Wednesday, September 27, 2023

24 ರ ವಿವಾಹಿತೆ ಜೊತೆ 54 ರ ತಾತನ ಪ್ರೀತಿ: ಯಾಮಾರಿಸಲು ಹೋಗಿ ಪೊಲೀಸರ ಅತಿಥಿಯಾದ ಕಿಲಾಡಿ ಜೋಡಿ

ವಿವೇಕವಾರ್ತೆ – ಆತನಿಗೆ 54 ವರ್ಷ ವಯಸ್ಸು,..ಮೂರು ಜನ ಮಕ್ಕಳು, ಮೊಮ್ಮಕ್ಕಳು ಸಹ ಇದ್ದಾರೆ..ಆದ್ರೆ ಇಂತಹ ವಯಸ್ಸಲ್ಲಿ ಮಗಳ ವಯಸ್ಸಿನ ವಿವಾಹಿತೆ ಜೊತೆ ಪ್ರೀತಿ ಪ್ರೇಮ ಅಂತ ಪಲ್ಲಂಗದಾಟವಾಡಿದ್ದ..ಕೊನೆಗೆ ಆಕೆಯ ಗಂಡ ಮನೆಯವರು, ಊರೆಲ್ಲಾ ಗೊತ್ತಾಯ್ತು ಅಂತ ಇಬ್ರು ಊರು ಬಿಟ್ಟು ಪರಾರಿಯಾಗಿದ್ರು.ಇತ್ತ ಪೊಲೀಸರು ಎಲ್ಲಿ ನಮ್ಮನ್ನ ಹಿಡಿದು ಬಿಟ್ಟು ಬೇರೆ ಬೇರೆ ಮಾಡಿಬಿಡ್ತಾರೋ ಅಂತ ಅಮರ ಪ್ರೇಮಿ ಜೋಡಿಗಳು ಆತ್ಮಹತ್ಯೆಯ ನಾಟಕ ಬೇರೆ ಮಾಡಿದ್ರು.

ಆದ್ರೆ ಪೊಲೀಸರನ್ನೇ ಯಮಾರಿಸಲು ಹೋದ ಕಿಲಾಡಿ ಜೋಡಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾರೆ..ಹೌದು.ಇಂತಹ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕಡಸೀಗೆನಹಳ್ಳಿ ಗ್ರಾಮದ ಮುನಿರಾಜುಗೆ 54 ವರ್ಷ ವಯಸ್ಸಾದರೆ ಇತ್ತ ಲಲಿತಮ್ಮನಿಗೆ ಇನ್ನೂ ಸರಿಸುಮಾರು 24 ವರ್ಷ ವಯಸ್ಸು.ಆದ್ರೆ ಇವರಿಬ್ಬರ ಮಧ್ಯೆ ಅದೆಂತಹದ್ದೋ ಲವ್…ಹೌದು ಲಲಿತಮ್ಮ ಗೆ ಮದುವೆಯಾಗಿ ಐದಾರು ವರ್ಷ ಕಳೆದ್ರೂ ಮಕ್ಕಳಾಗಲಿಲ್ಲ ಅನ್ನೋ ಕೊರಗು.ಹೀಗಾಗಿ ಗ್ರಾಮದ ದೇವಾಲಯಕ್ಕೆ ಪೂಜೆಗೆ ಅಂತ ಹೋಗಿ ಬರುವಾಗ ಪೂಜಾರಿ ಮುನಿರಾಜು ಬಳಿ ಸಲುಗೆ ಬೆಳೆದಿದೆ..ಸಲುಗೆ ಪ್ರೀತಿ ಪ್ರೇಮ ಪ್ರಣಯವಾಗಿ ಇಬ್ಬರು ಊರು ಬಿಟ್ಟು ಪರಾರಿಯಾಗಿದ್ರು.

ಕಳದೆ ಒಂದು ತಿಂಗಳ ಹಿಂದೆ ಪರಾರಿಯಾದವರು ಆಂಧ್ರದಲ್ಲಿ ಜೀವನ ಮಾಡಿಕೊಂಡು ಇದ್ರಂತೆ.ಆದ್ರೆ ಇತ್ತ ಲಲಿತಮ್ಮ ಪತಿ ನರಸಿಂಹಮೂರ್ತಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಹುಡುಕಿಕೊಡಿ ಅಂತ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ..ಹೀಗಾಗಿ ಜೋಡಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ರು..ಇದನ್ನರಿತ ಮುನಿರಾಜು ಲಲಿತಮ್ಮ ಆತ್ಮಹತ್ಯೆ ಅನ್ನೋ ಮಾಸ್ಪರ್ ಪ್ಲಾನ್ ಮಾಡಿ ಪೊಲೀಸರು ದಿಕ್ಕುತಪ್ಪಿಸಲು ಯತ್ನಿಸಿದ್ರು.

ಹೌದು ಆಂಧ್ರದಿಂದ ಆಗಸ್ಟ್ 12 ರಂದು ಚಿಕ್ಕಬಳ್ಳಾಪುರಕ್ಕೆ ಬಂದಿರೋ ಕಿಲಾಡಿ ಜೋಡಿ ತಮ್ಮ ಬಟ್ಟೆ ಇದ್ದ ಬ್ಯಾಗ್, ತಮ್ಮ ಚಪ್ಪಲಿ ಹಾಗೂ ಬಳಸುತ್ತಿದ್ದ ಮೊಬೈಲ್ ಪೋನ್ ನನ್ನ ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ಕೆರೆಯಂಗಳದಲ್ಲಿ ಇಟ್ಟು ಪರಾರಿಯಾಗಿದ್ರು.

ಇಬ್ರು ಸತ್ತು ಹೋಗಿದ್ದಾರೆ ಅಂತ ಪೊಲೀಸರು ಅನ್ಕೋತಾರೆ ನಮ್ಮನ್ನ ಹುಡುಕಲ್ಲ ಅನ್ನೋ ಪ್ಲಾನ್ ಮಾಡಿ ಆತ್ಮಹತ್ಯೆಯ ನಾಟಕ ಮಾಡಿದ್ರು.ಇನ್ನೂ ಕೆರೆಯ ದಡದಲ್ಲಿದ್ದ ಬಟ್ಟೆ ಚಪ್ಪಲಿ ಮೊಬೈಲ್ ಕಂಡ ಸ್ಥಳೀಯರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ರು.ಇನ್ನೂ ಬ್ಯಾಗ್, ಬಟ್ಟೆ, ಚಪ್ಪಲಿ ನೋಡಿದ ಪೊಲೀಸರು ಪಾಪ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತ ಆಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಕೆರೆಯಲ್ಲೆಲ್ಲಾ ಮೃತದೇಹಗಳಿಗಾಗಿ ಜಾಲಾಡಿದ್ರು.ಆದ್ರೆ ಇಡೀ ದಿನ ಹುಡಕಾಡಿದ್ರೂ ಏನೂ ಸಿಗಲಿಲ್ಲ ಅಂತ ಮರುದಿನ ಮತ್ತೆ ಹುಡುಕೋಣ ಅಂತ ಸುಮ್ಮನಾದರು..ಇನ್ನೂ ಆಗಸ್ಟ್ 12 ರಂದು ಬಟ್ಟೆ ಬ್ಯಾಗ್ ಇಟ್ಟು ಮರಳಿ ಆಂಧ್ರ ಸೇರಿಕೊಂಡಿದ್ದ ಜೋಡಿ ಇನ್ನೂ ಪೊಲೀಸರು ನಮ್ಮನ್ನ ಹುಡಕೋದೆ ಇಲ್ಲ ಸತ್ರವ್ರೆ ಅನ್ಕೊಂಡಿರ್ತಾರೆ ಅಂದುಕೊಂಡಿದ್ದೀರು.

ಆದ್ರೆ ಕೆರೆ ಬಳಿ ಬಟ್ಟೆ ಬ್ಯಾಗ್ ಸಿಕ್ಕಾಗ ಮತ್ತೆ ಅಲರ್ಟ್ ಆದ ಪೊಲೀಸರು ಸಿಡಿಆರ್ ಹಾಕಿ ಕರೆಗಳನ್ನ ಪರಿಶೀಲನೆ ಮಾಡಿದ್ರು. ಅನುಮಾನ ಬಂದ ನಂಬರ್ ಗಳಿಗೆ ಕರೆ ಮಾಡಿ ಜೋಡಿ ಬಗ್ಗೆ ವಿಚಾರಿಸಿದ್ರು. ಇದನ್ನ ಅರಿತ ಕಿಲಾಡಿ ಜೋಡಿ ಮತ್ತೆ ಪೊಲೀಸರು ಹುಡುಕ್ತಿರೋ ವಿಚಾರ ತಿಳಿದು ಆಂದ್ರದಿಂದ ಚಿಕ್ಕಬಳ್ಳಾಪುರದತ್ತ ತಾವಾಗೇ ಬಂದು ಪೊಲೀಸರ ಕೈಗೆ ತಗಾಲಕ್ಕೊಂಡಿದ್ದಾರೆ ಹೀಗಾಗಿ ಪೊಲೀಸರನ್ನೇ ಯಮಾರಿಸಲು ಹೋದ ಜೋಡಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.. ಸದ್ಯ ಚಿಕ್ಕಬಳ್ಳಾಫುರ ಮಹಿಳಾ ಠಾಣಾ ಪೊಲೀಸರು ಮಹಿಳೆಯನ್ನ ಗಂಡನ ಜೊತೆ ಕಳುಹಿಸಿದ್ದು, ಮುನಿರಾಜುವಿಗೆ ಬುದ್ದಿವಾದ ಹೇಳಿ ಬಿಟ್ಟುಕಳುಹಿಸಿದ್ದಾರೆ.

RELATED ARTICLES

ಪ್ರೇಮಿಗಳಿಗೆ ರೂಂ ಕೊಟ್ಟು ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‍ಮೇಲ್ ; ಇಬ್ಬರು ಅಂದರ್..!

ವಿವೇಕವಾರ್ತೆ : ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್​ನಲ್ಲಿ ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಗೋಕಾಕ : ಗುರುವಾರ ಮಧ್ಯರಾತ್ರಿ ಅಮವಾಸ್ಯೆ ಹಿನ್ನೆಲೆ ಮನೆ...

ಗನ್​ ತೋರಿಸಿ ಮಹಿಳಾ ಕಾನ್ಸ್​ಟೇಬಲ್​​​ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು

ವಿವೇಕವಾರ್ತೆ : ಮಹಿಳಾ ಪೊಲೀಸ್​ ಪೇದೆ ಮೇಲೆ ಸಹೋದ್ಯೋಗಿಯೇ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಲ್ಲಿನ ಸ್ವರ್ಗೇಟ್​ ಪೊಲೀಸ್​ ಕಾಲೋನಿಯನ್ನು ಗನ್​ನಿಂದ ಬೆದರಿಸಿ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​​​​​...

ಬೆಂಗಳೂರಲ್ಲಿ ‘ಕಾಮುಕ ಟೆಕ್ಕಿ’ ಅಂದರ್ : ಚೆಂದ ಚೆಂದದ ಆಂಟಿಯರೇ ಈತನ ಟಾರ್ಗೆಟ್.!

ವಿವೇಕವಾರ್ತೆ : ಬೆಂಗಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ.ಚೆಂದ ಚೆಂದದ ಫೋಟೋ ಹಾಕುವ ಆಂಟಿಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ ಕಾಮುಕ ಫೈಜಲ್ ಎಂಬಾತನನ್ನು ಪೊಲೀಸರು...
- Advertisment -

Most Popular

ಗೋಕಾಕ : ಹಣಕಾಸಿನ ವಿಚಾರಕ್ಕೆ ಯೋಧನಿಂದಲೇ ಮತ್ತೋರ್ವ ಯೋಧನ ಮೇಲೆ ಫೈರಿಂಗ್.!

ವಿವೇಕ ವಾರ್ತೆ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ....

ಬ್ಯಾಕ್ ಪ್ಲಿಪ್ ಮಾಡಲು ಹೋಗಿ ಫೇಲ್ ಆದ ಯುವಕ : ‘ಇದರ ಅಗತ್ಯ ಇತ್ತೇ’ ಎಂದ ನೆಟ್ಟಿಗರು ; ವಿಡಿಯೋ ವೈರಲ್.!

ವಿವೇಕವಾರ್ತೆ : ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಕೆಲ ಯುವಕ ಯುವತಿಯರ ಹುಚ್ಚಾಟದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಲಿನ ಬೋಗಿಯೊಳಗೆ ವಿಡಿಯೋ ಚಿತ್ರೀಕರಣದ ನಿಷೇಧದ ಹೊರಾತಗಿಯೂ ಇಂಥ ಪ್ರವೃತ್ತಿಗಳು ಮುಂದುವರೆಯುತಲೇ ಇವೆ. ಆ...

ಕಾರಿಗೆ ಡಿಕ್ಕಿ ಹೊಡೆದ ಲಾರಿ : ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವು..!

ವಿವೇಕವಾರ್ತೆ : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾದ ನಡೆದಿದೆ. ಮೃತ ದುರ್ದೈವಿಗಳನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕಾಶ್ (20), ಹೇಮಂತ್ (28)...

ಕುಂಬಳಕಾಯಿ ಬೀಜ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು.!

ವಿವೇಕವಾರ್ತೆ : ಕುಂಬಳಕಾಯಿ ಬೀಜಗಳು ತುಂಬಾ ಚಿಕ್ಕದಾಗಿದ್ದರೂ, ನಮ್ಮ ವ್ಯವಸ್ಥೆಗಳು ಅವಲಂಬಿಸಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕುಂಬಳಕಾಯಿಯ ಚಿಕ್ಕ ಬೀಜಗಳು ನಾವು ಅಂದಾಜಿಸುವುದಕ್ಕಿಂತ ಹೆಚ್ಚಿನ ಪೋಷಕಾಂಶಗಳಿಂದ ತುಂಬಿವೆ.‌ ಕುಂಬಳಕಾಯಿ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು...
error: Content is protected !!