ವಿವೇಕವಾರ್ತೆ- ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಕೆಲವು ವಿಷಯಗಳ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಕಿಮ್ ಜಾಂಗ್ ಉನ್ ತಮ್ಮ ದೈನಂದಿನ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಯಾವಾಗಲೂ ಇರುತ್ತದೆ. ಅವರು ಯಾವ ವಸ್ತುಗಳನ್ನು ಬಳಸುತ್ತಾರೆ, ವಿಶೇಷವಾಗಿ ಗ್ಯಾಜೆಟ್‌ಗಳ ಬಗ್ಗೆ ಕುತೂಹಲ ಜನರಿಗೆ ಇದ್ದೇ ಇದೆ.
ಕಿಮ್ ಜಾಂಗ್ ಉನ್ ಯಾವ ಕಂಪನಿಯ ಮೊಬೈಲ್ ಬಳಸುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಅನೇಕರಿಗೆ ಇರುತ್ತದೆ. ಈ ನಿರ್ದಯಿ ಸರ್ವಾಧಿಕಾರಿ ಬಳಸಿದ ಸ್ಮಾರ್ಟ್ ಫೋನ್ ರಹಸ್ಯ ಇತ್ತೀಚೆಗೆ ಬಯಲಾಗಿದೆ. ಹಾಗಿದ್ರೆ ಇವರು ಬಳಸುತ್ತಿರುವ ಮೊಬೈಲ್ ಯಾವುದೆಂದು ತಿಳಿಯುವ ಕುತೂಹಲ ನಿಮಗಿದ್ರೆ ಇಲ್ಲಿದೆ ಮಾಹಿತಿ.
ಕಿಮ್ ಜಾಂಗ್ ಉನ್ ಸ್ಯಾಮ್‌ಸಂಗ್ ಝಡ್ ಫ್ಲಿಪ್ ಅಥವಾ ಹುವಾವೆ ಪಾಕೆಟ್ ಎಸ್ ಫೋನ್ ಬಳಸುತ್ತಿದ್ದಾರೆ ಎಂದು ಉತ್ತರ ಕೊರಿಯಾ ಸರ್ಕಾರ ಬಿಡುಗಡೆ ಮಾಡಿದ ಫೋಟೋ ಬಹಿರಂಗಪಡಿಸಿದೆ. ಬುಧವಾರ, ಉತ್ತರ ಕೊರಿಯಾ ಹ್ವಾಸಾಂಗ್-18 ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಿತು.
ಉತ್ತರ ಕೊರಿಯಾದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್ ಈ ಉಡಾವಣೆಯ ಫೋಟೋವನ್ನು ಬಿಡುಗಡೆ ಮಾಡಿದೆ. ಈ ಫೋಟೋದಲ್ಲಿ ಕಿಮ್ ಜಾಂಗ್ ಉನ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಕಪ್ಪು ಬಣ್ಣದ ಮುಚ್ಚಿದ ಮಡಚಬಹುದಾದ ಫೋನ್ ಅನ್ನು ಮುಂಭಾಗದ ಮೇಜಿನ ಮೇಲೆ ಇರಿಸಲಾಗಿದೆ.
ಫೋನ್ ಎಲ್ಲಿಂದ ಬಂತು? ಉತ್ತರ ಕೊರಿಯಾದ ಮೇಲೆ ಯುಎನ್ ನಿರ್ಬಂಧಗಳಿಂದಾಗಿ ಕಿಮ್ ಜಾಂಗ್ ಆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಮದು-ರಫ್ತು ಮಾಡಲು ಸಾಧ್ಯವಿಲ್ಲ. ಕಿಮ್ ಜಾಂಗ್ ಉನ್ ಬಳಿ ಸ್ಯಾಮ್‌ಸಂಗ್ ಅಥವಾ ಹುವಾವೇ ಫೋನ್ ಇದೆಯೇ ಎಂಬ ಪ್ರಶ್ನೆಯನ್ನು ದಕ್ಷಿಣ ಕೊರಿಯಾದ ಪತ್ರಿಕೆಯೊಂದು ಎತ್ತಿದೆ.
ಉತ್ತರ ಕೊರಿಯಾದಲ್ಲಿ ಸ್ಮಾರ್ಟ್‌ಫೋನ್‌ಗಳು ಚೀನಾದಿಂದ ಅಕ್ರಮವಾಗಿ ಬರುತ್ತಿವೆ ಎಂದು ಪತ್ರಿಕೆ ಹೇಳುತ್ತದೆ. ಕಿಮ್ ಜಾಂಗ್ ಉನ್ ಗೆ ಗ್ಯಾಜೆಟ್‌ಗಳೆಂದರೆ ತುಂಬಾ ಇಷ್ಟ. ಈ ಹಿಂದೆಯೂ, ಅವರು ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಸೇರಿದಂತೆ ಅನೇಕ ಆಯಪಲ್ ಗ್ಯಾಜೆಟ್‌ಗಳೊಂದಿಗೆ ಕಾಣಿಸಿಕೊಂಡಿದ್ದಾರೆ.