ವಿವೇಕ ವಾರ್ತೆ : ಗದಗ ಜಿಲ್ಲೆಯ ಪ್ರತಿಷ್ಠಿತ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯನೊಬ್ಬ ರೋಗಿಗಳ ಜೊತೆಗೆ ಹುಚ್ಚಾಟ ಮೆರೆದಿರುವ ವೀಡಿಯೋ ಈಗ ವೈರಲ್ ಆಗಿದೆ.
ಸರ್ ಸರಿಯಾಗಿ ಚಿಕಿತ್ಸೆ ಕೊಡಿ ಎಂದಿದ್ದಕ್ಕೆ ರೋಗಿಗಳಿಗೆ ತನ್ನ ಶರ್ಟ್ ಬಿಚ್ಚಿ, ಅದ್ಯಾರಿಗೆ ಪೋನ್ ಮಾಡ್ತೀಯೋ ಮಾಡು ಅಂತ ಅವಾಜ್ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮುಸ್ತಾಕ್ ಎಂಬುವರು ಪತ್ನಿಯ ಹೆರಿಗೆಯ ಬಳಿಕ ಆರೋಗ್ಯ ಸಮಸ್ಯೆಯಾಗಿತ್ತು. ಚಿಕಿತ್ಸೆಗೆಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಪತ್ನಿಗೆ ಸರಿಯಾಗಿ ಚಿಕಿತ್ಸೆ ಕೊಡದ ವೈದ್ಯರ ಬಗ್ಗೆ ಸಿಟ್ಟಾದ ಅವರು, ಸಾರ್ ಸರಿಯಾಗಿ ನೀವು ಚಿಕಿತ್ಸೆ ನೀಡುತ್ತಿಲ್ಲ. ಚಿಕಿತ್ಸೆ ನೀಡುವಂತೆ ಕೋರಿದ್ದಾರೆ.
ಇಷ್ಟಕ್ಕೇ ಸಿಟ್ಟಾದ ಜಿಮ್ಸ್ ಆಸ್ಪತ್ರೆಯ ವೈದ್ಯ ಡಾ.ಗೌತಮ್ ಪಾಟೀಲ್ ಎಂಬುವರು, ರೋಗಿಗಳ ಜೊತೆಗೆ ಹುಚ್ಚಾಟ ಮೆರೆದಿದ್ದಾರೆ. ಆಗ ಮುಸ್ತಾಕ್ ಈ ನಿಮ್ಮ ವರ್ತನೆ ಸರಿಯಲ್ಲ. ನಾನು ವೀಡಿಯೋ ಮಾಡಿಕೊಂಡು ನಿಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸುವೆ ಎಂದಾಗ ವೈದ್ಯ ಮತ್ತಷ್ಟು ಆಕ್ರೋಶಗೊಂಡರು.
ಅದ್ಯಾರಿಗೆ ಪೋನ್ ಮಾಡ್ತೀಯೋ ಮಾಡು, ಫೇಸ್ ಬುಕ್ ನಲ್ಲಿ ಲೈವ್ ಮಾಡ್ತೀಯಾ ಮಾಡು. ಅದಕ್ಕೆ ಡೋಂಟ್ ಕೇರ್ ಎಂಬುದಾಗಿ ಮುಸ್ತಾಕ್ ಗೆ ಅವಾಜ್ ಹಾಕಿದ್ದಾರೆ. ಇಷ್ಟೇ ಅಲ್ಲದೇ ತನ್ನ ಶರ್ಟ್ ಬಿಚ್ಚಿದ ವೈದ್ಯರು, ಗೂಂಡಾ ರೀತಿ ವರ್ತಿಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಜಿಮ್ಸ್ ನಲ್ಲಿನ ವೈದ್ಯನ ಗೂಂಡಾ ವರ್ತನೆಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.