spot_img
spot_img
spot_img
spot_img
spot_img
spot_img

₹4ಲಕ್ಷ ರೂ. ಸರ್ಕಾರದಿಂದ ಸಹಕಾರ ಸಿಗಲಿದೆ! Karnataka Gig Workers Insurance Scheme

Published on

spot_img

Karnataka Gig Workers Insurance Scheme: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಕರ್ನಾಟಕ ಗಿಗ್ ಕಾರ್ಮಿಕರ ಇನ್ಸೂರೆನ್ಸ್ ಸ್ಕೀಮ್ ಎಂದರೇನು ಮತ್ತು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಇದರ ಉಪಯೋಗವೇನು ಎಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.

‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೊಜನೆ’ ಏನಿದು ರಾಜ್ಯ ಗಿಗ್ ಕಾರ್ಮಿಕರ ಯೋಜನೆಯೆಂದರೆ, ಇದು ಸ್ವಿಗ್ಗಿ ಝೋಮ್ಯಾಟೋಗಳಂತಹ ಫುಡ್ ಡೆಲಿವರಿ ಮಾಡುವ ಹಾಗೂ ಈ ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಫ್ಲಿಪ್ಕಾರ್ಟ್ ಮುಂತಾದ ಈ ಕಾಮರ್ಸ್ ಸಂಸ್ಥೆಗಳಾದ, ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡಿರುವ ಎಲ್ಲಾ ಸಂಘಟಿತ ಗಿಗ್ ಕಾರ್ಮಿಕ ವೃತ್ತಿಕಾರರಿದ್ದಾರೆ. ಇಂಥವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಯೋಜನೆಯಿಂದ ಸಿಗುವ ಸೌಲಭ್ಯಗಳೇನು?

ಜೀವ ವಿಮೆ:

ಫಲಾನುಭವಿಯ ಮರಣದ ನಂತರ ಕಾನೂನು ಬದ್ಧವಾದ ವಾರಸುದಾರರಿಗೆ ರೂಪಾಯಿ ಎರಡು ಲಕ್ಷ ಹಣವನ್ನು ನೀಡಲಾಗುತ್ತದೆ.

ಅಪಘಾತ ವಿಮೆ ಸೌಲಭ್ಯಗಳು:

ಅಪಘಾತದಿಂದ ಮರಣ ಹೊಂದಿದಲ್ಲಿ 2 ಲಕ್ಷ ಮತ್ತು ಜೀವಿಮೆಯ 2 ಲಕ್ಷ ರೂಪಾಯಿ ಒಟ್ಟು ಎಲ್ಲಾ ಸೇರಿ ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಅಪಘಾತದಿಂದ ಶಾಶ್ವತವಾಗಿ ದುರ್ಬಲತೆಯನ್ನು ಹೊಂದಿದಲ್ಲಿ 2 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಆಸ್ಪತ್ರೆಯಲ್ಲಿ ವೆಚ್ಚ ಮರುಪಾವತಿಗಳಿಗೆ ಒಂದು ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ. (ಅಪಘಾತ ಪ್ರಕರಣಗಳಿಗೆ ಮಾತ್ರ ವಹಿಸುತ್ತದೆ)

ನೋಂದಣಿ ಮಾಡಿಕೊಳ್ಳಲು ಅರ್ಹತೆಗಳೇನು?

  • ನೋಂದಣಿ ಮಾಡಿಕೊಳ್ಳಲು ಬಯಸುವವರು 18ರಿಂದ 60 ವರ್ಷಗಳ ವಯೋಮಿತಿ ಚೌಕಟ್ಟಿನಲ್ಲಿ ಇರಬೇಕು.
  • ಆದಾಯ ತೆರಿಗೆಯ ಪಾವತಿದಾರರಾಗಿರಬಾರದು.
  • ಇಎಸ್ಐ ಹಾಗೂ ಭವಿಷ್ಯ ನಿಧಿಯ ಫಲಾನುಭವಿ ಆಗಿರಬಾರದು.
  • ಕರ್ನಾಟಕದಲ್ಲಿ ಗಿಗ್ ವೃತ್ತಿ(ಡೆಲಿವರಿ ಕಾರ್ಯ) ನಿರ್ವಹಿಸುವವರಿಗೆ ಮಾತ್ರ ಅನ್ವಯಿಸುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

  • ಈ ಶ್ರಮ ಕಾರ್ಡ್ ನೋಂದಣಿ ಸಂಖ್ಯೆ.
  • ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ನೀಡುವ ಗುರುತಿನ ಚೀಟಿ.
  • ಆಧಾರ್ ಕಾರ್ಡ್ ಸಂಖ್ಯೆ.

ಈ ಮೇಲಿನ ಎಲ್ಲಾ ದಾಖಲೆಗಳನ್ನು ಮತ್ತು ಅರ್ಹತೆಗಳನ್ನು ಗಮನವಾಗಿ ಓದಿಕೊಂಡು ಬೇಕಾಗುವ ದಾಖಲೆಗಳನ್ನು ಒದಗಿಸುವ ಮೂಲಕ ಕೆಳಗೆ ನೀಡುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ನೋಡಿಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

https://sevasindhuservices.karnataka.gov.in/directApply.do?serviceId=2076

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತಿ ಹೊಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ-01: ಮೊದಲು ಅಭ್ಯರ್ಥಿಗಳು ಮೇಲೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿಕೊಳ್ಳಿ ಸೇವಾ ಸಿಂಧುಗೆ ಲಾಗಿನ್ ಆಗಿ.

ಹಂತ-02: ನಂತರ ಅಪ್ಲೈ ಫಾರ್ ಸರ್ವಿಸಸ್ ನಲ್ಲಿ “ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ” ಅನ್ನುವುದರ ಮೇಲೆ ಕ್ಲಿಕ್ ಮಾಡಿ

ಹಂತ-03: ನಂತರ ಧೃಡೀಕರಣವನ್ನು ಮಾಡಿಕೊಳ್ಳಿ

ಹಂತ-04: ಅದಾದ ನಂತರ ಆಧಾರ್ ಕಾರ್ಡನ್ನು ದೃಢೀಕರಣವನ್ನು ಕೂಡ ಮಾಡಿಕೊಳ್ಳಿ.

ಹಂತ-05: ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿಕೊಳ್ಳಿ.

ಹಂತ-06: ಕುಟುಂಬದ ಸದಸ್ಯರ ವಿವರಗಳನ್ನು ಕೂಡ ಭರ್ತಿ ಮಾಡಿಕೊಳ್ಳಿ.

ಹಂತ-07: ಘೋಷಣೆ ಅಥವಾ ಡಿಕ್ಲರೇಷನ್.

ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಿ.

ಸ್ನೇಹಿತರೆ ಈ ಮೇಲ್ಕಂಡ ಎಲ್ಲಾ ಹಂತಗಳನ್ನು ಪಾಲಿಸಿ ಮತ್ತು ಪೂರ್ತಿ ಲೇಖನವನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಕೊಟ್ಟಿರುತ್ತೇನೆ. ಪೂರ್ತಿಯಾಗಿ ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಲು ಮುಂದಾಗಿ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!