ವಿವೇಕ ವಾರ್ತೆ : ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತ ದುರ್ದೈವಿ ಗೋಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ದೇವೀಂದ್ರಪ್ಪ (42) ಎಂದು ತಿಳಿದುಬಂದಿದೆ.
ದೇವೇಂದ್ರಪ್ಪ ಮೂಲತಃ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿಳ್ಹಾರ ಗ್ರಾಮದವರು.
ಆರೋಗ್ಯ ಸಮಸ್ಯೆ ಇದ್ದ ಕಾರಣ ಕಾನ್ಸ್‌ಟೇಬಲ್ ದೇವೀಂದ್ರಪ್ಪ ಜೂನ್ ತಿಂಗಳಿನಿಂದ ರಜೆ ಮೇಲಿದ್ದರು. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಆಸ್ಪತ್ರೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪೊಲೀಸ್ ಕಾನ್ಸ್‌ಟೇಬಲ್ ಸಾವಿಗೆ ಯಾದಗಿರಿ ಪೊಲೀಸರು ಸಂತಾಪ ಸೂಚಿಸಿದ್ದಾರೆ.