ಕ್ರೈಂ ಬ್ಯೂರೋ ವಿವೇಕವಾರ್ತೆ- ಹಾಸನದಲ್ಲಿ ಅಪರಿಚಿತನನ್ನು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಮೇಲೆ ಬಿಸಾಡಲು ಬಂದು ಹಂತಕರು ಸಿಕ್ಕಿಬಿದ್ದಾರೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ಶವವವನ್ನು ಹಳಿ ಮೇಲೆ ಬಿಸಾಕಲೆಂದು ಬಂದಂತಹ ಸಂದರ್ಭ ಶವದ ಸಮೇತ ಹಂತಕರ ಬುಲೆರೋ ವಾಹನ ಉರುಳಿ ಬಿದ್ದಿದೆ.
ಈ ವೇಳೆ ಸ್ಥಳೀಯರು ಅವರನ್ನು ಪೊಲಿಸರಿಗೆ ಒಪ್ಪಿಸಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75 ರ ಡಾಬಾ ಒಂದರಲ್ಲಿ ಕೆಲಸಮಾಡೋ ನೌಕರರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.