200 ವರ್ಷದ ಪುರಾತನ ಬುದ್ಧನ ವಿಗ್ರಹ ಮಾರಾಟ ಮಾಡಲು ಯತ್ನಿಸಿದ್ದ ಐವರನ್ನು ಸಂಪಂಗಿ ರಾಮನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಪಂಚಮರ್ಥಿ ರಘುರಾಮ ಚೌಧರಿ, ಉದಯ್ ಕುಮಾರ್, ಫ್ರೆಡ್ಡಿ ಡಿಸೋಜಾ, ಶರಣ್ ನಾಯರ್ ಹಾಗೂ ಪ್ರಸನ್ನ ಬಂಧಿತರು.
ಆರೋಪಿಗಳು ಈ ಪುರಾತನ ಬುದ್ಧನ ವಿಗ್ರಹವನ್ನು ಮಾರಾಟ ಮಾಡಿ ವಿದೇಶಕ್ಕೆ ರವಾನೆ ಮಾಡಲು ಸಿದ್ಧತೆ ನಡೆಸಿದ್ದರು. ಹೀಗಾಗಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬುದ್ಧನ ವಿಗ್ರಹ, ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಮತ್ತಷ್ಟು ರಹಸ್ಯಗಳು ಬಯಲಾಗುವ ಸಾಧ್ಯತೆ ಇದೆ.