ವಿವೇಕ ವಾರ್ತೆ : ಯುವತಿಯೊಬ್ಬಳು ನಡು ರಸ್ತೆಯಲ್ಲಿಯೇ ಯುವಕನೋರ್ವನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಒಂದು ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ನಡೆದದಿಷ್ಟು : ಹಾಪುರ್ ಜಿಲ್ಲೆಯ ಪಂಚಾಯಿತಿಗೆ ಯುವತಿಯೊಬ್ಬಳು ಗ್ರಾಮದ ಯುವಕ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ. ಯುವತಿಯ ಸಮಸ್ಯೆಯನ್ನು ಪರಿಹರಿಸಲು ವಿಭಿನ್ನ ರೀತಿಯಲ್ಲಿ ತೀರ್ಪುನ್ನು ಪಂಚಾಯಿತಿ ನೀಡಿದೆ. ಅದೆನೆಂದರೆ, ಕಿರುಕುಳ ನೀಡಿದ ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಯುವತಿಗೆ ಸೂಚಿಸಿದೆ.
ಪಂಚಾಯತಿ ತೀರ್ಪಿನಂತೆ ಯುವತಿ ತನಗೆ ಕಿರುಕುಳ ನೀಡಿದ ಯುವಕನಿಗೆ ನಡುರಸ್ತೆಯಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕರ ಮುಂದೆಯೇ ಸಂಭವಿಸಿದೆ.
ಯುವತಿ ತನ್ನ ಚಪ್ಪಲಿಯನ್ನು ತೆಗೆದು ಯುವಕನಿಗೆ ಅನೇಕ ಬಾರಿ ಕಪಾಳಕ್ಕೆ ಹೊಡೆದಿದ್ದಾಳೆ. ಈ ಶಿಕ್ಷೆಯನ್ನು ಸಾರ್ವಜನಿಕರ ಮುಂದೆ ಮತ್ತು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ನಡೆಸಲಾಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
ಇನ್ನು ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬಹದ್ದೂರ್ಗಢ ಪೊಲೀಸ್ ಠಾಣೆಯ ಉಸ್ತುವಾರಿ ಸುಮಿತ್ ತೋಮರ್ ಹೇಳಿದ್ದಾರೆ,(ಏಜೆನ್ಸೀಸ್).
https://twitter.com/indinewsline/status/1692131644000645151?s=20