ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಮಾಡಿದವರು ಈಗ ಪೋಲಿಸರ ಅತಿಥಿ…!

ಚಿಕ್ಕೋಡಿ: ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕಿನ ಮ್ಯಾನೇಜರ್ ಗುರನಾಥ ಈರಪ್ಪ ಕಳಸನ್ನವರ ಸಾ|| ಮುಗಳ ತಾ|| ಚಿಕ್ಕೋಡಿ ಇವರು ದಿನಾಂಕ: 11/09/2022 ರಂದು ಪಿರ್ಯಾದಿ ನೀಡಿದ್ದು, ಸದರಿ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕನ್ನು ಯಾರೋ ಆರೋಪಿತರು ದಿನಾಂಕ: 10/09/2022 ರಂದು 2030 ಗಂಟೆಯಿಂದ ದಿನಾಂಕ: 11.09.2022 ರಂದು 1945 ಗಂಟೆಯ ನಡುವಿನ ವೇಳೆಯಲ್ಲಿ ಹಾಕಿದ ಕೀಲಿ ಮುರಿದು ಬ್ರೇಜರಿಯ ಲಾಕರ್‌ದಲ್ಲಿದ್ದ ರೋಖ ಹಣ 6,47,096 ರೂಪಾಯಿ ಹಣವನ್ನು ಕಳ್ಳತನ ಮಾಡಿರುತ್ತಾರೆ ಅಂತಾ ದೂರು ನೀಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕಣದ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸದರ ಪ್ರಕರಣದಲ್ಲಿ ಆರೋಪಿತನ ಪತ್ತೆ ಕುರಿತು ಎಸ್. ಪಿ. ಸಾಹೇಬರು ಬೆಳಗಾವಿ ಮತ್ತು ಹೆಚ್ಚುವರಿ ಎಸ್‌. ಪಿ. ಸಾಹೇಬರು ಬೆಳಗಾವಿ ಮತ್ತು ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಕ್ಕೋಡಿರವರ ಮಾರ್ಗದರ್ಶನದಲ್ಲಿ ಶ್ರೀ ಆರ್.ಆರ್.ಪಾಟೀಲ ಸಿ.ಪಿ.ಐ ಚಿಕ್ಕೋಡಿರವರು ಶ್ರೀ ಯಮನಪ್ಪ ಮಾಂಗ, ಪಿ.ಎಸ್.ಚಿಕ್ಕೋಡಿ, ಪ್ರವೀಣ ಬೀಳಗಿ ಪಿಎಸ್‌ಐ (ಅಪರಾಧ ವಿಭಾಗ) ಹಾಗೂ ಸಿಬ್ಬಂದಿ ಜನರಾದ ಆರ್. ಎಲ್. ಶೀಳನವರ, ಎಮ್. ಪಿ. ಸತ್ತಿಗೇರಿ, ಎಸ್. ಪಿ. ಗಲಗಲಿ, ಎಸ್. ಜೆ. ಬಡಿಗೇರ, ಸಂತೋಷ ಬಡೋದೆ, ಕುಮಾರ ಇಳಗೇರ ರವರು ತನಿಖೆ ಕೈಕೊಂಡು, ಆರೋಪಿತರಾದ ಎ-1 ರಮೇಶ ಕುಟ್ಟಪ್ಪ ನಾಯಿಕ ವಯಸ್ಸು-29 ವರ್ಷ ಸಾ|| ಜಗದಾಳ ತಾ|| ರಬಕವಿ-ಬನಹಟ್ಟಿ, ಎ-2 ಬಸವರಾಜ ಉಮೇಶ ಕುಂಚನೂರ ವಯಸ್ಸು-28 ವರ್ಷ ಸಾ|| ಮುತ್ತೂರ ತಾ|| ಜಮಖಂಡಿ, ಎ-3 ಪರಶುರಾಮ @ ಪರಸಪ್ಪ ತಾಯಿ ಸತ್ತೆವ್ವಾ ಅಮ್ಮಾಜಿಗೋಳ ವಯಸ್ಸು-27 ವರ್ಷ ಮತ್ತು ಎ-4 ತುಕ್ಕಪ್ಪ ದುಂಡಪ್ಪ ಅಮ್ಮಾಜಿಗೋಳ ವಯಸ್ಸು-26 ವರ್ಷ ಸಾ|| ಇಬ್ಬರೂ ನಾವಲಗಿ ತಾ|| ರಬಕವಿ-ಬನಹಟ್ಟಿ ಇವರಿಗೆ ದಿನಾಂಕ: 14-10-2022 ರಂದು ಬಂಧಿಸಿ, ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟಾರ್ ಸೈಕಲ್‌ಗಳು, 5 ಮೊಬೈಲ್‌ಗಳು, 45 ಗ್ರಾಂ ಬಂಗಾರದ ಆಭರಣಗಳು ಮತ್ತು 2 ಲಕ್ಷ 80 ಸಾವಿರ ಕಳ್ಳತನ ಮಾಡಿದ ಹಣ ವಶಪಡಿಸಿಕೊಳ್ಳಲಾಗಿದೆ. ಸದರಿ ಆರೋಪಿತರು ಇದೇ ತರಹ ಜಮಖಂಡಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ ಬ್ಯಾಂಕನ್ನು ಸಹ ಕಳ್ಳತನ ಮಾಡಿರುತ್ತಾರೆ. ಇನ್ನೂ ಮುಂದೆಯು ಸಹ ಗ್ರಾಮ ಶಕ್ತಿ ಪೈನಾನ್ದ ಮುಧೋಳ ಮತ್ತು ಮೂಡಲಗಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ ಬ್ಯಾಂಕನ್ನು ಕಳ್ಳತನ ಮಾಡುವ ಯೋಜನೆ ಹೊಂದಿದ್ದರು ಅಂತಾ ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ. ಸದರಿ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ವರದಿ ಬ್ರಹ್ಮಾನಂದ ಪತ್ತಾರ

error: Content is protected !!