Wednesday, September 27, 2023

31 KAS ಅಧಿಕಾರಿಗಳ ವರ್ಗಾವಣೆ – ರಾಜ್ಯ ಸರ್ಕಾರದ ಆದೇಶ

ವಿವೇಕವಾರ್ತೆ : ನಿನ್ನೆಯಷ್ಟೇ 21 ಡಿವೈಎಸ್​​ಪಿ(DYSP), 66 ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು(P0lice inspector) ವರ್ಗಾವಣೆ(Transfer) ಮಾಡಿದ್ದ ರಾಜ್ಯ ಸರ್ಕಾರ, ಇಂದು 31 ಕೆಎಎಸ್(KAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅನ್ವಯಿಸುವಂತೆ ಈ ಕೆಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಾಲ್ವರು ಆಯ್ಕೆ ಶ್ರೇಣಿ, 16 ಹಿರಿಯ ಶ್ರೇಣಿ ಹಾಗೂ 11 ಕಿರಿಯ ಶ್ರೇಣಿ ಸೇರಿ ಒಟ್ಟು 31 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.ವರ್ಗಾವಣೆ ಆಗಿರುವ ಕೆಎಎಸ್​ ಅಧಿಕಾರಿಗಳ ಈ ಹಿಂದಿನ ಹುದ್ದೆ ಹಾಗೂ ಮುಂದಿನ ಹುದ್ದೆ,ಸ್ಥಳಗಳ ವಿವರ ಈ ಕೆಳಗಿನಂತಿದೆ.

ಪ್ರಕಾಶ್‌ ಗೋಪು ರಜಪೂತ್‌- ಕಲಬುರಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ (ಭೂನಿರ್ವಹಣೆ, ಯೋಜನೆ), ಸಂಗಪ್ಪ- ಮಹಾರಾಣಿ ಕ್ಲಸ್ಟರ್‌ ವಿವಿ ಕುಲಸಚಿವ (ಆಡಳಿತ), ಕವಿತಾ ರಾಜಾರಾಮ್‌- ಮೈಸೂರು ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ (ಆಡಳಿತ ಮತ್ತು ಅಭಿವೃದ್ಧಿ), ಪಿ. ಶಿವರಾಜು- ಮೈಸೂರು ಹೆಚ್ಚುವರಿ ದಂಡಾಧಿಕಾರಿ.ಸಿದ್ರಾಮೇಶ್ವರ- ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿ, ರವಿಚಂದ್ರ ನಾಯಕ್‌- ಕೆಎಸ್‌ಬಿಸಿಎಲ್‌ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಎಲಿಷಾ ಆಂಡ್ರೋಸ್‌- ರಿಮ್ಸ್‌ ಮುಖ್ಯ ಆಡಳಿತಾಧಿಕಾರಿ, ಸಿ.ಮಂಜುನಾಥ- ರಾಜೀವಗಾಂಧಿ ವಸತಿ ನಿಗಮದ ಕಂದಾಯ ಕೋಶ ಮುಖ್ಯಸ್ಥ, ರೇಷ್ಮಾ ಹಾನಗಲ್‌- ಹೊನ್ನಾಳಿ ಉಪವಿಭಾಗಾಧಿಕಾರಿ, ಸೌಜನ್ಯಾ ಭರಣಿ- ಕೃಷಿ ಇಲಾಖೆ ಜಂಟಿ ನಿರ್ದೇಶಕಿ (ಆಡಳಿತ), ಸಿ. ಮದನ್‌ ಮೋಹನ್‌- ಇ ಆಡಳಿತ ಯೋಜನಾ ನಿರ್ದೇಶಕ, ಸಿ.ಆರ್‌. ಕಲ್ಪಶ್ರೀ- ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ, ಪಿ.ವಿ. ಪೂರ್ಣಿಮಾ- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಎಂಡಿ,ಬಿ.ಎನ್‌. ವೀಣಾ- ಮಡಿಕೇರಿ ಹೆಚ್ಚುವರಿ ಜಿಲ್ಲಾಧಿಕಾರಿ, ರಾಮಚಂದ್ರ ಗಡದೆ- ಕಲಬುರಗಿ ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ, ಎ.ಎನ್‌. ರಘುನಂದನ್‌- ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ, ಪ್ರಶಾಂತ ಹನಗಂಡಿ- ಕಾಡಾ ಉಪ ಆಡಳಿತಾಧಿಕಾರಿ.

ತಬಸ್ಸುಮ್‌ ಜಹೇರಾ- ತುಮಕೂರು ಕೆಎಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ಆರ್‌.ಪ್ರತಿಭಾ- ಬಿಬಿಎಂಪಿ ಜಂಟಿ ಆಯುಕ್ತೆ (ಘನತ್ಯಾಜ್ಯ ನಿರ್ವಹಣೆ), ಆರ್‌. ಚಂದ್ರಯ್ಯ- ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ವಸತಿ ನಿಲಯ).ಗಂಗಾಧರ ಶಿವಾನಂದ ಮಳಗಿ- ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ, ವಿಜಯಪುರ, ಶಾಲುಂಹುಸೇನ್‌- ಯೋಜನ ನಿರ್ದೇಶನ, ವಿಜಯಪುರ ನಗರಾಭಿವೃದ್ಧಿ ಕೋಶ, ಪಿ.ಎಸ್‌. ಮಹೇಶ್‌- ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ), ಡಾ| ಎಸ್‌.ಕಿರಣ್‌- ಸಂಜಯಗಾಂಧಿ ಆಸ್ಪತ್ರೆ, ಮುಖ್ಯ ಆಡಳಿತಾಧಿಕಾರಿ, ಬೆಂಗಳೂರು. ಎಚ್‌. ಕೋಟ್ರೇಶ್‌- ಕಾರ್ಯದರ್ಶಿ, ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು. ಜಗದೀಶ್‌ ಗಂಗಣ್ಣವರ್‌- ಯೋಜನ ನಿರ್ದೇಶಕ, ರಾಯಚೂರು ನಗರಾಭಿವೃದ್ಧಿ ಕೋಶ. ರೇಷ್ಮಾ ತಾಳಿಕೋಟೆ- ಉಪ ಆಯುಕ್ತರು, ಬೆಳಗಾವಿ ಪಾಲಿಕೆ, ಎಚ್‌.ಬಿ.ವಿಜಯಕುಮಾರ್‌- ಉಪ ಕಾರ್ಯದರ್ಶಿ, ರೇರಾ, ಬೆಂಗಳೂರು. ಜಿ.ಎಚ್‌.ನಾಗಹನುಮಯ್ಯ- ಸಹಾಯಕ ಆಯುಕ್ತರು, ಕೆಐಎಡಿಬಿ, ಬೆಂಗಳೂರು. ಸಾವಿತ್ರಿ ಬಿ.ಕಡಿ-ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ಕಾಲೇಜು, ಕೆ.ಆರ್‌. ಸುಜಾತಾ- ಉಪ ಕಾರ್ಯದರ್ಶಿ, ಶಿವಮೊಗ್ಗ ಜಿಪಂ.

RELATED ARTICLES

ಹಳೆಯ ವಿದ್ಯಾರ್ಥಿಗಳೇ ಕೆಬಿಎನ್ ವಿವಿಯ ಬೆನ್ನೆಲುಬು : ಡಾ. ನಿಶಾತ ಆರೀಫ್ ಹುಸೇನಿ

ವಿವೇಕವಾರ್ತೆ : ಯಾವುದೇ ವಿಶ್ವವಿದ್ಯಾಲಯದ ಗುಣಮಟ್ಟ ಹಳೆಯ ವಿದ್ಯಾರ್ಥಿಗಳಿಂದಲೇ ತಿಳಿಯುತ್ತದೆ. ಹಳೆಯ ವಿದ್ಯಾರ್ಥಿಗಳ ಯಶಸ್ಸು ವಿವಿಗಳ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದು ಖಾಜಾ ಬಂದಾನವಾಜ್ ವಿವಿಯ ಕಲಾ, ಭಾಷಾ, ಮಾನವಕತೆ, ಸಮಾಜ ವಿಜ್ಞಾನ...

ಚೈತ್ರಾ ಕಾರು ಮುಧೋಳದಲ್ಲಿ ಪತ್ತೆ..! ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

ವಿವೇಕವಾರ್ತೆ :ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ(Chaitra Kundapur) ಅವರ ಆಸ್ತಿಯನ್ನು ಸಿಸಿಬಿ (CCB) ಮುಟ್ಟುಗೋಲು ಹಾಕಿಕೊಂಡಿದೆ . ಇದರ ಜೊತೆಗೆ ಇನ್ನೊಂದು ಸ್ಪೋಟಕ ಮಾಹಿತಿ ಸಿಕ್ಕಿದೆ. ಈ ವಂಚನೆ...

ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಢ ; ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ : ಕೋಡಿಮಠ ಶ್ರೀ.!

ವಿವೇಕ ವಾರ್ತೆ : ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. https://youtu.be/u6lq_pUsNkA?si=YWlDzZ4FEqGXLL4M ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!