ವಿವೇಕ ವಾರ್ತೆ : ಸಿನಿಮಾದಲ್ಲಿ ಚಾನ್ಸ್ ನೀಡುವುದಾಗಿ ನಂಬಿಸಿ ಯುವತಿಯರಿಗೆ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಜಾಲದಲ್ಲಿ ಸಿಲುಕಿ ಬೀಳುವ ಮುನ್ನ ಯುವತಿಯರು ತುಂಬಾ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದೇ ರೀತಿ ವಂಚನೆಗೆ ಒಳಗಾಗಿರುವ ಯುವತಿಯೊಬ್ಬಳು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ರಂಗಿನರಾಟೆ ಹೆಸರಿನ ಸಿನಿಮಾ ನಿರ್ಮಾಪಕ ಸಂತೋಷ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಹಾಸನ ಮೂಲದ ಭವ್ಯಶ್ರೀ ಎಂಬಾಕೆ ಮೋಸ ಹೋದ ಬಳಿಕ ದೂರು ನೀಡಿದ್ದಾಳೆ.
ಚಾನ್ಸ್ ಕೊಡಿಸುವುದಾಗಿ ಹಣ ಪಡೆದು ಸಂತೋಷ್ ವಂಚಿಸಿದ್ದಾರೆ. ಹಂತ ಹಂತವಾಗಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸಂತೋಷ್ ಹಾಗೂ ಚಂದ್ರು ಎಂಬ ಇಬ್ಬರಿಗೂ ಭವ್ಯಶ್ರೀ ಹಣ ಪಾವತಿ ಮಾಡಿದ್ದಾಳಂತೆ. ಒಟ್ಟು 20 ಸಾವಿರ ರೂ. ಹಣ ಪಡೆದಿರುವ ಸಂತೋಷ್ ಹಾಗೂ ಚಂದ್ರು, ಇದೀಗ ಹಣ ವಾಪಸ್ ಕೇಳಿದರೆ ಇಲ್ಲಸಲ್ಲದ ಕಾರಣ ಹೇಳುತ್ತಿದ್ದಾರಂತೆ. ಅಲ್ಲದೆ, ಜೀವ ಬೆದರಿಕೆ ಸಹ ಹಾಕುತ್ತಿದ್ದಾರಂತೆ. ಸಿನಿಮಾ ಅವಕಾಶಗಳ ಬಗ್ಗೆಯೂ ಆರೋಪಿಗಳು ತುಟಿ ಬಿಚ್ಚುತ್ತಿಲ್ಲ.
ಭವ್ಯಶ್ರೀ, ಗೊರಗುಂಟೆ ಪಾಳ್ಯದ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಆಸೆಗೆ ಬಿದ್ದು, ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮೇಕಪ್ ಕಿಟ್ಗಾಗಿ 20 ಸಾವಿರ ರೂ. ಹಣ ಬೇಕಿದೆ ಎಂದು ಹಣ ಪಡೆದುಕೊಂಡ ಆರೋಪಿಗಳು ಇದೀಗ ವಂಚನೆ ಮಾಡಿದ್ದಾರೆ.