ಗುರುವಾಣಿ : ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ಪತ್ನಿಯ ಶೀಲ ಶಂಕಿಸಿ ಗಂಡನೊಬ್ಬ ಆಕೆಯನ್ನು ಕೊಂದು ನಾಲ್ಕು ವರ್ಷದ ಮಗನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಕೊಲೆಯಾಗಿರುವ ಮಹಿಳೆ ಮಧುಶ್ರಿ (25) ಎಂದು ತಿಳಿದುಬಂದಿದೆ. ಐದು ವರ್ಷದ ಹಿಂದೆ ಈಕೆಯ ಮದುವೆ ತಾಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ನಡೆದಿತ್ತು. ದಂಪತಿಗೆ ಒಬ್ಬ ಪುಟ್ಟ ಮಗನಿದ್ದಾನೆ.
ಮಧುಶ್ರೀ ಮತ್ತು ಮಂಜುನಾಥ್ ಕಳೆದ ಒಂದೂವರೆ ವರ್ಷಗಳಿಂದ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಇನ್ನು ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಡ್ಯದಿಂದಲೇ ಹೋಗಿ ಬರುತ್ತಿದ್ದ. ಕೆಲವೊಮ್ಮೆ ಬೆಂಗಳೂರಿನಲ್ಲೇ ಉಳಿಯುತ್ತಿದ್ದ. ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಬಂದಿದ್ದ ಮಂಜುನಾಥ್ ಪತ್ನಿ ಜತೆಗೆ ಜಗಳವಾಡಿದ್ದ ಎನ್ನಲಾಗಿದೆ.
ಪತ್ನಿಯ ಶೀಲ ಶಂಕಿಸುತ್ತಿದ್ದ ಆತ ಅದೇ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಮಂಜುನಾಥ್ ತನ್ನ ಪತ್ನಿ ಮಧುಶ್ರೀಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮಗ ಮನ್ವಿತ್ ಕರೆದುಕೊಂಡು ಪರಾರಿಯಾಗಿರುವ ಶಂಕೆ ಇದೆ.
ಬುಧವಾರ ಬೆಳಗ್ಗೆ ಮಧು ಎಂಬಾತ ಮನೆ ಬಳಿ ಬಂದಾಗ ಮಧುಶ್ರೀ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ನಾಗಮಂಗಲ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.