ಬೆಳಗಾವಿಯಲ್ಲಿ ದಾಖಲೆ ಇಲ್ಲದ 2 ಕೋಟಿ ಹಣ ಜಪ್ತಿ, ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪೊಲೀಸರು

ಬೆಳಗಾವಿ: ವಿಧಾನಸಭೆ ಚುನಾವಣಾ(Karnataka Assembly Election) ಹಿನ್ನೆಲೆ ರಾಜ್ಯದಲ್ಲೆಡೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆ ಇದೀಗ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ಹಣವನ್ನ ಜಪ್ತಿ ಮಾಡಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಕೆಎ 70 1459 ಸಂಖ್ಯೆಯ ಖಾಸಗಿ ಬಸ್​ನ್ನ ಬೆಳಗಿನ ಜಾವ 3.30ರ ಸುಮಾರಿಗೆ ತಪಾಸಣೆ ನಡೆಸಿದ ವೇಳೆ ಅಕ್ರಮ ಹಣ ಪತ್ತೆಯಾಗಿದೆ. ಇನ್ನು ಪೊಲೀಸರು ಅನಧಿಕೃತ ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖುದ್ದು ಸ್ಥಳಕ್ಕೆ ಬೇಟಿ ನೀಡಿ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಆರು ದಿನಗಳ ಕಾರ್ಯಚರಣೆಯಲ್ಲಿ ಒಟ್ಟಾರೆ 47 ಕೋಟಿ 43 ಲಕ್ಷದ 85 ಸಾವಿರ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ನೀತಿ ಸಂಹಿತೆ ಜಾರಿ ಬಳಿಕ 6 ದಿನಗಳ ಕಾರ್ಯಾಚರಣೆಯಲ್ಲಿ 12 ಕೋಟಿ 82 ಲಕ್ಷ 94 ಸಾವರ ರೂ. ನಗದು, ರಾಜ್ಯದಲ್ಲಿ 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ, 41 ಲಕ್ಷ ರೂಪಾಯಿ ಮೌಲ್ಯದ 79.44 ಕೆ.ಜಿ ಮಾದಕವಸ್ತು, 6 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ 13.575 ಕೆ.ಜಿ ಚಿನ್ನ, 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ಆಭರಣ ಸೀಜ್​ ಮಾಡಲಾಗಿತ್ತು.

ಈವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್‌ಗಳು ವಶ ಪಡೆಸಿಕೊಂಡಿದ್ದು, ನಗದು, ಮದ್ಯ, ಡ್ರಗ್ಸ್ ಜಪ್ತಿ ಸಂಬಂಧ ಒಟ್ಟು 316 ಪ್ರಕರಣ ದಾಖಲು ಮಾಡಲಾಗಿದೆ. 31,486 ಶಸ್ತ್ರಾಸ್ತ್ರ ಠೇವಣಿ, 10 ಶಸ್ತ್ರಾಸ್ತ್ರಗಳನ್ನ ಠೇವಣಿ ಮಾಡಿಲ್ಲ. ರಾಜ್ಯದಲ್ಲಿ ಈವರೆಗೆ 7 ಗನ್‌ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 1,416 ಜನರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

error: Content is protected !!