spot_img
spot_img
spot_img
spot_img
spot_img
spot_img

150 ಕೋಟಿ ಅಕ್ರಮ: 32 ಪಿಡಿಓಗಳು ಮನೆಗೆ..! ಇಲ್ಲಿದೆ ಕಂಪ್ಲಿಟ್ ಸ್ಟೋರಿ

Published on

spot_img

ವಿವೇಕವಾರ್ತೆ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮಿಣ ಜನರಿಗೆ ೧೦೦ದಿನದ ಖಾತರಿ ಉದ್ಯೋಗ ನೀಡಲು ಸರ್ಕಾರ ರೂಪಿಸಿರುವ ಅತ್ಯಧ್ಬುತ ಯೋಜನೆ, ಗ್ರಾಮೀಣ ಪ್ರದೇಶದಲ್ಲಿ ಇರುವ ಜನರಿಗೆ ಅತ್ಯಂತ ಸಹಾಯಕಾರಿ ಹಾಗೂ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸಹಾಯ ಮಾಡುವ ಯೋಜನೆಯಾಗಿದೆ ಆದರೆ ಹಣಬಾಕ ಕೆಲವು ಪಿಡಿಓಗಳು ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಅಕ್ರಮ ಹಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪದೇ ಪದೇ ದೂರುತ್ತಿರುತ್ತಾರೆ.

ದೇವರು ಆಶೀರ್ವಾದ ಕೊಟ್ರು ಪೂಜಾರಿ ಕೋಡಲ್ಲ

ಹೌದು ಕನ್ನಡದ ಪ್ರಚಲಿತ ಗಾದೆಮಾತಿನಂತೆ ಸರ್ಕಾರ ಹಣ ಕೊಟ್ಟರು ಈ ಲಂಚಬಾಕ ಪಿಡಿಓಗಳು ತಮ್ಮ ಕಮಿಶನ್ ಕೊಡುವ ಸಲುವಾಗಿ ಗ್ರಾಮೀಣ ಭಾಗದ ಜನರನ್ನ ತುಂಬಾ ಸತಾಯಿಸುತ್ತಾರೆ ಎನ್ನುವ ದೂರು ಆಗಾಗ ಕೇಳಿ ಬರುತ್ತಿತ್ತು, ಸರ್ಕಾರಿ ನೌಕರಿಯಲ್ಲಿ ಪಗಾರ ಏನು ಕಡಿಮೆ ಬರುತ್ತಾ..? ಮತ್ತೇ ಹಣದ ದಾಹದಿಂದ ಬಡವರ ಪಾಲಿಗೆ ಸೇರಬೇಕಾದ ಹಣದಲ್ಲೂ ಕತ್ತರಿ ಹಾಕುವ ಕಿಲಾಡಿಗಳು ಅಂದ್ರೆ ಪಿಡಿಓಗಳು.

ಸದಾ ಸುದ್ದಿಯಲ್ಲಿದ್ದರೂ ಸಹ ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳು ಸಾಕಷ್ಟು ಜನರಿದ್ದಾರೆ, ಆದರೆ ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ಬರೊಬ್ಬರಿ 33 ಜನ ಪಿಡಿಓಗಳನ್ನ ಅಮಾನತ್ತು ಮಾಡಲಾಗಿದೆ, 2020-2023ರ ವರೆಗೆ ಆದ ಅವ್ಯವಹಾರವು ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿತ್ತು, ಅದು ಒಂದು ಎರಡು ರೂಪಾಯಿದಲ್ಲ ಬರೊಬ್ಬರಿ 150 ಕೋಟಿ ರೂಪಾಯಿಗಳಷ್ಟು.

ಈ ಮೊದಲೇ ದೇವದುರ್ಗ ಠಾಣೆಯಲ್ಲಿ ಇಬ್ಬರು ಗೆಡೆಜೆಟ್ ಆಫಿಸರ್ಸ್ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು, ಆದಾದ ಬಳಿಕೆ ನಾಲ್ಕು ಜನ ಪಿಡಿಓಗಳನ್ನ ಸಸ್ಪೆಂಡ್ ಸಹ ಮಾಡಿದ್ರು, ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದ್ದಂತೆಯೇ ಮತ್ತೇ 32 ಜನ ಪಿಡಿಓಗಳನ್ನ ಮನೆಗೆ ಕಳ್ಸಿ ರಾಯಚೂರು ಜಿಲ್ಲಾ ಪಂಚಾಯತ ಸಿಇಓ ರಾಹುಲ್ ತುಕಾರಾಮ್ ಆದೇಶ ಮಾಡಿದ್ದಾರೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!