ವಿವೇಕವಾರ್ತೆ : ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (Electric Multiple Unit) ರೈಲೊಂದು ಹಳಿ ತಪ್ಪಿ, ಪ್ಲಾಟ್ಫಾರ್ಮ್ ಹತ್ತಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ (ಸೆಪ್ಟೆಂಬರ್ 26) ಹಳಿ ತಪ್ಪಿ ರೈಲು ಪ್ಲಾಟ್‌ಫಾರ್ಮ್ ಹತ್ತುತ್ತಲೇ ನೂರಾರು ಪ್ರಯಾಣಿಕರು ಭಯದಿಂದ ರೈಲಿನಿಂದ ಇಳಿದಿದ್ದಾರೆ. ಆದರೂ, ಕೆಲವು ಜನರಿಗೆ ಗಾಯಗಳಾಗಿರುವುದು ಹೇಳಲಾಗುತ್ತ್ತಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರೈಲು ದೆಹಲಿಯ ಶಕುರ್ ಬಸ್ತಿಯಿಂದ ಆಗಮಿಸುತ್ತಿದ್ದು, ಏಕಾಏಕಿ ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಅಷ್ಟೇನೂ ವೇಗವಾಗಿ ಚಲಿಸುತ್ತಿರಲಿಲ್ಲವಾದರೂ ಏಕಾಏಕಿ ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಆತಂಕಕ್ಕೀಡಾದ ಪ್ರಯಾಣಿಕರು ಏಕಕಾಲಕ್ಕೆ ಇಳಿಯಲು ಮುಂದಾದ ನೂಕುನುಗ್ಗಲು ಉಂಟಾಗಿದೆ.
ಮಥುರಾ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 10.49ರ ಸುಮಾರಿಗೆ ಹಳಿ ತಪ್ಪಿ ಪ್ಲಾಟ್‌ಫಾರ್ಮ್ ಹತ್ತಿದೆ. ಯಾರೀಗೂ ಹೆಚ್ಚಿನ ಪ್ರಮಾಣದ ತೊಂದರೆ ಆಗಿಲ್ಲ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್.ಕೆ. ಶ್ರೀವಾಸ್ತವ ತಿಳಿಸಿದ್ದಾರೆ.
https://twitter.com/i/status/1706795423858557287