spot_img
spot_img
spot_img
spot_img
spot_img
spot_img

20 ವರ್ಷದ ಯುವತಿಯ ಬಾಯಿ ಮುಚ್ಚಿ ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಕ್ರೂರಿ!

Published on

spot_img

ತನ್ನ ಜೊತೆ ಮಾತನಾಡಲು ನಿರಾಕರಿಸಿದ 20 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಸ್ಕ್ರೂಡ್ರೈವರ್ನಿಂದ 51 ಬಾರಿ ಇರಿದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕಳೆದ ಶನಿವಾರ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎಸ್ ಇಸಿಎಲ್)ನ ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಅಂದಿನಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಜಶ್ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಭೇಟಿಯಾಗಲು ಆರೋಪಿ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಕೊನೆಗೆ ಆತ ಆಕೆಯ ಬಾಯಿಯನ್ನು ಕಟ್ಟಿ ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ಸಹೋದರ ಸೋಮವಾರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದನು. ಆತ ಪ್ರಯಾಣಿಕರ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಬಸ್ ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿ ನಂತರ ಕೆಲಸಕ್ಕಾಗಿ ಗುಜರಾತ್ನ ಅಹಮದಾಬಾದ್ಗೆ ತೆರಳಿದನು.

ಇಬ್ಬರೂ ಫೋನ್ನಲ್ಲಿ ಸಂಪರ್ಕದಲ್ಲಿದ್ದರು. ಆದರೆ ಕಾಲಕ್ರಮೇಣ ಮಹಿಳೆ ಆತನೊಂದಿಗೆ ಫೋನ್ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಾಗ, ಆರೋಪಿ ಅವಳನ್ನು ಭೇಟಿಯಾಗಲು ಕೊರ್ಬಾಗೆ ಬಂದಿದ್ದು ಈ ದೃಷ್ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮೊಟ್ಟೆ ಬೇಯಿಸುವಾಗ ಯಾವಾಗಲೂ ಒಡೆದು ಹೋಗುತ್ತಾ!? – ಈ ಸಲಹೆ ಪಾಲಿಸಿ!

ಮೊಟ್ಟೆ ಬೇಯಿಸುವಾಗ ಒಡೆದು ಹೋಗುವುದನ್ನು ತಪ್ಪಿಸಲು ಈ ಟ್ರಿಕ್ಸ್ ಫಾಲೋ ಮಾಡಿ. ಹೀಗಾಗಿ ಹೆಚ್ಚಿನವರು ಬೇಯಿಸಿದ ಮೊಟ್ಟೆಯನ್ನು ತಿನ್ನಲು...

ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ...

ಒಂದೇ ರಾತ್ರಿಯಲ್ಲಿ ನಿಮ್ಮ ಹಿಮ್ಮಡಿಗಳ ಸೀಳುವಿಕೆಯನ್ನು ಹೋಗಲಾಡಿಸಿ: ಇಲ್ಲಿದೆ ಹಿಮ್ಮಡಿ ಸೀಳಿಗೆ ಒಂದು ಉತ್ತಮ ಪರಿಹಾರ

ವಿವೇಕವಾರ್ತೆ :ಹಿಮ್ಮಡಿ ಸೀಳುವಿಕೆ ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಲೇಖನದಲ್ಲಿ ಹಿಮ್ಮಡಿ ಸೀಳುವಿಕೆಯನ್ನು ಶೀಘ್ರದಲ್ಲಿ ಕಡಿಮೆ ಮಾಡುವ...

ಮುದ್ದಾದ ಪತ್ನಿಗಾಗಿ ಸ್ವಂತ ತಂದೆಯನ್ನು ಕಡೆಗಣಿಸಿದ ಜಡೇಜಾ, MLA ಹೆಂಡತಿಗಾಗಿ ಪೋಷಕರು ಬೀದಿಗೆ

ವಿವೇಕವಾರ್ತೆ :ತಮ್ಮ ತಂದೆ ಅನಿರುದ್ಧ್ ಸಿನ್ಹ ಜಡೇಜಾ ಮಾಡಿದ ಆರೋಪಗಳನ್ನು ಕ್ರಿಕೆಟಿಗ ರವೀಂದ್ರ ಜಡೇಜಾ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಗುಜರಾತಿ...
error: Content is protected !!