ವಿವೇಕ ವಾರ್ತೆ : ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲಒಂದು ಚಿತ್ರ-ವಿಚಿತ್ರವಾಗ ಘಟನೆಗಳು ನಡೆಯುತಲ್ಲೇ ಇರುತ್ತವೆ. ಈಗ ನಾವೂ ಹೇಳ ಹೊರಟಿರುವುದು ಇಂತಹದೆ ಒಂದು ಚಿತ್ರ-ವಿಚಿತ್ರವಾಗ ಮದುವೆಗಳಾದ ಪ್ರಸಂಗ. ಈ ರೀತಿಯ ವಿಚಿತ್ರ ಮದುವೆಯ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಮೀಸೆ ಚಿಗರೋಡೆಯದ ಕೇವಲ 16 ವರ್ಷದ ಬಾಲಕನೊಬ್ಬ ಶಾಲೆಗೆ ಗುಡ್‍ಬೈ ಹೇಳಿ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ.
ಇದೇ ಜುಲೈ 30ರಂದು ಈ ಬಾಲಕ ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ 41 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಚಿತ್ರದಲ್ಲಿ ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ.
ಈ ಜೋಡಿಯ ಚಿತ್ರಗಳನ್ನು ನೋಡಿದ ಅನೇಕರು ಇವರಿಬ್ಬರು ತಾಯಿ ಮತ್ತು ಮಗನಂತೆ ಕಾಣುತ್ತಾರೆಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರೀತಿ ಕುರುಡು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.