15 ರೂ ನೀರು ಬಾಟಲಿಗೆ 20 ರೂ ವಸೂಲಿ: IRTC ಗುತ್ತಿಗೆದಾರನಿಗೆ 1 ಲಕ್ಷ ದಂಡ

ರೈಲಿನಲ್ಲಿ 15 ರು.ನ ನೀರಿನ ಬಾಟಲ್‌ಗೆ 20 ರು. ವಸೂಲಿ ಮಾಡುತ್ತಿದ್ದ ಐಆರ್‌ಸಿಟಿಸಿ ಗುತ್ತಿಗೆದಾರನೊಬ್ಬರಿಗೆ ರೈಲ್ವೆ 1 ಲಕ್ಷ ರು. ದಂಡ ವಿಧಿಸಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಶಿವಂ ಭಟ್‌ ಎಂಬ ವ್ಯಕ್ತಿ ಲಖನೌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಚಂಡೀಗಢದಿಂದ ಶಹಜಹಾನ್‌ಪುರಕ್ಕೆ ಪ್ರಯಾಣಿಸುತ್ತಿದ್ದರು.

ಈ ವೇಳೆ ರೈಲಿನಲ್ಲಿ ಬಂದ ಐಆರ್‌ಸಿಟಿಸಿ ಗುತ್ತಿಗೆ ಕಂಪನಿಯ ನೌಕರ 15 ರು. ಎಂಆರ್‌ಪಿ ಹೊಂದಿರುವ ನೀರಿನ ಬಾಟಲ್‌ಗೆ 20 ರು. ವಸೂಲಿ ಮಾಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರೈಲಿನಲ್ಲಿ ಪ್ಯಾಂಟ್ರಿ ಇಲ್ಲ ಎಂದಿದ್ದ. ಈ ಬಗ್ಗೆ ಶಿವಂ ಭಟ್‌ ರೈಲ್ವೆ ಸಚಿವಾಲಯಕ್ಕೆ ಟ್ವೀಟರ್‌ ಮೂಲಕ ದೂರ ಸಲ್ಲಿಸಿದ್ದರು.

ಈ ಬಗ್ಗೆ ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಂಡಿರುವ ಅಂಬಾಲಾ ರೈಲ್ವೆ ವಲಯದ ಅಧಿಕಾರಿಗಳು, ಐಆರ್‌ಸಿಟಿಸಿ ಗುತ್ತಿಗೆದಾರನಿಗೆ 1 ಲಕ್ಷ ರು. ದಂಡ ವಿಧಿಸದ್ದಾರೆ. ಅಲ್ಲದೆ ಆರ್‌ಪಿಎಫ್‌ ಅಧಿಕಾರಿಗಳು ಟಿಕೆಟ್‌ ಪರಿವೀಕ್ಷಕರು ರೈಲಿನಲ್ಲಿ ಇಂತಹ ಘಟನೆಗಳನ್ನು ಹತ್ತಿಕ್ಕಬೇಕು ಎಂದು ಅಂಬಾಲಾ ವಿಭಾಗೀಯ ವ್ಯವಸ್ಥಾಪಕ ಟ್ವೀಟರ್‌ ಮಾಡಿದ್ದಾರೆ. ಅಲ್ಲದೇ ಪರವಾನಗಿ ಪಡೆಯದೇ ರೈಲಿನಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!