ಸಾಮಾನ್ಯವಾಗಿ ಸರ್ಕಾರಿ ಉದ್ಯೋಗ ಎಂದರೆ ಎಲ್ಲರಿಗೂ ಕೂಡ ಆಕರ್ಷಣೆ ಇದ್ದೇ ಇರುತ್ತದೆ ಆದರೆ ಕಡಿಮೆ ವಿದ್ಯಾಭ್ಯಾಸ ಹೊಂದಿದ್ದೇವೆ ಅಥವಾ ಇದಕ್ಕಾಗಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿಗೆ ಸೇರಿ ವರ್ಷಾನುಗಟ್ಟಲೆ ಅಭ್ಯಾಸ ಮಾಡಿ ಪ್ರಯತ್ನಿಸಿದರೆ ಮಾತ್ರಫಲ ಇನ್ನು ಇತ್ಯಾದಿ ಅನೇಕ ಕಲ್ಪನೆಗಳೊಂದಿಗೆ ಅನೇಕರು ಹಿಂದೆ ಸರಿದು ಬಿಡುತ್ತಾರೆ.
ಆದರೆ ವಿಷಯವೇನೆಂದರೆ ಅನೇಕ ಹುದ್ದೆಗಳಿಗೆ ಅಭ್ಯರ್ಥಿಗಳು ಪಡೆದಿರುವ ವಿದ್ಯಾರ್ಹತೆ ಆಧಾರದ ಮೇಲೂ ಕೂಡ ಸರ್ಕಾರಿ ಉದ್ಯೋಗ ಸಿಗುತ್ತದೆ. ಅಂತಹದೊಂದು ಅವಕಾಶ PUC ಹೊಂದಿರುವ ಹಾವೇರಿ ಜಿಲ್ಲೆಯ ಯುವಕರಿಗೆ ಸಿಗುತ್ತಿದೆ. ಸ್ಥಳೀಯ ಯಾವುದೇ PUC ಪದವೀಧರನು ಹಾವೇರಿ ಜಿಲ್ಲೆಯ (Haveri District) 18 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕ (Library Supervisor Recruitment) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ವಿಚಾರದ ಕುರಿತು ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ:- ಗ್ರಾಮ ಪಂಚಾಯಿತಿ
ಹುದ್ದೆ ಹೆಸರು:- ಗ್ರಂಥ ಮೇಲ್ವಿಚಾರಕ (ಲೈಬ್ರರಿ ಸೂಪರ್ವೈಸರ್) ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:-
ಉದ್ಯೋಗ ಸ್ಥಳ:-
ಹಾವೇರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ…
ವೇತನ ಶ್ರೇಣಿ:–
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅವರ ಅನುಭವ ಹಾಗೂ ಕಾರ್ಯಕ್ಷಮತೆ ಆಧಾರದ ಮೇಲೆ ವೇತನ ನಿಗದಿಪಡಿಸಲಾಗುತ್ತದೆ ಅಂದಾಜು ವೇತನ:- 18,000/-
ಶೈಕ್ಷಣಿಕ ವಿದ್ಯಾರ್ಹತೆ:-
* ಯಾವುದೇ ವಿಭಾಗದಲ್ಲಿ ದ್ವಿತೀಯ PUC ಉತ್ತೀರ್ಣರಾಗಿರಬೇಕು
* ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷಗಳ ಲೈಬ್ರರಿ ಸೈನ್ಸ್ ಪೂರ್ತಿ ಗೊಳಿಸಿರುವ ಪ್ರಮಾಣ ಪತ್ರ ಹೊಂದಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* ಸರ್ಕಾರದ ನಿಯಮದಂತೆ ಆಯ್ದ ಕೆಲವು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ
* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಅಂಗವಿಕಲ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳು
ಗ್ರಾಮ ಪಂಚಾಯಿತಿ ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* ಅರ್ಹ ಆಸಕ್ತರು ನೇರವಾಗಿ https://sevasindhuservices.karnataka.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
* ಹೆಚ್ಚಿನ ಮಾಹಿತಿಗಾಗಿ ಹಾವೇರಿ ಜಿಲ್ಲೆಯ ಅಧಿಕೃತ ವೆಬ್ಸೈಟ್ಗೆ ಅಥವಾ ಸೇವಾ ಸಿಂಧು ವೆಬ್ ಸೈಟ್ ಗೆ ಭೇಟಿ ನೀಡಿ.
ಅರ್ಜಿ ಶುಲ್ಕ:-
* ಅರ್ಜಿ ಶುಲ್ಕವನ್ನು ಆನ್ಲೈನ್ ಲ್ಲಿಯೇ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI ಆಧಾರಿತ ಆಪ್ ಮೂಲಕ ಪಾವತಿ ಮಾಡಬಹುದು ಅಥವಾ ಚಲನ್ ಮೂಲಕ ಕೂಡ ಪಾವತಿಸಬಹುದು
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.500
* OBC ವರ್ಗದ ಅಭ್ಯರ್ಥಿಗಳಿಗೆ ರೂ.300
* SC / ST ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.200
* ಅಂಗವಿಕಲ ಅಭ್ಯರ್ಥಿಗಳಿಗೆ ರೂ.100