ವಿವೇಕವಾರ್ತೆ : ತುಮಕೂರು ಜಿಲ್ಲೆಯ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಎಇಇ ಕಾಶಿ ವಿಶ್ವನಾಥ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ. ಲಕ್ಷ್ಮೀ ನಾರಾಯಣ್ ಅವರ 1 ಎಕರೆ 7ಗುಂಟೆ ಜಮೀನ ಪೈಕಿ 4 ಗುಂಟೆ ಒಳ ಚರಂಡಿ ಮಂಡಳಿ ಗೆ ಸೇರಿತ್ತು ಜಮೀನು ಪೋಡಿ ಮಾಡಲು ಇಲಾಖೆಯಿಂದ ಪತ್ರ ನೀಡಬೇಕಿತ್ತು.
ಪತ್ರ ನೀಡಲು ಕಾಶಿ ವಿಶ್ವನಾಥ್ 15 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕುಮಾರಿ ಎಂಬುವರ ಜಮೀನಿನ ವ್ಯಾಜ್ಯ ವಿಚಾರವನ್ನು ಬಗೆಹರಿಸಲು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್, ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.