ವಿವೇಕವಾರ್ತೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂಡಿಗೆರೆಯ ಪ್ರಜ್ವಲ್ ಎಂಬ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ .3 ರಂದು ಪ್ರಜ್ವಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ದೂರು ದಾಖಲಿಸಿತ್ತು.
ತಿಥಿ ಕಾರ್ಡ್ ಎಂಬ ಉಲ್ಲೇಖದಡಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಬಳಸಿ ಪೋಸ್ಟ್ ರಚಿಸಿದ್ದ ಪ್ರಜ್ವಲ್, ಜೂ. 18 ರಂದು ನಿಧನಹೊಂದಿರುವ ಇವರ ವಿಧಿ ವಿಧಾನವನ್ನು ಗುರುಕೃಪಾ ಮೋಕ್ಷಧಾಮದಲ್ಲಿ ದಿನಾಂಕ 4-08-2023 ರಂದು ಸಮ್ಮಸಗಿಯಲ್ಲಿ ವೈಕುಂಠ ಸಮಾರಾಧನೆ ಮಾಡಲಾಗುವುದು ಎಂದು ಬರೆದುಕೊಂಡಿದ್ದ.
ಈ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದೆ.