ಶವದ ಜೇಬಿನಲ್ಲಿದ್ದ ಬಸ್ ಟಿಕೆಟ್ ಪೊಲೀಸರನ್ನು ತಂದು ನಿಲ್ಲಿಸಿತು ಕೊಲೆಗಾರನ ಮನೆ ಮುಂದೆ ; ಹೇಗೆ ಗೊತ್ತಾ.?

Published on

spot_img
spot_img

ವಿವೇಕವಾರ್ತೆ : ಪವಿತ್ರ ಕ್ಷೇತ್ರವಾದ ಮಾಸ್ತಿಮನೆಯ ದೇವಿಮನೆ ಘಟ್ಟದಲ್ಲಿ ಒಂದು ಅನಾಥ ಶವ ಪತ್ತೆಯಾಗಿತ್ತು. ಆದ್ರೆ ಶವ ನೋಡಿದ ಪೊಲೀಸರಿಗೆ ಅದೊಂದು ಕೊಲೆ ಎಂದು ಸಂಶಯ ಪಟ್ಟಿದ್ದಾರೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಈ ಪವಿತ್ರ ಕ್ಷೇತ್ರದಲ್ಲಿ ತಂದು ಎಸೆದು ಹೋಗಿದ್ದಾರೆ ಅಂತ ಗೊತ್ತಾಗಿದೆ.

ಈ ಹಿನ್ನಲೆಯಲ್ಲಿ ಶವ ಪರೀಕ್ಷಿಸುವ ವೇಳೆ ಸತ್ತವನ ಜೇಬಿನಲ್ಲಿ ಬಸ್ ಟಿಕೇಟ್ ಒಂದು ಪತ್ತೆಯಾಗಿದೆ. ಅದೇ ಟಿಕೆಟ್ ಕೊಲೆಯಾದವನ ಪೂರ್ವಪರ ಹೇಳಿದೆ. ಅಷ್ಟೆ ಅಲ್ಲಾ ಆ ಟಿಕೆಟ್ ಪೊಲೀಸರು ಕೊಲೆಗಾರನ ಮನೆಗೆ ಬಂದು ನಿಲ್ಲುವಂತೆ ಮಾಡಿದೆ. ಶವದ ಜೇಬಿನಲ್ಲಿ ಸಿಕ್ಕ ಟಿಕೆಟ್ ಕೊಲೆಗಾರನನ್ನ ಜೈಲಿಗೆ ಕಳಿಸುವಂತೆಯೂ ಮಾಡಿದೆ.

ಇನ್ನು ಕೊಲೆಯಾದ ವ್ಯಕ್ತಿಯನ್ನು ಬಶೀರ್ ಎಂದು ಪೊಲೀಸರು ಗುರುತಿಸಿದ್ದು, ಕೊಲೆಗಾರ ಮತ್ಯಾರು ಅಲ್ಲಾ ಜೊತೆಯಲ್ಲಿ ಪ್ರಯಾಣಿಸಿದ್ದ ಸ್ನೇಹಿತನಾದ ಪರಶುರಾಮ.

ಕೊಲೆ ನಡೆದಿರುವುದಾರೂ ಯಾಕೆ.?

ಪ್ರಿಯಕರನಿಗಾಗಿ ಗಂಡನನ್ನ ಮುಗಿಸಲು ಪ್ಲಾನ್ ಮಾಡಿದ್ದೆ, ಬಶೀರನ ಪತ್ನಿ ರಾಜ್ಮಾ. ಪತಿಯನ್ನು ಮುಗಿಸಲು ಪರಶುರಾಮನ ಜೊತೆ ಕೂತು ಒಂದು ಸ್ಕೆಚ್ ರೆಡಿ ಮಾಡ್ತಾಳೆ. ಪ್ಲಾನ್ ರೆಡಿಯಾದ ಪರಿಣಾಮ ಪ್ರಿಯಕರನಿಗೆ 10 ಸಾವಿರ ಕೊಟ್ಟು ಗಂಡನನ್ನ ಮುಗಿಸಿ ಬಾ ಅಂತ ಕಳುಹಿಸುತ್ತಾಳೆ.

ಇನ್ನೂ ಸ್ನೇ ರಾಜ್ಮಾ ಹೇಳಿದಂತೆ ಸ್ನೇಹಿತನ ಮುಗಿಸಲು ನಿರ್ಧರಿಸೋ ಪರಶುರಾಮ ಬಶೀರ್,ಗೆ ಕರೆ ಮಾಡಿ ಮಂಗಳೂರಿಗೆ ಹೋಗಿ ಮಜಾ ಮಾಡಿ ಬರೋಣ ಬಾ ಅಂತ ಕರೆಯುತ್ತಾನೆ. ಸ್ನೇಹಿತ ಕರೆದಿದ್ದಾನೆ ಎಂದು ಬಶೀರ ಅವನ ಜೊತೆ ಬಸ್ ಹತ್ತೇಬಿಡ್ತಾನೆ.

ಮರಳಿ ಬರುವಾಗ ಎಣ್ಣೆ ಪಾರ್ಟಿ ಮಾಡೋಣ ಅಂತ ಹೇಳಿ ದೇವಿಮನೆ ಘಟ್ಟಕ್ಕೆ ಕರೆದ್ದೊಯ್ದು ಬಶೀರನಿಗೆ ಚೆನ್ನಾಗಿ ಕುಡಿಸಿ ಅಲ್ಲಿಯೇ ಆತನ ಕಥೆ ಮುಗಿಸುತ್ತಾನೆ.

Latest articles

ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ : ಪ್ರವೀಣ್ ಹಿರೇಮಠ ಹರ್ಷ

ವಿವೇಕವಾರ್ತೆ:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪವಿತ್ರ ಕಾರ್ತಿಕ ಮಾಸದ ಶನಿವಾರವಾದ ಇಂದು ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ...

ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

ವಿವೇಕವಾರ್ತೆ ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb...

ಬೆಂಗಳೂರು: ಜೈಲಿಗೆ ಹೋದ್ರೂ ಬಿಡಲಿಲ್ಲ ದಂಧೆ- ವೇಶ್ಯಾವಾಟಿಕೆಯೇ ಈತನ ಫುಲ್ ಟೈಂ ವರ್ಕ್

ವಿವೇಕವಾರ್ತೆ:- ಜೈಲಿಗೆ ಹೋದ್ರೂ ಈತ ಮಾತ್ರ ವೇಶ್ಯಾವಾಟಿಕೆ ದಂಧೆ ಬಿಡಲಿಲ್ಲ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡು ಬಿಟ್ಟಿದ್ದ....

ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

ವಿವೇಕವಾರ್ತೆ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ (Firecrackers) ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ (Uttar...
error: Content is protected !!