ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

 ಪೀಸ್ ಪೀಸ್ ಪ್ರೇಮಿಯ ಕರಾಳ ಮುಖ ಬಯಲು

ನವದೆಹಲಿ: ಲಿಂವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ (LiveIn RelationShip) ಗೆಳತಿ ಶ್ರದ್ಧಾ ವಾಕರ್‌ನನ್ನ (Shraddha Walker) ಕೊಂದು 35 ತುಂಡುಗಳಾಗಿ ಕತ್ತರಿಸಿ, ಬಿಸಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲಾನ (Aftab Amin Poonawalla) ಮತ್ತೊಂದು ಕರಾಳಮುಖ ಪೊಲೀಸ್ ತನಿಖೆ (Police Investigation) ವೇಳೆ ಬಯಲಾಗಿದೆ.

ತನ್ನ ಗೆಳತಿಯನ್ನ ಕ್ರೂರವಾಗಿ ಕೊಂದು ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಹೊಸ ಫ್ರಿಡ್ಜ್‌ನಲ್ಲಿಟ್ಟಿದ್ದರೂ ತನ್ನ ರೂಮಿಗೆ ಕರೆದುಕೊಂಡು ಮತ್ತೊಬ್ಬ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೇ ಒಬ್ಬ ವೈದ್ಯೆ (Doctor) ಜೊತೆಗೂ ಡೇಟಿಂಗ್ (Dating) ನಡೆಸುತ್ತಿದ್ದ ಎನ್ನುವ ಸತ್ಯ ಬೆಳಕಿಗೆ ಬಂದಿದೆ. ಇವರು ಮನೋವೈದ್ಯರಾಗಿದ್ದು, ಡೇಟಿಂಗ್ ಆ್ಯಪ್‌ನಲ್ಲಿ (Dating APP) ಅಫ್ತಾಬ್‌ಗೆ ಪರಿಚಯವಾಗಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ. ಶನಿವಾರ ವೈದ್ಯೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಶ್ರದ್ಧಾ ಮೊದಲಬಾರಿಗೆ ಭೇಟಿ ಮಾಡಿದ `ಬಂಬಲ್’ ಎಂಬ ಡೇಟಿಂಗ್ ಆ್ಯಪ್ ಮೂಲಕವೇ ಈಕೆಯನ್ನು ಅಫ್ತಾಬ್ ಮೊದಲಿಗೆ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಈ ಆ್ಯಪ್ ಮೂಲಕ ಮತ್ತಷ್ಟು ಮಹಿಳೆಯರ ಪರಿಚಯ ಜೊತೆಗೂ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಪೊಲೀಸರು ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.

ಅಫ್ತಾಬ್ ಜೈಲಿಗೆ: ಅಫ್ತಾಬ್ ಅಮೀನ್ ಪೂನಾವಾಲ ಪೊಲೀಸ್ ಕಸ್ಟಡಿ ಅವಧಿ ಮುಗಿದಿದೆ. ಹೀಗಾಗಿ 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆತನ ಸುಳ್ಳು ಪತ್ತೆಗೆ ಮಂಪರು ಪರೀಕ್ಷೆ ಮಾಡಿಸೋದು ಬಾಕಿಯಿದೆ. ಅದಕ್ಕೂ ಮುನ್ನ ಪಾಲಿಗ್ರಾಫ್ ಪರೀಕ್ಷೆ ಮಾಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

error: Content is protected !!