ವಿವೇಕ ವಾರ್ತೆ : ಸಹಕಾರ ಇಲಾಖೆ ಮತ್ತು ಮತ್ತು ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಹಾಜರಾಗದ ಕೃಷಿ ಅಧಿಕಾರಿಗಳನ್ನು ಬೆಂಡೆತ್ತಿದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ಗೈರಾದವರನ್ನು ಅಮಾನತು ಮಾಡುವಂತೆ ಆದೇಶಿಸಿದರು.
ಶನಿವಾರ ವಿವಿಧ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಾಸನ ನಗರದ ಅಂಬೇಡ್ಕರ್ ಭವನದ ಮುಂಭಾಗ ಈ ಕಾರ್ಯಕ್ರಮ ನಡೆದಿದ್ದು, ಕೆಳಹಂತದ ಅಧಿಕಾರಿಗಳು ಮಾತ್ರ ಹಾಜರಿದ್ದರು.
ಆದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಪ್ರಮುಖ ಅಧಿಕಾರಿಗಳು ಸಹಕಾರಿ ಸಚಿವರ ಕಾರ್ಯಕ್ರಮಕ್ಕೆ ಹಾಜರಾಗಿರಿಲ್ಲ. ಇದರಿಂದ ಕೋಪಗೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ಕಾರ್ಯಕ್ರಮಕ್ಕೆ ಬಾರದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು.
ಈ ವೇಳೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ ಸಚಿವ ರಾಜಣ್ಣ, ನಿಮ್ಮ ಇಲಾಖೆಯ ಡಿಡಿ, ಎಡಿ ಎಲ್ಲಾ ಎಲ್ಲಿ ಹೋದ್ರೂ.? ಎಂದು ಕೇಳಿದರು. ಇದಕ್ಕೆ ಅಧಿಕಾರಿ ಎಲ್ಲರೂ ಮೀಟಿಂಗ್ ಗೆ ಹೋಗಿದ್ದಾರೆ ಎಂದು ಉತ್ತರಿಸಿದರು.
ಇದಕ್ಕೆ ಕೋಪಗೊಂಡ ಸಚಿವರು, ಸುಳ್ಳು ಹೇಳುತ್ತೀಯಾ, ಇವತ್ತು ರಜೆ ದಿನ ಯಾರು ಮೀಟಿಂಗ್ ಮಾಡ್ತಾರೆ. ಯಾರವನು ಸಹಾಯಕ ನಿರ್ದೇಶಕ? ಯಾವ ಊರಿಂದ ಬರ್ತಾನೆ? ಎಲ್ಲಿ ಹೋದ್ರು ಎಲ್ಲರೂ, ಕೃಷಿ ಇಲಾಖೆ ಅಧಿಕಾರಿಗಳ ನೆಗ್ಲಜೆನ್ಸಿ ಅಂತಾ ಸಸ್ಪೆಷನ್ ಗೆ ಬರೀರಿ ಯಾವನಾದ್ರೂ ಆಗಲಿ ಎಂದರು.