ಹಾರ್ಟ್ ಅಟ್ಯಾಕ್ ಅಂತ ಸೀನ್ ಕ್ರಿಯೇಟ್ ಮಾಡಿದ ಪತ್ನಿ : ಲವ್ವರ್ ಜೊತೆಗಿನ ವಾಟ್ಸ್ಆಫ್ ಚಾಟ್‌ನಲ್ಲಿತ್ತು ಮರ್ಡರ್ ಮಿಸ್ಟರಿ.

Published on

spot_img
spot_img

ವಿವೇಕವಾರ್ತೆ ಸೊಸೆಯೊಬ್ಬಳು ಪ್ಲಾನ್ ಮಾಡಿ ಬಾಯ್ ಫ್ರೆಂಡ್ ಜೊತೆ ಸೇರಿ ಅತ್ತೆಯನ್ನೇ ಮುಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಸೊಸೆಯಬ್ಬಳು ತನ್ನ ಅನೈತಿಕ‌ ಸಂಬಂಧಕ್ಕೆ ಅಡ್ಡಿಯಾಗತ್ತಿದ್ದಾಳೆ ಎಂಬ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿ ಅತ್ತೆ ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾರೆ ಅಂತ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಇನ್ನು ಅಮ್ಮ ಹಾರ್ಟ್ ಅಟ್ಯಾಕ್ ನಿಂದಲೇ ಸತ್ತಿದ್ದಾರೆ ಅಂತ ತಿಳಿದ ಮಗ ಕಣ್ಣೀರನಲ್ಲೆ ಅಂತ್ಯಸಂಸ್ಕಾರವನ್ನು ಕೂಡ ಮುಗಿಸಿ ಮನೆಗೆ ಬಂದಿದ್ದಾನೆ.

ಅಂದಹಾಗೇ ಇಂತಹ ಘಟನೆ ನಡೆದಿರೋ ಬೆಂಗಳೂರು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಿದ್ಯಾಮಾನ್ ನಗರದ ಮಂಜುನಾಥ ಮನೆಯಲ್ಲಿ.

ಅಮ್ಮ ಲಕ್ಷ್ಮಮ್ಮ ತೀರಿಹೋದ ಹಿನ್ನಲೇಯಲ್ಲಿ ದುಃಖದಲ್ಲಿರುವ ಮಂಜುನಾಥನ ಮನೆಗೆ ಬಂದ ಸ್ನೇಹಿತನೋಬ್ಬ ನಿಮ್ಮ ಜೊತೆ ಮಾತಾಡಬೇಕೆಂದು ಕರೆದು ತಾನು ತಂದಿದ್ದ ಒಂದಷ್ಟು ವಾಟ್ಸ್ಆಫ್ ಚಾಟ್ ಕೊಟ್ಟಿದ್ದಾನೆ. ಆ ಚಾಟ್ ನೋಡಿದ ಮಂಜುನಾಥ್ ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ.

ಸ್ನೇಹಿತ ನೀಡಿದ ವಾಟ್ಸ್ಆಫ್ ಚಾಟ್‌ನಲ್ಲಿ ತನ್ನ ಪತ್ನಿ ರಶ್ಮಿ ಹಾಗು ತಮ್ಮ ಬಾಡಿಗೆ ಮನೆಯಲ್ಲೇ ನಿವಾಸಿವಾಗಿದ್ದ ಅಕ್ಷಯ್ ನಡೆಸಿದ್ದ ಚಾಟ್ ಅದಾಗಿತ್ತು. ಜೊತೆ ಜೊತೆಗೆ ಇನ್ನೊಂದು ಶಾಕ್ ಕೂಡಾ ಮಂಜುನಾಥನಿಗೆ ಕಾದಿತ್ತು. ಅದೇನೆಂದರೆ,  ತನ್ನ ತಾಯಿಯ ಸಾವಿನ ರಹಸ್ಯ.

ಮಂಜುನಾಥ ಪತ್ನಿ ರಶ್ಮಿ ತನ್ನ ಗೆಳೆಯನಾದ ಅಕ್ಷಯನಿಗೆ ಸ್ವಂತ ಅತ್ತೆಯನ್ನೇ ಕೊಲೆ ಮಾಡಲು ಸುಫಾರಿ ಕೊಟ್ಟಿದ್ದಾಳೆ. ಇಬ್ಬರು ಸೇರಿ ಪ್ಲಾನ್ ಮಾಡಿದ್ದಾರೆ, ಅದರಂತೆ ರಶ್ಮಿ ತನ್ನ  ಅತ್ತೆ ಲಕ್ಚ್ಮಮ್ಮಗೆ ನಿದ್ರೆ ಮಾತ್ರ ಹಾಕಿ ಮಲಗಿಸಿ ಗೆಳೆಯ ಅಕ್ಷಯನಿಗೆ ಸುದ್ದಿ ಮುಟ್ಟಿಸಿದ್ದಾಳೆ. ಇನ್ನು ತಾನು ಮಾವನನ್ನ ಕರೆದುಕೊಂಡು ತರಕಾರಿ ತರಲೆಂದು ಹೊರಗೆ ಹೋಗಿದ್ದಾಳೆ.

ರಶ್ಮಿ ಹೊರ ಹೋದದನ್ನು ಗಮನಿಸಿದ ಅಕ್ಷಯ ಗೆಳೆಯನೊಂದಿಗೆ ಆಕೆಯ ಮನೆಗೆ ಬಂದು ಲಕ್ಷ್ಮಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.‌ ಹೊರ ಹೋದ ರಶ್ಮಿ ಮನೆಗೆ ಬಂದು ಅತ್ತೆ ಬಿದ್ದೋಗಿದ್ದಾರೆ ಅಂತ ನಾಟಕ ಆಡಿ ಗಂಡನಿಗೆ ಕರೆ ಮಾಡಿದ್ದಾರೆ. ಅಷ್ಟೆ ಅಲ್ಲ ಲಕ್ಷ್ಮಮ್ಮನನ್ನು ಮಾವನ ಜೊತೆಗೆ ಆಸ್ಪತ್ರೆಗೂ ಕರೆದೊಯ್ದಿದ್ದಾರೆ. ವೈದ್ಯರು ಲಕ್ಷ್ಮಮ್ಮ ಸತ್ತಿರೋದನ್ನ ಧೃಡಪಡಿಸಿದ್ದಾರೆ.

ರಶ್ಮಿ ಜೊತೆಗೆ ಕಳೆದ ಖಾಸಗಿ ಕ್ಷಣ ಹಾಗೂ ಚಾಟ್‌ಳನ್ನು ಅಕ್ಷಯ್ ಸ್ನೇಹಿತನಿಗೆ ತೋರಿಸಿದ್ದಾನೆ. ಇನ್ನು ಆ ಸ್ನೇಹಿತ ಈ ವಿಚಾರವನ್ನು ರಶ್ಮಿ ಪತಿ ಮಂಜುನಾಥಗೆ ತಿಳಿಸಿ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ರಶ್ಮಿ, ಅಕ್ಷಯ್ ಹಾಗೂ ಪುರುಷೋತ್ತಮ್ ಬಂಧನವಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!