ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಹೊಂದಲು ಹಿಂದೇಟು ಹಾಕಿದ ಪ್ರಿಯಕರ ; ಮರ್ಮಾಂಗವನ್ನೇ ಕಚ್ಚಿದ ಪ್ರಿಯತಮೆ.!

Published on

spot_img
spot_img

ವಿವೇಕವಾರ್ತೆ : ಪ್ರಿಯತಮೆಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡು ತನ್ನ ಪ್ರಿಯಕರನ ಗುಪ್ತಾಂಗವನ್ನೇ ಕಚ್ಚಿರುವ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರ್ ದಲ್ಲಿ ನಡೆದಿರುವದು ವರದಿಯಾಗಿದೆ.

ಪ್ರಿಯತಮೆಯಿಂದ ತೀವ್ರ ಗಾಯಗೊಂಡಿರುವ ಪ್ರಿಯತಮ ಆಸ್ಪತ್ರೆ ಪಾಲಾಗಿದ್ದು, ಘಟನೆಯ  ಬಗ್ಗೆ ದೂರು ಕೂಡ ದಾಖಲಾಗಿದೆ.

ಯುವಕನೋರ್ವ ಕೆಲ ವರ್ಷಗಳ ಹಿಂದೆ ಓರ್ವ ಯುವತಿ ಜೊತೆ ವಿವಾಹವಾಗಿದ್ದಾನೆ. ಆದರೆ ಆ ಯುವಕ ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ.  ಹೀಗಿದ್ದಾಗ ಇದೇ ಸೋಮವಾರ ಮಧ್ಯರಾತ್ರಿ ಪ್ರಿಯತಮೆ ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ.

ಹಾಗೆಯೇ ಪ್ರಿಯತಮೆ  ತನ್ನ ಇನ್ನೊಬ್ಬ ಗೆಳತಿಯನ್ನೂ ಸಹ ಅದೇ ಸಮಯಕ್ಕೆ ಕರೆಯಿಸಿಕೊಂಡಿದ್ದಾಳೆ.  ಯಾವಾಗ ಪ್ರಿಯಕರ ತನ್ನ ಮನೆಗೆ ಬಂದನೋ ಆಗ ಪ್ರಿಯತಮೆ ಒಂದು ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾಳೆ.

ಅದೆನೆಂದರೆ, ಸ್ವತಃ  ಪ್ರಿಯತಮೆಯೇ  ತನ್ನ ಮನೆಗೆ ಬಂದಿದ್ದ  ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಪ್ರಿಯಕರನಿಗೆ ಆಫರ್​ ನೀಡಿದ್ದಾಳೆ. ಆದರೆ ಈ ಆಫರ್ ಯುವಕನಿಗೆ ವಿಚಿತ್ರವೆನ್ನಿಸಿ, ತಾನು ಹಾಗೆ ಮಾಡಲು ಸಾಧ್ಯವೇ ಇಲ್ಲ ಅಂತ ಖಡಾಕಂಡಿತವಾಗಿ ನಿರಾಕರಿಸಿದ್ದಾನೆ. ಆದರೆ ಪ್ರಿಯತಮೆ ಮಾತ್ರ ತನ್ನ  ಪ್ರಿಯಕರನ ಮೇಲೆ ತೀವ್ರ ಒತ್ತಡ ಹೇರಿದ್ದಾಳೆ. ಇಷ್ಟಾದರೂ ಬಗ್ಗದ ಆತ ಪ್ರಿಯತಮೆಯ ಗೆಳತಿ ಜೊತೆ ದೈಹಿಕವಾಗಿ ಬೇರೆಯಲ್ಲ ಎಂದಿದ್ದಾನೆ. ಪ್ರಿಯಕರನ ಮಾತು ಕೇಳಿ ಪ್ರಿಯತಮೆಯ ಪಿತ್ತ ನೆತ್ತಿಗೇರಿಸಿದೆ. ಕೋಪದಲ್ಲಿ ಕೆರಳಿದ ಪ್ರಿಯತಮೆ  ತನ್ನ ಪ್ರಿಯತಮನ ಗುಪ್ತಾಂಗವನ್ನು ಬಾಯಿಯಿಂದ ಕಚ್ಚಿದ್ದಾಳೆ.

ಗುಪ್ತಾಂಗ ಕಚ್ಚಿದ ಕಾರಣ ನೋವಿನಿಂದ ಮತ್ತು ಚಿಮ್ಮಿದ ರಕ್ತ ನೋಡಿ ಪ್ರಿಯಕರ ಜೋರಾಗಿ ಕೂಗಿಕೊಂಡಿದ್ದಾನೆ. ಕೂಗಿದ ಆರ್ತನಾದದಿಂದ ಅಕ್ಕಪಕ್ಕದವರು ಆ ಮನೆಗೆ ಬಂದಿದ್ದು, ತೀವ್ರ ಮುಜುಗರಕ್ಕೀಡಾಗ ಪ್ರಿಯಕರ ಅಲ್ಲಿಂದ ಓಡಿ ಹೋಗಿದ್ದಾನೆ.

ಪ್ರಿಯಕರ ನಡೆದ ವಿಷಯ  ವಿಷಯವನ್ನು ಪತ್ನಿಗೆ ತಿಳಿಸಿದ್ದಾನೆ. ಗಂಡನ ಸ್ಥಿತಿ ಕಂಡು ಹೆದರಿದ ಪತ್ನಿ ಪತಿಯು ವಿರೋಧದ ನಡುವೆಯೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ ನೋವಿನಿಂದ ಒದ್ದಾಡುತ್ತಿದ್ದ ಯುವಕನನ್ನು ಚೌಬೇಪುರ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!