅಧಿಕಾರಿ ಆತ್ಮಹತ್ಯೆಗೆ ಶರಣು!

WhatsApp Group Join Now
Telegram Group Join Now
Instagram Account Follow Now

ಮಾತು ಆಡಿದರೆ, ಹೋತು ಮುತ್ತು ಒಡೆದರೆ ಹೊತ್ತು ಎಂಬ ಮಾತಿಗೆ ಇಲ್ಲಿ ನಡೆದರುವ ಘಟನೆ ಸಾಕ್ಷಿಯಾಗಿದೆ. ಆದರಲ್ಲೂ ರಾಜಕೀಯ ನಾಯಕರ (Political leader) ಮಾತುಗಳಿಗೆ ಭಾರೀ ತೂಕ ಉಂಟು. ಕೆಲವೊಮ್ಮೆ ಅವರು ಹೇಳುವ ಮಾತುಗಳೂ ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ಕೊಂಡ್ಯುತ್ತವೆ.

ಆದರಂತೆ ಕೇರಳದ (Kerala) ಐಎಎಸ್ (IAS) ಅಧಿಕಾರಿಯ ಪ್ರಾಮಾಣಿಕತೆಯ (Honesty) ಬಗ್ಗೆ ನಾಯಕರೊಬ್ಬರು ಪ್ರಶ್ನೆಗಳನ್ನು ಎತ್ತಿದಾಗ, ತನ್ನನ್ನು ತಾನೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕೊನೆಗೆ ಅಂದರೆ, ನಾಯಕರಿಂದ ಕುಹಕದ ಮರುದಿನವೇ ಆತನ ಶವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಆಹ್ವಾನಿಸದೆ ಹೊರತಾಗಿಯೂ ಸಮಾರಂಭಕ್ಕೆ ಆಗಮನ

ಐಎಎಸ್ ಅಧಿಕಾರಿಯ ಸಾವಿನ ವಿಷಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಕಣ್ಣೂರಿನಲ್ಲಿ ಕರ್ತವ್ಯದಲ್ಲಿದ್ದಾಗ ನವೀನ್ ಬಾಬು ಅವರನ್ನು ಅಲ್ಲಿನ ಸರ್ಕಾರವು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಆಗಿ ನಿಯೋಜಿಸಿತ್ತು. ಇದರ ಅಂಗವಾಗಿ ಸೋಮವಾರ ಕಣ್ಣೂರಿನಿಂದ ವರ್ಗಾವಣೆಯಾದಾಗ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಪಿಐ ಮುಖಂಡೆ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರನ್ನು ಆಹ್ವಾನಿಸಿರಲಿಲ್ಲ. ಇದರ ಹೊರತಾಗಿಯೂ ಅವರು ಸಮಾರಂಭಕ್ಕೆ ಆಗಮಿಸಿ, ಬಂದ ತಕ್ಷಣ ಎಡಿಎಂ ವಿರುದ್ಧ ನಾನಾ ಆರೋಪಗಳ ಸುರಿಮಳೆ ಗೈದಿದ್ದಾರೆ.

ಪತ್ನಿ ಕಾಯುತ್ತಿರುವ ಮಧ್ಯೆಯೇ ಶವವಾಗಿ ಪತ್ತೆ

ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಅವರು ಮಂಗಳವಾರ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆಂಗನ್ನೂರ್ ರೈಲ್ವೆ ನಿಲ್ದಾಣದಲ್ಲಿ ಬಾಬು ಅವರ ಪತ್ನಿ ಅವರಿಗಾಗಿ ಕಾಯುತ್ತಿರುವ ಮಧ್ಯೆಯೇ ಅವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ತವರು ಜಿಲ್ಲೆ ಪಥನಂತಿಟ್ಟಕ್ಕೆ ವರ್ಗಾವಣೆಯಾಗಿದ್ದ ಅವರು, ಏಳು ತಿಂಗಳಲ್ಲಿ ನಿವೃತ್ತರಾಗಲಿದ್ದರು.

ರಸ್ತೆ ವಕ್ರವಾಗಿದೆ, ಎನ್‌ಒಸಿ ನೀಡಲು ಸಾಧ್ಯವಿಲ್ಲ

ಪಿ.ಪಿ.ದಿವ್ಯಾ ಅವರು, ಈಗ ಬೇರೆ ಜಿಲ್ಲೆಗೆ ಹೋಗುತ್ತಿರುವ ಎಡಿಎಂ ಅವರಿಗೆ ಶುಭ ಹಾರೈಸುತ್ತೇನೆ. ನಾನು ಹಿಂದಿನ ಎಡಿಎಂ ಅವರನ್ನು ಭೇಟಿಯಾಗಿದ್ದೇನೆ, ಆದರೆ ನವೀನ್ ಬಾಬು ಅವರೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಲು ಸಾಧ್ಯವಾಗಲಿಲ್ಲ. ಒಮ್ಮೆ ನಾನು ಚೆಂಗ್ಲೈನಲ್ಲಿ ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು ಅವರನ್ನು ಕರೆದಿದ್ದೆ. ಏಕೆಂದರೆ ಅದರ ಮಾಲೀಕರು ನನಗೆ ಪದೇ ಪದೇ ಎನ್ ಒಸಿ ನೀಡುತ್ತಿಲ್ಲ ಎಂದು ದೂರಿದರು. ನಾನು ಎಡಿಎಂ ಅವರನ್ನು ಕೇಳಿದಾಗ, ಅವರು ಹೇಳಿದರು – ರಸ್ತೆ ವಕ್ರವಾಗಿದೆ, ಆದ್ದರಿಂದ ಎನ್‌ಒಸಿ ನೀಡಲು ಸಾಧ್ಯವಿಲ್ಲ.

ಆದರೆ ನಂತರ ಎರಡು ದಿನಗಳ ಅವಧಿಯಲ್ಲಿ ಅವರಿಗೆ ಎನ್‌ಒಸಿ ನೀಡಲಾಗಿದೆ. ಅವನು ಎನ್‌ಒಸಿ ಹೇಗೆ ಪಡೆಯುತ್ತಾನೆ ಎಂದು ನನಗೆ ಎನ್‌ಒಸಿ ಅರ್ಥವಾಯಿತು ಎಂದರು.

ಜೀವನದಲ್ಲಿ ನಾವು ಪ್ರಾಮಾಣಿಕರಾಗಿರಬೇಕು

ಇದಾದನಂತರ ವೇದಿಕೆಯಲ್ಲೇ ಎಡಿಎಂ ಅವರನ್ನು ತರಾಟೆಗೆ ತೆಗೆದುಕೊಂಡ ದಿವ್ಯಾ ಅವರು, ಎನ್‌ಒಸಿ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಹೇಳಿದರು. ಜೀವನದಲ್ಲಿ ನಾವು ಪ್ರಾಮಾಣಿಕರಾಗಿರಬೇಕು. ಕಣ್ಣೂರಿನಲ್ಲಿ ಮಾಡಿದ್ದನ್ನು ಬೇರೆ ಕಡೆ ಮಾಡಬಾರದು. ಅವರು ಜನರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬೇಕು. ಇದು ಸರ್ಕಾರಿ ಸೌಲಭ್ಯ, ಏನಾದ್ರೂ ಆಗಲು ಒಂದು ಕ್ಷಣ ಸಾಕು ಎಂದರು.

ಪೊಲೀಸರ ಮೇಲೆ ನಂಬಿಕೆ ಇಲ್ಲ

ಹೀಗೆ ಪಿ.ಪಿ.ದಿವ್ಯಾ ಅವರು ಹೇಳಿ ಹೊರಟು ಹೋದ ಮರುದಿನವೇ ಅಂದರೆ ಮಂಗಳವಾರ ಬೆಳಗ್ಗೆ ನವೀನ್ ಬಾಬು ಅವರ ಅಧಿಕೃತ ನಿವಾಸದಲ್ಲಿ ಶವ ಪತ್ತೆಯಾಗಿದೆ. ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು ಮೃತರ ಮನೆಯ ಬಳಿ ಪ್ರತಿಭಟನೆ ನಡೆಸುತ್ತಿದೆ. “ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರಾಮಾಣಿಕ ಅಧಿಕಾರಿಗಳಿಂದ ವಿಚಾರಣೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ. ಪೊಲೀಸರು ವರದಿ ಸಲ್ಲಿಸುವಾಗ ದಿವ್ಯಾ ಅವರಂತಹ ಜನರು ಆ ತಂಡದ ಭಾಗವಾಗಲು ನಾವು ಬಯಸುವುದಿಲ್ಲ” ಎಂದು ಕಣ್ಣೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಹೇಳಿದ್ದಾರೆ. ಮತ್ತೊಂದೆಡೆ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯಿಸಿ. “ಇಡೀ ಘಟನೆಯು ಕಣ್ಣೂರು ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ನಡೆದಿದೆ. ಹೀಗಾಗಿ ಪೊಲೀಸರು ಕಲೆಕ್ಟರ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಬೇಕು. ದಿವ್ಯಾ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು” ಎಂದಿದ್ದಾರೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment